ಉರುಳಿಸಲು ಹೋದ ಹಿಟಾಚಿ ಯಂತ್ರದ ಮೇಲೇಯೇ ಕುಸಿದ ನೀರಿನ ದೊಡ್ಡ ಟ್ಯಾಂಕ್‌

ಶಿಥಿಲಾವಸ್ಥೆಯಲ್ಲಿದ್ದ ಬೃಹತ್‌ ನೀರಿನ ಟ್ಯಾಂಕ್ ಅನ್ನು ನೆಲಸಮಗೊಳಿಸುವ ವೇಳೆ ಹಿಟಾಚಿ ಯಂತ್ರದ ಮೇಲೆ ಅದೇ ಟ್ಯಾಂಕ್‌ ಕುಸಿದು ಬಿದ್ದು, ಆಶ್ಚರ್ಯಕರ ರೀತಿಯಲ್ಲಿ ಚಾಲಕ ಪಾರಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ. ಹಲವು ವರ್ಷಗಳ ಹಿಂದಿನ ಹಳೆಯ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿತ್ತು. ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಹಂತದಲ್ಲಿದ್ದ ಟ್ಯಾಂಕ್ ಅನ್ನು ನೆಲಸಮಗೊಳಿಸುವ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಅದು ಇದ್ದಕ್ಕಿಂದ್ದಂತೆ ಕುಸಿದಿದೆ. ಆದರೆ, ಟ್ಯಾಂಕ್‌ ಹಿಟಾಚಿಯ ಅಂಚಿನ ಮೇಲೆ ಬಿದ್ದಿದ್ದರಿಂದ ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಸ್ಟೇಟ್‌ಮೆಂಟ್ | ವಲಸಿಗರ ಮೇಲಿನ ಟ್ರಂಪ್‌ ನೀತಿಯ ದಾಳಿ ಜಗತ್ತಿನೆಲ್ಲೆಡೆ ಕಾಣುವಂಥದ್ದೇ
ಮುದ್ದಿ ಕಿ ಬಾತ್ | ಏನು ಓದಿದ್ದೇವೆಂಬುದು ಮುಖ್ಯವಲ್ಲ, ಖದರ್ ಇದ್ದರೆ ನಾಯಕ! 
ಮುದ್ದಿ ಕಿ ಬಾತ್ | ಇಕ್ಕಟ್ನ್ಯಾಗ ಕುಮಾರಣ್ಣ, ಮುಂದ ಸಾಲ ಕೊಟ್ರು ಬ್ಯಾಡಂದ ರೈತ
Editor’s Pick More