ಭಾರತದ ಸರ್ವಾಧಿಕ ವಿಕೆಟ್‌ಧಾರಿ ಅನಿಲ್ ಕುಂಬ್ಳೆಗೆ ನಲವತ್ತೆಂಟರ ಸಂಭ್ರಮ!

ಜಿಮ್ ಲೇಕರ್ ಬಳಿಕ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ೧೦ ವಿಕೆಟ್ ಪಡೆದ ಬೌಲರ್, ಭಾರತಕ್ಕೆ ಅತಿಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಬುಧವಾರ (ಅ.೧೭) ೪೮ನೇ ವರ್ಷಕ್ಕೆ ಕಾಲಿರಿಸಿದರು. ವೃತ್ತಿಬದುಕಿನ ಮೂರು ಪ್ರಮುಖ ವಿಡಿಯೋ ತುಣುಕುಗಳು ಇಲ್ಲಿವೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆಯ ಹುಟ್ಟುಹಬ್ಬಕ್ಕೆ ಮಾಜಿ ಕ್ರಿಕೆಟಿಗರು ಶುಭಾಶಯದ ಸುರಿಮಳೆಗರೆದಿದ್ದಾರೆ. ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್, ಮೊಹಮದ್ ಕೈಫ್, ಹೇಮಾಂಗ್ ಬದಾನಿ, ಅಜಿತ್ ಅಗರ್ಕರ್ ಮುಂತಾದವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಕುಂಬ್ಳೆಗೆ ಶುಭಾಶಯ ಕೋರಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ, ಏಕದಿನ ಪಂದ್ಯದಲ್ಲೂ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿರುವ ಕುಂಬ್ಳೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಧಾರಿಗಳಾದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (೮೦೦), ಆಸ್ಟ್ರೇಲಿಯಾದ ಶೇನ್ ವಾರ್ನ್ (೭೦೮) ನಂತರದ ಸ್ಥಾನದಲ್ಲಿದ್ದಾರೆ. ಕೇವಲ ೧೩೯ ಟೆಸ್ಟ್‌ಗಳಿಂದ ೬೧೯ ವಿಕೆಟ್ ಪಡೆದಿರುವ ಕುಂಬ್ಳೆ, ೮ ಬಾರಿ ಹತ್ತು ಮತ್ತು ೩೫ ಬಾರಿ ಐದು ವಿಕೆಟ್‌ಗಳ ಸಾಧಕನೆನಿಸಿದ್ದಾರೆ. ೨೭೧ ಏಕದಿನ ಪಂದ್ಯಗಳನ್ನಾಡಿರುವ ಕುಂಬ್ಳೆ ೩೩೭ ವಿಕೆಟ್ ಗಳಿಸಿದ್ದು ೨ ಬಾರಿ ಐದು ವಿಕೆಟ್‌ಗಳ ಸಾಧನೆ ಇದರಲ್ಲಿ ಸೇರಿದೆ.

ಟೆಸ್ಟ್ ಇನ್ನಿಂಗ್ಸ್‌ನಲ್ಲಿ ೧೦ ವಿಕೆಟ್ ಪಡೆದ ಕ್ಷಣ

ವೃತ್ತಿಬದುಕಿನಲ್ಲಿ ದಾಖಲಿಸಿದ ಏಕೈಕ ಶತಕ!

View this post on Instagram

He was Silent. He was Calm. But when the chips were down and when his team was in need of MOTIVATION, there was not a bigger fighter than ANIL KUMBLE! 🙌🏼 . Throwback to 2008, when India lost that infamous Sydney Test against Australia.. Apart from the terrible umpiring that we witnessed in that game, Harbhajam Singh and Andrew Symonds too were in the news for all the wrong reasons. . Where Harbhajan received a ban for 3 tests, Symonds got away without any major punishment whatsoever!! . And this ladies and gentlemen didn't go down too well with both the Indian Public and of course the Indian Captain. . And so come the 3rd Test at Perth, this is what JUMBO had in store for Andrew Symonds!! 👊🏼 😎 . India eventually did win that test match and came back into the series when all odds were against them.. . And CAPTAIN KUMBLE proved yet again that he would always STAND TALL for his country, especially in times when they really needed somebody to put their hands up! 👏🏼 . . . #HappyBirthday #AnilKumble! 💙

A post shared by CricShots (@cricshots) on

ಇದನ್ನೂ ಓದಿ : ಬಿಸ್ಮಿಲ್ಲಾ ಖಾನ್ ಜನ್ಮದಿನ | ಮೇರು ಸಂಗೀತಗಾರನ ಮನೆಗೆ ಭೇಟಿ ನೀಡಿದ ಘಳಿಗೆ

ಆಂಡ್ರ್ಯೂ ಸೈಮಂಡ್ಸ್‌ಗೆ ಎದಿರೇಟು ನೀಡಿದ ಕುಂಬ್ಳೆಯ ಕುಣಿದಾಟ!

ಕುಂಬ್ಳೆ ವೃತ್ತಿಬದುಕಿನ ಕೆಲವು ಮಹತ್ವದ ಅಂಕಿಅಂಶ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More