ಹಿಂದೂಸ್ಥಾನಿಯಲ್ಲಿ ಜಿಂಗಲ್ ಬೆಲ್ಸ್; ವೈರಲ್ ಆಯಿತು ಭಾವೈಕ್ಯತೆ ಸಾರುವ ವಿಡಿಯೋ

ಧಾರ್ಮಿಕ ಮೂಲಭೂತವಾದಿಗಳ ಪೂರ್ವಗ್ರಹ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ಬಹಳ ಕಾಲವಾಯಿತು. ಆದರೆ ಭಾವೈಕ್ಯತೆ ಸಾರುವ ಪ್ರಯೋಗಗಳು ಮಾತ್ರ ನಿಲ್ಲದಿರುವುದು ಆಶಾದಾಯಕ ಬೆಳವಣಿಗೆ. ಸದ್ಯ, ಹಿಂದೂಸ್ಥಾನಿಯಲ್ಲಿ ಸಂಯೋಜಿಸಿದ, ಕವ್ವಾಲಿ ಶೈಲಿಯ ‘ಜಿಂಗಲ್ ಬೆಲ್ಸ್’ ವಿಡಿಯೋ ವೈರಲ್ ಆಗಿದೆ

ಕಳೆದ ಭಾನುವಾರವಷ್ಟೇ ಮುಂಬೈನ ಕೊಲಬಾದಲ್ಲಿನ ಆಫ್ಘನ್ ಚರ್ಚ್‌ನಲ್ಲಿ ಸಂಗೀತ ವಿದ್ವಾಂಸ ಟಿ ಎಂ ಕೃಷ್ಣ ತಮಿಳು ಸೂಫಿ ಗೀತೆಗಳನ್ನು ಹಾಡಿ ಹಿಂದೂ ಮೂಲಭೂತವಾದಿಗಳ ಆಕ್ರೋಶ ಎದುರಿಸಿದ್ದರು. “ಚರ್ಚ್‌ನಲ್ಲಿ ಜಿಂಗಲ್ ಬೆಲ್ಸ್ ಹಾಡೋದು ಬಿಟ್ಟು ಕರ್ನಾಟಿಕ್ ಸಂಗೀತ ಯಾಕೆ ಹಾಡಬೇಕಿತ್ತು?” ಎಂದು ಕೊಂಕು ತೆಗೆದಿದ್ದರು. ಆದರೆ ಕೃಷ್ಣ ಅವರಿಗೆ ಸಂಗೀತಪ್ರಿಯರಿಂದ ಅಪಾರ ಬೆಂಬಲ ದೊರೆತಿತ್ತು. ಈ ಘಟನೆಯ ಬೆನ್ನಲ್ಲೇ, ಹಿಂದೂಸ್ಥಾನಿಯಲ್ಲಿ ಸಂಯೋಜಿಸಲಾದ ‘ಜಿಂಗಲ್ ಬೆಲ್ಸ್’ ಹಾಡು ವೈರಲ್ ಆಗಿದೆ. ಹಿಂದೂಸ್ಥಾನಿ ಜೊತೆಗೆ ಕವ್ವಾಲಿ ಶೈಲಿಯನ್ನೂ ಬೆರೆಸಿ ವಿಭಿನ್ನವಾಗಿ ಪ್ರಸ್ತುತಪಡಿಸಿರುವುದು ಈ ಪ್ರಯೋಗದ ವಿಶೇಷ.

ಅಂದಹಾಗೆ, ‘ಜಿಂಗಲ್ ಬೆಲ್ಸ್’ ಮೂಲತಃ ಅಮೆರಿಕದ್ದಾದರೂ ವಿಶ್ವಾದ್ಯಂತ ಅಪಾರ ಒಲವು ಗಳಿಸಿದ ಗೀತೆ. ಜೇಮ್ಸ್ ಪಿಯರ್‌ಪಾಂಟ್ ೧೮೫೦ರಲ್ಲಿ ಬರೆದು, ಸಂಗೀತ ಸಂಯೋಜಿಸಿದ ಈ ಹಾಡು ಕ್ರಿಸ್‌ಮಸ್‌ ಸಂಭ್ರಮದ ಹೆಗ್ಗರುತುಗಳಲ್ಲೊಂದು.

ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More