ಪ್ಯಾರಾ ಏಷ್ಯಾಡ್ | ಜಾವೆಲಿನ್ ಪಟು ಸುಂದರ್ ಸಿಂಗ್‌ಗೆ ರಜತ ಪದಕ

ಜಕಾರ್ತದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯಾಡ್ ಕ್ರೀಡಾಕೂಟದಲ್ಲಿ ಪ್ಯಾರಾಥ್ಲೀಟ್ ಸುಂದರ್ ಸಿಂಗ್ ಬೆಳ್ಳಿ ಪದಕ ಗೆದ್ದರು. ಆದರೆ, ಡಬಲ್ ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ ಹಾಗೂ ಪ್ರಸಕ್ತ ಕೂಟವೇ ತನ್ನ ಕೊನೆಯ ಆಟ ಎಂದಿದ್ದ ದೇವೇಂದ್ರ ಜಜಾರಿಯಾ ನಿರಾಸೆ ಮೂಡಿಸಿದರು

ಪ್ಯಾರಾ ಏಷ್ಯಾಡ್‌ನಲ್ಲಿ ಭಾರತ ಮತ್ತೊಂದು ಪದಕ ಪಡೆಯಲು ಸುಂದರ್ ಸಿಂಗ್ ಗುರ್ಜಾರ್ ಯಶಸ್ವಿಯಾಗಿದ್ದಾರೆ. ಪುರುಷರ ಎಫ್೪೬ ವಿಭಾಗದಲ್ಲಿ ಎರಡು ಬಾರಿಯ ಪ್ಯಾರಾಲಿಂಪಿಕ್ ಸ್ವರ್ಣ ಪದಕ ವಿಜೇತ ದೇವೇಂದ್ರ ಜಜಾರಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದನ್ನು ಮರೆಸಿದ ಸುಂದರ್ ಸಿಂಗ್, ಎರಡನೇ ಸ್ಥಾನ ಗಳಿಸಿ ರಜತ ಪದಕ ಪಡೆದರು.

ಇದೇ ವಿಭಾಗದಲ್ಲಿ ರಿಂಕು ಕಂಚಿನ ಪದಕ ಜಯಿಸಿದರು. ಎಫ್‌೪೬ ವಿಭಾಗದಲ್ಲಿ ಬರುವ ಅಥ್ಲೀಟ್‌ಗಳು ಅಂಗ ದೌರ್ಬಲ್ಯತೆ, ದುರ್ಬಲ ಮಾಂಸಖಂಡದ ಶಕ್ತಿಹೀನತೆಗೆ ಒಳಗಾಗಿರುತ್ತಾರೆ. ಇನ್ನು, ಪುರುಷರ ೪೦೦ ಮೀಟರ್ ಟಿ೧೩ ವಿಭಾಗದಲ್ಲಿ ಅವ್ನಿಲ್ ಕುಮಾರ್ ಮೂರನೇ ಸ್ಥಾನ ಗಳಿಸಿದರು. ಟಿ೧೩ ವಿಭಾಗದಲ್ಲಿನ ಅಥ್ಲೀಟ್‌ಗಳು ದೃಷ್ಟಿದೋಷದಿಂದ ಕೂಡಿರುತ್ತಾರೆ.

ಜಾವೆಲಿನ್ ಎಸೆತದಲ್ಲಿ ಗುರ್ಜರ್ ೬೧.೩೩ ಮೀಟರ್ ದೂರದ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು. ಐದನೇ ಯತ್ನದಲ್ಲಿ ಗುರ್ಜರ್ ಎರಡನೇ ಸ್ಥಾನ ಗಳಿಸಿದರು. ಕೂಟದಲ್ಲಿ ಭಾಗವಹಿಸುವ ಮುನ್ನ ಫಿನ್‌ಲ್ಯಾಂಡ್‌ನಲ್ಲಿ ಗುರ್ಜರ್ ೨೨ ದಿನಗಳ ಕಾಲ ತರಬೇತಿ ಪಡೆದಿದ್ದರು. ಇನ್ನು, ಇದೇ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದ ರಿಂಕು ವೈಯಕ್ತಿಕ ೬೦.೯೨ ಮೀಟರ್ ಶ್ರೇಷ್ಠ ಸಾಧನೆಯೊಂದಿಗೆ ತೃತೀಯ ಸ್ಥಾನ ಗಳಿಸಿದರು.

ಈ ವಿಭಾಗದಲ್ಲಿ ಶ್ರೀಲಂಕಾ ಅಥ್ಲೀಟ್ ಚಿನ್ನದ ಪದಕ ಜಯಿಸಿದರು. ೬೧.೮೪ ಮೀಟರ್ ದೂರ ಜಾವೆಲಿನ್ ಎಸೆದ ಶ್ರೀಲಂಕಾ ಅಥ್ಲೀಟ್ ದಿನೇಶ್ ಹೆರಾತ್, ಕೂಟ ಮತ್ತು ಏಷ್ಯಾಡ್ ದಾಖಲೆಯೊಂದಿಗೆ ಮೂರನೇ ಸ್ಥಾನ ಪಡೆದರು. ಆದರೆ, ಕಳೆದ ಬಾರಿಯ ಇಂಚಾನ್ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ದೇವೇಂದ್ರ ಜಜಾರಿಯಾ ಈ ಬಾರಿ ವೈಫಲ್ಯ ಅನುಭವಿಸಿದರು.

ಇದನ್ನೂ ಓದಿ : ಡೋಪಿಂಗ್: ಜಾವೆಲಿನ್ ಪಟು ದೇವೇಂದ್ರ ಸಿಂಗ್ ತಾತ್ಕಾಲಿಕ ಅಮಾನತು

ಪದ್ಮಶ್ರೀ, ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಜಜಾರಿಯಾ, ಈ ಋತುವಿನಲ್ಲೇ ಶ್ರೇಷ್ಠ ಸಾಧನೆ ಎನ್ನಬಹುದಾದ ೫೯.೧೭ ಮೀಟರ್ ಸಾಮರ್ಥ್ಯ ತೋರಿದರೂ, ಪದಕ ಗೆಲ್ಲುವಲ್ಲಿ ವಿಫಲವಾದರು. ಇನ್ನುಳಿದಂತೆ, ಪುರುಷರ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅವ್ನಿಲ್ ಕುಮಾರ್ ೫೨ ಸೆಕೆಂಡುಗಳ ಸಾಧನೆಯೊಂದಿಗೆ ಕಂಚು ಪಡೆದರೆ, ಇರಾನ್‌ನ ಓಮಿದ್ ಜಾರಿಫ್‌ಸನಾಯೆ ೫೧.೪೧ ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರು. ಆದರೆ, ಭಾರತೀಯ ಅಥ್ಲೀಟ್ ಕುಮಾರ್ ಕೇವಲ ಒಂದು ಸೆಕೆಂಡಿನ ಅಂತರದಿಂದ ಬೆಳ್ಳಿ ಪದಕದಿಂದ ವಂಚಿತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More