ನಾನೂ ಕಿರುಕುಳ ಅನುಭವಿಸಿದ್ದೆ ಎಂದ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ

ಭಾರತದಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಶೋಷಿತ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. #ಮಿಟೂ ಅಭಿಯಾನಕ್ಕೆ ಈಗ ಹೊಸ ಸೇರ್ಪಡೆ ಭಾರತದ ಯಶಸ್ವಿ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರಲ್ಲಿ ಒಬ್ವರಾದ ಜ್ವಾಲಾ ಗುಟ್ಟಾ. ಆದರೆ, ಅವರು ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಲೈಂಗಿಕ ದೌರ್ಜನ್ಯದ ಕೂಗೆಬ್ಬಿಸಿದ #ಮಿಟೂ ಅಭಿಯಾನ ಭಾರತದಲ್ಲಿಯೂ ತೀವ್ರ ಸ್ವರೂಪ ಪಡೆದುಕೊಂಡಿದೆ. ಶೋಷಣೆಗೆ ಗುರಿಯಾದವರು ಒಬ್ಬೊಬ್ಬರಾಗಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದು, ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡ ‘ಮಾನಸಿಕ ಕಿರುಕುಳ’ ಅನುಭವಿಸಿದ್ದಾಗಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಆದಾಗ್ಯೂ, ೩೫ರ ಹರೆಯದ ಜ್ವಾಲಾ ಯಾರಿಂದ ತಾನು ಮಾನಸಿಕ ಕಿರುಕುಳ ಅನುಭವಿಸಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಕೇವಲ ತನ್ನನ್ನು ಮಾತ್ರವಲ್ಲದೆ, ತನ್ನ ಪೋಷಕರನ್ನು ಕೂಡ ಬೆದರಿಸಿ ಕಿರುಕುಳ ನೀಡಲಾಗಿತ್ತು ಎಂದು ಕಾಮನ್ವೆಲ್ತ್ ಸ್ವರ್ಣ ಪದಕ ವಿಜೇತೆ ಜ್ವಾಲಾ ಗುಟ್ಟಾ ದೂರಿದ್ದಾರೆ.

“ಮಾನಸಿಕ ಕಿರುಕುಳಕ್ಕೆ ಒಳಗಾದದ್ದರ ಕುರಿತು ಮಾತನಾಡಲು ನಾನು # ಮಿ ಟೂ ಅಭಿಯಾನವನ್ನೇ ವೇದಿಕೆಯಾಗಿಸಿಕೊಳ್ಳುತ್ತಿದ್ದೇನೆೆ,’’ ಎಂದು ಜ್ವಾಲಾ ಟ್ವೀಟಿಸಿದ್ದಾರೆ. “೨೦೦೬ರಲ್ಲಿ ಈ ವ್ಯಕ್ತಿ ಮುಖ್ಯಸ್ಥನಾದಾಗ ನಾನೋರ್ವ ರಾಷ್ಟ್ರೀಯ ಚಾಂಪಿಯನ್ ಆಗಿದ್ದರೂ, ನನ್ನನ್ನು ರಾಷ್ಟ್ರೀಯ ತಂಡದಿಂದ ದೂರ ಇಟ್ಟಿದ್ದ. ರಿಯೋ ಒಲಿಂಪಿಕ್ಸ್ ಕೂಟದಿಂದ ತವರಿಗೆ ಮರಳುವಷ್ಟರಲ್ಲಿ ನನ್ನನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿತ್ತು. ಇದೊಂದೇ ಕಾರಣಕ್ಕಾಗಿ ನಾನು ಆಡುವುದನ್ನು ನಿಲ್ಲಿಸಬೇಕಾಯಿತು,’’ ಎಂದು ಜ್ವಾಲಾ ಹೇಳಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಲೈಂಗಿಕ ದುರುಳರನ್ನು ಕಾಡುತ್ತಿರುವ #MeToo ಬಾಣ

“ನನ್ನನ್ನು ಮಣಿಸಲು ಈ ವ್ಯಕ್ತಿಗೆ ಸಾಧ್ಯವಾಗದೆ ಹೋದಾಗ, ಆತ ನನ್ನ ಪೋಷಕರನ್ನು ಗುರಿಯಾಗಿಸಿಕೊಂಡ. ಅವರಿಗೆ ಒಂದೇ ಸಮನೆ ಕಿರುಕುಳ ನೀಡಿದ. ಪ್ರತಿಯೊಂದು ಸಂದರ್ಭದಲ್ಲೂ ಆತನಿಗೆ ನನಗೆ ಮತ್ತು ನನ್ನ ಮನೆಯವರಿಗೆ ಕಿರುಕುಳ ನೀಡುವುದೇ ಕಾಯಕವಾಯಿತು. ಮೇಲಾಗಿ, ನನ್ನೊಂದಿಗೆ ಮಿಶ್ರ ಡಬಲ್ಸ್ ಆಡುವಾತನಿಗೂ ಬೆದರಿಕೆ ಒಡ್ಡಿದ. ಅಂತಿಮವಾಗಿ, ಆತ ನನ್ನನ್ನು ರಾಷ್ಟ್ರೀಯ ತಂಡದಿಂದಲೇ ಕೈಬಿಟ್ಟ,’’ ಎಂದು ಜ್ವಾಲಾ ಟ್ವೀಟಿಸಿದ್ದಾರೆ.

ಅರ್ಜುನ ಕ್ರೀಡಾ ಪ್ರಶಸ್ತಿ ವಿಜೇತೆ ಜ್ವಾಲಾ, ೨೦೧೬ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಷ್ಯಾಡ್‌ನಲ್ಲಿ ಅರ್ಜುನ ಪ್ರಶಸ್ತಿ ಗೆದ್ದಿದ್ದರು. ಇನ್ನು, ಕಾಮನ್ವೆಲ್ತ್ ಕೂಟದಲ್ಲಿ ಒಂದು ಸ್ವರ್ಣ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದರು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More