ಗಡಿನಾಡ ಕನ್ನಡ ಶಾಲೆಗಳ ಮೇಲೆ ಕರ್ನಾಟಕದ ಸರ್ಕಾರಗಳಿಗಿಲ್ಲ ಮಮಕಾರ

ಕರ್ನಾಟಕದ ಗಡಿ ಭಾಗದ ಜತ್, ದಕ್ಷಿಣ ಸೋಲಾಪುರದಲ್ಲಿ ಕನ್ನಡ ಶಾಲೆಗಳಿವೆ. ಇಲ್ಲಿ ಜನ ಕನ್ನಡವನ್ನು ಉಸಿರಿನಲ್ಲಿ ಬೆರೆಸಿಕೊಂಡು ಬಂದಿದ್ದಾರೆ. ಆದರೆ, ಕರ್ನಾಟಕದ ಯಾವುದೇ ಸರ್ಕಾರಗಳು ಈ ಶಾಲೆಗಳಿಗೆ ಸವಲತ್ತು ಕಲ್ಪಿಸಿಕೊಡಲು ಮನಸ್ಸು ಮಾಡಿಲ್ಲ ಎಂಬುದು ಅಲ್ಲಿನ ಜನರ ಬೇಸರ

ಕರ್ನಾಟಕದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಜತ್, ದಕ್ಷಿಣ ಸೋಲಾಪುರ ತಾಲ್ಲೂಕಿನಲ್ಲಿರುವ ಶಾಲೆಗಳಲ್ಲಿ ಇಂದಿಗೂ ಕನ್ನಡ ಕಂಪು ಹರಿಯುತ್ತಿದೆ. ಇಲ್ಲಿ ಜನ ಕನ್ನಡವನ್ನು ಉಸಿರಿನಲ್ಲಿ ಬೆರೆಸಿಕೊಂಡು ಬಂದಿದ್ದಾರೆ. ಹೀಗೆ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಕನ್ನಡ ಶಾಲೆಗಳು ಬೆಳೆದಿರುವುದರ ಹಿಂದೆ ತ್ಯಾಗ ಬಲಿದಾನಗಳ ಕಥೆ ಇದೆ.

ಮಹಾರಾಷ್ಟ್ರದ ಜತ್, ಅಕ್ಕಲಕೋಟ, ಗಡಹಿಂಗ್ಲಜ್, ದಕ್ಷಿಣ ಸೋಲ್ಲಾಪುರ ತಾಲ್ಲೂಕಿನ ಸುಮಾರು 45 ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳ ಗೋಳನ್ನು ಕೇಳುವವರಿಲ್ಲದೇ ಈ ವಿದ್ಯಾರ್ಥಿಗಳು ಮರಾಠಿ ಅಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ಹೆಚ್ಚಿನ ಓದಿಗಾಗಿ ಕರ್ನಾಟಕಕ್ಕೆ ಬಂದರೆ ಯಾವುದೇ ಮೀಸಲಾತಿ ಇಲ್ಲ. ಜೊತೆಗೆ ಉದ್ಯೋಗದ ಭರವಸೆಯೂ ಇಲ್ಲ. ಆದರೆ ಅದೇ ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಮರಾಠಿ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರದಲ್ಲಿ ಸಾಕಷ್ಟು ಸೌಲತ್ತು ನೀಡಿದೆ.

ನಾನು ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಸಂಖ್ ಗ್ರಾಮದಲ್ಲಿ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಯಾವುದೇ ಸೌಲಭ್ಯ ನೀಡದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಕಲಿತರೆ ಮಾಹಾರಾಷ್ಟ್ರದಲ್ಲಿ ಉದ್ಯೋಗ ಸಿಗಲ್ಲ. ಕರ್ನಾಟಕದಲ್ಲಿ ನಾವು ಹೊರನಾಡ ಕನ್ನಡಿಗರಾದ ಕಾರಣ ಸರಿಯಾದ ಸೌಲಭ್ಯವಿಲ್ಲದೆ ಮಾತೃ ಭಾಷೆಯನ್ನು ಬಿಡುವಂತಾಗಿದೆ
ರಾಹುಲ್ ಸಾಹೇಬ್, ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಮುಖ್ಯಸ್ಥರು

ಮಹಾಜನ್ ವರದಿ ಪ್ರಕಾರ ಕೇವಲ ಬೆಳಗಾವಿ ಮಾತ್ರವಲ್ಲ ಜತ್, ಅಕ್ಕಲಕೋಟ, ಗಡಹಿಂಗ್ಲಜ ಕೂಡ ಸೇರುತ್ತದೆ. ಇವುಗಳನ್ನು ಅಭಿವೃದ್ಧಿಪಡಿಸಿ ಎಂಬ ಕೂಗು ಕೇಳಿಬರುತ್ತಿದೆ. ಆದರೆ ಇದಕ್ಕೆ ಮಹಾರಾಷ್ಟ್ರ ಸರ್ಕಾರ ಒಪ್ಪುವುದಿಲ್ಲ. ಯಾವುದೇ ಕಾರಣಕ್ಕೂ ಈ ಗ್ರಾಮಗಳನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿರುವುದರಿಂದ ಕನ್ನಡಿಗರು ನರಳುವಂತಾಗಿದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂದು ಕೇವಲ ಹಾಡಿದರೆ ಸಾಲದು. ಅದಕ್ಕಾಗಿ ಹೋರಾಟ ಮಾಡಬೇಕು. ನಾನು ಕಳೆದ 50 ವರ್ಷಗಳಿಂದ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಹೋರಾಟ ಮಾಡಿದ್ದೇನೆ. ಆದರೆ ನಮ್ಮ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕಾಳಜಿ ತೋರುತ್ತಿಲ್ಲ. ನಾವು ಕರ್ನಾಟಕಕ್ಕೆ ಸೇರೋದೆ ನನ್ನ ಜೀವನದ ಕೊನೆಯ ಆಸೆ.
ಸಂಗಪ್ಪ ಹೋರ್ತಿಕರ್, ಕನ್ನಡಪರ ಹೋರಾಟಗಾರ
ಇದನ್ನೂ ಓದಿ : ಏಕತಾರಿ | ಕನ್ನಡ ಶಾಲೆ ಬಗ್ಗೆ ಅಮ್ಮ ಬಚ್ಚಿಟ್ಟಿದ್ದ ಗುಟ್ಟೊಂದು ಗೊತ್ತಾಯಿತು!

ಈ ನಡುವೆ ಅಲ್ಲಿದ್ದ ಕನ್ನಡ ಶಾಲೆಗಳನ್ನು ನಿಧಾನವಾಗಿ ಮುಚ್ಚುವ ಕಾರ್ಯ ನಡೆಯುತ್ತಿದ್ದು, ಕನ್ನಡ ಶಾಲೆ ಇದ್ದ ಪ್ರದೇಶದಲ್ಲಿ ಮರಾಠಿ ಶಾಲೆಗಳನ್ನು ಅಲ್ಲಿನ ಸರ್ಕಾರ ಆರಂಭಿಸುತ್ತಿದೆ. ಹೀಗಾಗಿ ಅಲ್ಲಿನ ಕನ್ನಡದ ಮಕ್ಕಳಿಗೂ ಮರಾಠಿ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಷ್ಟಾದರೂ ಕರ್ನಾಟಕದಿಂದ ಅಲ್ಲಿನ ಕನ್ನಡಿಗರಿಗೆ ಯಾವುದೇ ನೆರವು, ನೈತಿಕ ಬಲ ಮತ್ತು ಧ್ವನಿ ಇಲ್ಲದಂತಾಗಿದೆ.

ನಿಷ್ಕ್ರಿಯ ಸಾಲ: ಆರ್ಬಿಐ ಕ್ಷಿಪ್ರ ಪರಿಹಾರ ಕ್ರಮ ಮಾರ್ಗಸೂಚಿ ಮಾರ್ಪಾಡು ನಿರೀಕ್ಷೆ
ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More