ಯುವ ಒಲಿಂಪಿಕ್ಸ್ | ಬಂಗಾರದ ಸೌರಭ ಬೀರಿದ ಹದಿನಾರರ ಹರೆಯದ ಚೌಧರಿ

ಇಂಡೋನೇಷ್ಯಾದಲ್ಲಿ ನಡೆದ ಹದಿನೆಂಟನೇ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಯುವ ಶೂಟರ್ ಸೌರಭ್ ಚೌಧರಿ, ಯೂತ್ ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದು ಸಂಭ್ರಮಿಸಿದರು. ಪುರುಷರ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮೀರತ್ ಮೂಲದ ಈ ಗುರಿಕಾರ ಮೊದಲ ಸ್ಥಾನ ಪಡೆದರು

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇದೇ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಏಷ್ಯಾ ಕ್ರೀಡಾಕೂಟ ಮತ್ತು ಜೂನಿಯರ್ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲೇ ಚಾಂಪಿಯನ್ ಆಗಿ ಮೆರೆದ ಸೌರಭ್, ಇದೀಗ ಯುವ ಒಲಿಂಪಿಕ್ಸ್ ಕೂಟದಲ್ಲಿ ಹ್ಯಾಟ್ರಿಕ್ ಪ್ರದರ್ಶನ ನೀಡಿದ್ದಾರೆ.

ಎಂಟು ಮಂದಿ ಗುರಿಕಾರರಿದ್ದ ಫೈನಲ್‌ನಲ್ಲಿ ಸೌರಭ್ ೨೪೪.೨ ಪಾಯಿಂಟ್ಸ್ ಕಲೆಹಾಕಿ ಸ್ವರ್ಣ ಪದಕ ಜಯಿಸಿದರು. ಮೀರತ್‌ನ ಕಲೀನಾ ಹಳ್ಳಿಯ ಸೌರಭ್, ಈಗಾಗಲೇ ಜೂನಿಯ ಕಿರಿಯರ ಫೈನಲ್‌ನಲ್ಲಿ ೨೪೫.೫ ಪಾಯಿಂಟ್ಸ್‌ಗಳ ವಿಶ್ವ ದಾಖಲೆ ಬರೆದಿದ್ದಾರೆ. ಬುಧವಾರ (ಅ. ೧೦) ನಡೆದ ಶೂಟಿಂಗ್‌ನಲ್ಲಿನ ಸ್ಕೋರ್‌ಗಿಂತಲೂ ೧.೯ ಪಾಯಿಂಟ್ಸ್ ಮುನ್ನಡೆಯದ್ದು ಎಂಬುದು ಗಮನಾರ್ಹ. ಆದಾಗ್ಯೂ, ಮತ್ತೊಮ್ಮೆ ೦.೬ ಪಾಯಿಂಟ್ಸ್ ಸಾಧನೆಯಿಂದ ಸೌರಭ್ ವಿಶ್ವದಾಖಲೆ ಬರೆದರಾದರೂ, ಕಿರಿಯರ ವಿಭಾಗದಲ್ಲಿನ ಈ ಸಾಧನೆಯನ್ನು ಹಿರಿಯರ ದಾಖಲೆಯಲ್ಲಿ ಪರಿಗಣಿಸಿಲ್ಲ.

ಸೌರಭ್‌ಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಕೊರಿಯಾ ಶೂಟರ್ ಸಂಗ್ ಯುನ್ಹೊ (೨೩೬.೭) ಅಂತಿಮವಾಗಿ ೭.೫ ಪಾಯಿಂಟ್ಸ್ ಅಂತರದಿಂದ ಬೆಳ್ಳಿ ಪದಕಕ್ಕೆ ತೃಪ್ತವಾದರು. ಇನ್ನು ಈ ವಿಭಾಗದಲ್ಲಿನ ಮೂರನೇ ಸ್ಥಾನ ಸ್ವಿಟ್ಜರ್ಲೆಂಡ್‌ನ ಜೇಸನ್ ಸೊಲಾರಿ (೨೧೫.೬) ಪಾಲಾಯಿತು. ಸೌರಭ್ ಚಿನ್ನದ ಸಾಧನೆಯೊಂದಿಗೆ ಪ್ರಸ್ತುತ ಕೂಟದಲ್ಲಿ ಫೈನಲ್ ತಲುಪಿದ ಎಲ್ಲ ನಾಲ್ವರು ಗುರಿಕಾರರೂ ಚಿನ್ನ ಗೆದ್ದದ್ದು ವಿಶೇಷ. ಆ ಮೂಲಕ ಶೇ. ೧೦೦ರಷ್ಟು ಉತ್ತಮ ಫಲಿತಾಂಶ ನೀಡುವಲ್ಲಿ ಶೂಟರ್‌ಗಳು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಜಕಾರ್ತ ಏಷ್ಯಾಡ್‌ನಲ್ಲಿ ಚಿನ್ನದ ಸೌರಭ ಬೀರಿದ ಹದಿನಾರರ ಕಿಶೋರ 

ಇನ್ನು, ಶಾನು ತುಷಾರ್ ಮಾನೆ ಹಾಗೂ ಮೆಹುಲಿ ಘೋಷ್ ಕ್ರಮವಾಗಿ ಪುರುಷರ ಹಾಗೂ ವನಿತೆಯರ ೧೦ ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಬೆಳ್ಳಿ ಗೆದ್ದರೆ, ಮನು ಭಾಕರ್ ದಿನದ ಹಿಂದಷ್ಟೇ ವನಿತೆಯರ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಬುಧವಾರ ಸೌರಭ್ ಅರ್ಹತಾ ಸುತ್ತಿನಲ್ಲಿ ೫೮೦ ಪಾಯಿಂಟ್ಸ್ ಸ್ಕೋರ್ ಮಾಡಿ ಫೈನಲ್‌ಗೆ ತಲುಪಿದರು. ಗುರಿ ಇಡುವ ಹಂತದಲ್ಲಿ ಎರಡು ಬಾರಿ ಸೌರಭ್ ೯೭ ಮತ್ತು ೧೦೦ ಸ್ಕೋರ್ ಮಾಡಿದ್ದು ಗಮನೀಯ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More