ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ

ಈ ಋತುವಿನ ಡಬ್ಲ್ಯೂಟಿಎ ಟೂರ್ ಫೈನಲ್ಸ್ ಪಂದ್ಯಾವಳಿಯಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಸತತ ೨ನೇ ಸೋಲುಂಡರು. ಮಂಗಳವಾರ (ಅ. ೨೩) ನಡೆದ ಗುಂಪು ಹಂತದಲ್ಲಿನ ಎರಡನೇ ಪಂದ್ಯದಲ್ಲಿ ಕೆರೋಲಿನ್ ವೋಜ್ನಿಯಾಕಿ ಎದುರು ಮಾಜಿ ವಿಂಬಲ್ಡನ್ ಚಾಂಪಿಯನ್ ಸೋಲಪ್ಪಿದರು

ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಡಬ್ಲ್ಯೂಟಿಎ ಫೈನಲ್ಸ್ ಪಂದ್ಯಾವಳಿಯಲ್ಲಿ ತೀವ್ರ ನಿರಾಸೆ ಅನುಭವಿಸಿದ್ದಾರೆ. ೨೦೧೧, ೨೦೧೪ರ ವಿಂಬಲ್ಡನ್ ಚಾಂಪಿಯನ್ ಎದುರು ಈ ಸಾಲಿನ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕೆರೋಲಿನ್ ವೋಜ್ನಿಯಾಕಿ ೭-೫, ೩-೬, ೬-೨ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಕ್ವಿಟೋವಾ, ಮೊದಲ ಪಂದ್ಯದಲ್ಲಿ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ವಿರುದ್ಧ ೩-೬, ೩-೬ ಎರಡು ನೇರ ಸೆಟ್‌ಗಳಲ್ಲಿ ಪರಾಭವಗೊಂಡಿದ್ದರು.

ಇತ್ತ, ವೋಜ್ನಿಯಾಕಿ ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಸೋಲಿನಿಂದ ಪುಟಿದೆದ್ದು ನಿಂತು ಟೂರ್ನಿಯಲ್ಲಿ ಜಯದ ಖಾತೆ ತೆರೆದರು. ಭಾನುವಾರ (ಅ. ೨೧) ನಡೆದಿದ್ದ ಮೊದಲ ಪಂದ್ಯದಲ್ಲಿ ವೋಜ್ನಿಯಾಕಿ ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ೨-೬, ೪-೬ ಎರಡು ನೇರ ಸೆಟ್‌ಗಳಲ್ಲಿ ಸೋಲನುಭವಿಸಿದ್ದರು. ಹೀಗಾಗಿ, ಕ್ವಿಟೋವಾ ವಿರುದ್ಧದ ಇಂದಿನ ಪಂದ್ಯ ವೋಜ್ನಿಯಾಕಿಗೆ ಮಹತ್ವಪೂರ್ಣವಾಗಿ ಪರಿಣಮಿಸಿತ್ತು.

ಹಾಲಿ ಚಾಂಪಿಯನ್ ಕೂಡ ಆಗಿರುವ ವೋಜ್ನಿಯಾಕಿ, ಸರಿಸುಮಾರು ಎರಡೂವರೆ ತಾಸಿನ ಪಂದ್ಯದಲ್ಲಿ ಕ್ವಿಟೋವಾ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾದರು. ಈ ಗೆಲುವಿನೊಂದಿಗೆ ನಾಕೌಟ್ ಘಟ್ಟಕ್ಕೇರುವ ಅವಕಾಶವನ್ನು ವೋಜ್ನಿಯಾಕಿ ಸೃಷ್ಟಿಸಿಕೊಂಡರು. ಆದರೆ, ವೋಜ್ನಿಯಾಕಿಗೂ ಮಣಿದ ೨೦೧೧ರ ಚಾಂಪಿಯನ್ ಕ್ವಿಟೋವಾ ಗುಂಪಿನಲ್ಲಿ ೦-೨ರಿಂದ ಹಿನ್ನಡೆ ಅನುಭವಿಸಿ ತಲ್ಲಣಿಸಿದರು.

ಇದನ್ನೂ ಓದಿ : ಯುಎಸ್ ಓಪನ್‌ಗೂ ಸೆರೆನಾ ಅಸಹನೆಗೂ ಇದೆ ಅವಿನಾಭಾವ ನಂಟು!
View this post on Instagram

Who’s your favorite to win at Singapore? 🏆 . The WTA Finals have started and with World No. Simona Halep withdrawal due to injury, 2016 finalist Kerber and defending champion Wozniacki topped the field as the top two seeds. . Here’s how the seeds shook out into the red and white groups: . Red Group 🔴 1. Angelique Kerber 3. Naomi Osaka 5. Sloane Stephens 8. Kiki Bertens White Group ⚪️ 2. Caroline Wozniacki 4.Petra Kvitova 6. Elina Svitolina 7. Karolina Pliskova . #wta #womentennis #tennis #wtafinals #singapore #singaporetennis #champion #thebest #carolinewozniacki #naomiosaka #sloanestephens #kikibertens #angeliquekerber #petrakvitova #elinasvitolina #karolinapliskova #tennis #tennisday #tennislove #lovetennis #tennisplaza #weserveyourgame

A post shared by Tennis Plaza 🎾 (@tennisplaza) on

ಅಂದಹಾಗೆ, ಕ್ವಿಟೋವಾ ವಿರುದ್ಧ ವೋಜ್ನಿಯಾಕಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಗೆಲುವು ಸಾಧಿಸಿದರು. “ಇಂದು ನಾನು ಉತ್ತಮವಾಗಿ ಆಡಿದ್ದರ ಫಲವಾಗಿ ಕ್ವಿಟೋವಾ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಯಿತು. ಚೆಂಡನ್ನು ಸರಿದಿಸೆಯಲ್ಲಿ ಹಿಂದಿರುಗಿಸಿದ್ದು, ಅತ್ಯುತ್ತಮ ಸರ್ವ್ ಹಾಗೂ ಕೋರ್ಟ್‌ನಾದ್ಯಂತ ಚಲನಶೀಲವಾಗಿ ಸೆಣಸಿದ್ದು, ನನ್ನ ಗೆಲುವಿಗೆ ನೆರವಾಯಿತು. ಪೆಟ್ರಾ ವಿರುದ್ಧ ಕೊಂಚ ಮೈಮರೆತರೂ ಸೋಲು ಕಟ್ಟಿಟ್ಟಬುತ್ತಿ. ಹೀಗಾಗಿ, ಕೊನೆಯವರೆಗೂ ಎಚ್ಚರಿಕೆಯಿಂದಲೇ ಸೆಣಸಿದೆ,’’ ಎಂದು ವಿಜಯದ ಬಳಿಕ ವೋಜ್ನಿಯಾಕಿ ಪ್ರತಿಕ್ರಿಯಿಸಿದರು.

ಪಂದ್ಯದಾದ್ಯಂತ ಪೆಟ್ರಾ ಮೂರು ಬಾರಿ ಡಬಲ್ ಫಾಲ್ಟ್ ಎಸಗಿದರೆ, ವೋಜ್ನಿಯಾಕಿ ಮಾತ್ರ ಎಚ್ಚರವಹಿಸಿದರು. ಐದು ಬ್ರೇಕ್ ಪಾಯಿಂಟ್ಸ್ ಗಳಿಸಿದ ಪೆಟ್ರಾ ವಿರುದ್ಧ ವೋಜ್ನಿಯಾಕಿ ಆರು ಬ್ರೇಕ್ ಪಾಯಿಂಟ್ಸ್ ಕಲೆಹಾಕಿದರು. ಮೊದಲ ಸೆಟ್ ಟೈಬ್ರೇಕರ್‌ಗೆ ಜಾರುವ ಹಂತದಲ್ಲಿ ಎಚ್ಚರವಹಿಸಿದ ವೋಜ್ನಿಯಾಕಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎರಡನೇ ಸೆಟ್‌ ಅನ್ನು ಕಳೆದುಕೊಂಡರೂ, ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ವೋಜ್ನಿಯಾಕಿ ಆಕರ್ಷಕ ಆಟವಾಡಿ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More