ಐ ಡಿಬೇಟ್ | ಕಂತು 3 | ಭಾಷಾವಾರು ಪ್ರಾಂತ್ಯಗಳ ಮೇಲೆ ಹಿಂದಿ ಹೇರಿಕೆ ಸರಿಯೇ?

ನಿಯಮಗಳಿಂದಾಗಲೀ, ಕಾನೂನುಗಳಿಂದಾಗಲೀ, ಬೆದರಿಕೆಗಳಿಂದಾಗಲೀ ಭಾಷೆ ಕಲಿಸುವುದು ಅಸಾಧ್ಯ ಎನ್ನುತ್ತಾರೆ ತಜ್ಞರು. ಆದರೆ, ಭಾಷಾವಾರು ಪ್ರಾಂತ್ಯಗಳ ಮೇಲೆ ಹಿಂದಿ ಹೇರಿಕೆ ಆಗುತ್ತಿದೆ ಎಂಬ ಗಂಭೀರ ಆರೋಪ ಇದೆ. ಈ ಬಗ್ಗೆ ಚರ್ಚಿಸಿದ್ದಾರೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು

ಚರ್ಚೆಯ ಮುಖ್ಯಾಂಶಗಳು

 • ಮಾತೃಭಾಷೆ, ಆಡಳಿತ ಭಾಷೆಯ ಹೊರತು ಬೇರೆ ಭಾಷೆಗಳನ್ನು ಹೇರುವುದು ಅವೈಜ್ಞಾನಿಕ ನಿರ್ಧಾರ
 • ಭಾಷೆಯ ಕಲಿಕೆ ಅಥವಾ ಸಂವಹನದ ಬಳಕೆ ಹೇರಿಕೆ ಆಗಬಾರದು, ಅದು ಜನರ ಆಯ್ಕೆ ಆಗಿರಬೇಕು
 • ಸದ್ಯ ಕೇಂದ್ರ ಸರ್ಕಾರದ ನಡೆಗಳು ಹಿಂದಿಯನ್ನು ಹೇರುತ್ತಿವೆಯೇ ವಿನಾ ಆಯ್ಕೆಯಾಗಿ ಬಿಟ್ಟಿಲ್ಲ
 • ಹಿಂದಿ ಭಾಷೆ ಹೇರಿಕೆ ಮಾಡುವುದು ನಮ್ಮ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕ್ರಮ
 • ಶಿಕ್ಷಣ ಮಾಧ್ಯಮ ಹಾಗೂ ಭಾಷಾ ಆಯ್ಕೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ
 • ಉ.ಭಾರತದ ಕೆಲ ರಾಜ್ಯಗಳಲ್ಲಿ ಹಿಂದಿ ಪ್ರಮುಖ ಭಾಷೆ ಎಂಬ ಕಾರಣಕ್ಕೆ ದಕ್ಷಿಣದಲ್ಲಿ ಹೇರಬಹುದೇ?
 • ಭಾರತದಲ್ಲಿ ರಾಜ್ಯ ಪುನರ್ ವಿಂಗಡಣೆ ಆಗಿದ್ದೇ ಭಾಷೆಗಳ ಆಧಾರದ ಮೇಲೆ ಅಲ್ಲವೇ?
 • ಭಾಷಾವಾರು ಪ್ರಾಂತ್ಯಗಳ ಮೇಲೆ ಯಾವುದೋ ಒಂದು ಭಾಷೆ ಹೇರುವುದು ನ್ಯಾಯವೇ?
 • ಹಿಂದಿ ಸೇರಿದಂತೆ ಭಾರತದ ಎಲ್ಲ ಭಾಷೆಗಳಿಗೂ ಇಂಗ್ಲಿಷ್‌ನ ಭಯ ಇರುವುದೇನೋ ನಿಜ
 • ಇದೀಗ ಇಂಗ್ಲಿಷ್ ಜೊತೆಗೆ ಹಿಂದಿ ಕೂಡ ಪ್ರಾದೇಶಿಕ ಭಾಷೆಗಳಿಗೆ ಕುತ್ತು ತರುವ ದಾರಿಯಲ್ಲಿದೆ
 • ಯಾವುದೇ ಭಾಷೆಯನ್ನು ಕಲಿಯಲು ನಮಗೆ ಹಿಂಜರಿಕೆ ಇಲ್ಲ, ಇಷ್ಟವಿದ್ದರೆ ಮಾತ್ರ ಕಲಿಯುತ್ತೇವೆ
 • ಭಾಷೆಯನ್ನು ಕಾನೂನು ಅಥವಾ ಸುಗ್ರೀವಾಜ್ಞೆಗಳ ಮೂಲಕ ತಲೆಗೆ ತುಂಬಲು ಸಾಧ್ಯವಿಲ್ಲ
 • ಭಾಷೆಯಂಥ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುವುದು ಯಾವುದೇ ಪಕ್ಷಕ್ಕೂ ಶೋಭೆಯಲ್ಲ
 • ಪ್ರಾದೇಶಿಕತೆ, ಹಿಂದಿ ಹೇರಿಕೆ ಎರಡರಲ್ಲೂ ಅತಿರೇಕದ ವರ್ತನೆಗಳಿಗೆ ಕಡಿವಾಣ ಹಾಕುವುದು ಅವಶ್ಯ
 • ಯಾವುದೇ ಕಾರಣಕ್ಕೂ ಭಾಷೆಯ ವಿಷಯದಲ್ಲಿ ಹೇರಿಕೆ, ದಬ್ಬಾಳಿಕೆಗೆ ಅವಕಾಶ ಇರಬಾರದು

ಹಿಂದಿನ ಕಂತುಗಳು

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಐ ಡಿಬೇಟ್ | ಕಂತು 2 | ‘ಪದ್ಮಾವತ್’ ಚಿತ್ರವನ್ನು ವಿವಾದಕ್ಕೆ ಗುರಿಪಡಿಸಿದ್ದು ಸರಿಯೇ?

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಐ ಡಿಬೇಟ್ | ಕಂತು 1 | ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೋ ಬೇಡವೋ?

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More