ಶಾಂಘೈ ಮಾಸ್ಟರ್ಸ್ | ಫೆಡರರ್‌ಗೆ ಆಘಾತ, ಫೈನಲ್‌ಗೆ ಜೊಕೊವಿಚ್ ದಾಪುಗಾಲು

ಹಾಲಿ ಚಾಂಪಿಯನ್ ರೋಜರ್ ಫೆಡರರ್ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಆದರೆ, ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಸೆಮಿಫೈನಲ್‌ನಲ್ಲಿ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮಣಿಸಿದ ನೊವಾಕ್ ಜೊಕೊವಿಚ್ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟರು

ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಮತ್ತು ರೋಜರ್ ಫೆಡರರ್ ಕಾದಾಡುತ್ತಾರೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಸೆಮಿಫೈನಲ್‌ನಲ್ಲೇ ಸೋತು ನಿರ್ಗಮಿಸಿದರು. ಇದು ಜೊಕೊವಿಚ್ ಮತ್ತು ಫೆಡರರ್ ನಡುವಣದ ಕಾದಾಟದವನ್ನು ಕಣ್ತುಂಬಿಕೊಳ್ಳಬೇಕೆಂದು ತವಕಿಸುತ್ತಿದ್ದವರನ್ನು ಭ್ರಮನಿರಸನಗೊಳಿಸಿದೆ.

ಶನಿವಾರ (ಅ.೧೩) ನಡೆದ ಅಂತಿಮ ನಾಲ್ಕರ ಘಟ್ಟದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಫೆಡರರ್ ನಿರಾಸೆ ಅನುಭವಿಸಿದರೆ, ಹದಿನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ನೊವಾಕ್ ಜೊಕೊವಿಚ್ ಜಯಭೇರಿ ಬಾರಿಸಿ ಫೈನಲ್‌ಗೆ ಮುನ್ನಡೆದರು. ಆದರೆ, ಆನಂತರದಲ್ಲಿ ನಡೆದ ನಾಲ್ಕರ ಘಟ್ಟದ ಎರಡನೇ ಪಂದ್ಯದಲ್ಲಿ ಸ್ವಿಸ್ ಮಾಸ್ಟರ್ ರೋಜರ್ ಫೆಡರರ್, ಕ್ರೊವೇಷ್ಯಾ ಆಟಗಾರ ಬೊರ್ನಾ ಕೊರಿಕ್ ವಿರುದ್ಧ ನೇರ ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿದರು.

ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್, ಕೇವಲ ಒಂದು ತಾಸಿನಲ್ಲೇ ಸೆಮಿಫೈನಲ್ ಸವಾಲನ್ನು ಮೆಟ್ಟಿನಿಂತರು. ಜರ್ಮನಿಯ ಯುವ ಆಟಗಾರ ಹಾಗೂ ವಿಶ್ವದ ಐದನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೇವ್ ಎದುರು ೬-೨, ೬-೧ ನೇರ ಸೆಟ್‌ಗಳಲ್ಲಿ ಜೊಕೊವಿಚ್ ಜಯಭೇರಿ ಬಾರಿಸಿದರು. ಎರಡನೇ ಶ್ರೇಯಾಂಕಿತ ಆಟಗಾರ ಜೊಕೊವಿಚ್, ಜ್ವೆರೇವ್ ವಿರುದ್ಧದ ಈ ಗೆಲುವಿನೊಂದಿಗೆ ಈ ಋತುವಿನ ತನ್ನ ಗೆಲುವಿನ ಓಟವನ್ನು ೧೭ಕ್ಕೆ ವಿಸ್ತರಿಸಿದರು.

ಇದನ್ನೂ ಓದಿ : ಅಮೆರಿಕ ಓಪನ್ ಟೆನಿಸ್: ಪ್ರೀಕ್ವಾರ್ಟರ್‌ನಲ್ಲೇ ಮುಗ್ಗರಿಸಿದ ಫೆಡರರ್

ಫೆಡರರ್‌ ಪರಾಭವ

ಮತ್ತೊಮ್ಮೆ ಶಾಂಘೈನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊತ್ತಿದ್ದ ಸ್ವಿಡ್ಜರ್ಲೆಂಡ್ ಆಟಗಾರ ರೋಜರ್ ಫೆಡರರ್‌ಗೆ ಬೊರ್ನಾ ಕೊರಿಕ್ ಆಘಾತ ನೀಡಿದರು. ಅನುಭವಿ ಆಟಗಾರನ ಎದುರು ನಿರ್ಭಿಡೆ ಆಟವಾಡಿದ ಕೊರಿಕ್, ೬-೪, ೬-೪ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಶುರುವಿನಿಂದಲೇ ಆಕ್ರಮಣಕಾರಿ ಆಟವಾಡಿದ ಕೊರಿಕ್, ಪಂದ್ಯದ ಯಾವುದೇ ಹಂತದಲ್ಲಿಯೂ ಫೆಡರರ್ ಚೇತರಿಸಿಕೊಳ್ಳಲು ಬಿಡಲಿಲ್ಲ. ಎರಡನೇ ಸೆಟ್‌ನಲ್ಲಿ ೬-೨ ಅಂತರದಿಂದ ಗೆಲುವು ಸಾಧಿಸಬಹುದಿತ್ತಾದರೂ, ಫೆಡರರ್ ಎರಡು ಗೇಮ್‌ಗಳನ್ನು ಗೆಲ್ಲಲು ಕೊರಿಕ್ ಎಸಗಿದ ಪ್ರಮಾದ ಕಾರಣವಾಯಿತು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More