ಸಂಕಲನ | ಬೇಂದ್ರೆ ಕಾವ್ಯ | ಕನ್ನಡದ ಹೆಮ್ಮೆಯ ಕಲಾವಿದರಿಂದ ಸಂಗೀತ ಬೈಠಕ್‌

ಜಯತೀರ್ಥ ಮೇವುಂಡಿ ಅವರಿಂದ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು’ ಗಾಯನ

ಜಯತೀರ್ಥ ಮೇವುಂಡಿ ಹಿಂದೂಸ್ತಾನಿ ಸಂಗೀತದಲ್ಲಿ ಪ್ರಸಿದ್ಧ ಗಾಯಕ. ಕಿರಾಣಾ ಘರಾನಾಕ್ಕೆ ಈ ಕಲಾವಿದರು ಪುರಂದರ ದಾಸರ ಕೀರ್ತನೆಗಳ ಮೂಲಕ ಮನೆಮಾತಾದವರು. ಕಿರಾಣಾ ಘರಾಣಾ ಸಂಗೀತ ಪರಂಪರೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಸಂಕಲ್ಪ ತೊಟ್ಟಿದ್ದಾರೆ. ನಲವತ್ತೊಂದರ ಮೇವುಂಡಿ ಸದ್ಯದ ಭಾರತದ ಹಿಂದೂಸ್ತಾನಿ ಸಂಗೀತದ ತಾರೆಯಾಗಿ ಮಿಂಚುತ್ತಿದ್ದಾರೆ.

ಪರಮೇಶ್ವರ ಹೆಗಡೆ ಅವರಿಂದ 'ಕೊಡುವುದೇನು? ಕೊಂಬುದೇನು?’ ಗಾಯನ

ಪರಮೇಶ್ವರ ಹೆಗಡೆ ಹಿಂದೂಸ್ತಾನಿ ಸಂಗೀತದಲ್ಲಿ ಚಿರಪರಿಚಿತ ಹೆಸರು. ಅರವತ್ತು ವರ್ಷಗಳ ಸುದೀರ್ಘ ಸಂಗೀತ ಸಾಧನೆಯಲ್ಲಿ ಅಪೂರ್ವ ಸಂಗೀತದ ಸವಿಯುಣಿಸಿದ್ದಾರೆ. ‘ಕಿರಾಣಾ ಘರಾಣಾ’ ಮತ್ತು ‘ಗ್ವಾಲಿಯರ್‌ ಘರಾಣಾ’ ಗಾಯನ ಶೈಲಿಯನ್ನು ಮೇಳೈಸಿ ಸಂಗೀತ ರಸಿಕರಿಗೆ ಅರ್ಪಿಸಿದ್ದಾರೆ. ಕವಿದಿನದ ಹಿನ್ನೆಲೆಯಲ್ಲಿ ಈ ವಿಶೇಷ ಸರಣಿ, ಕಾವ್ಯ ಸಂಭ್ರಮಕ್ಕಾಗಿ ಬೇಂದ್ರೆಯವರ ಒಂದು ಪದ್ಯವನ್ನು ಹಾಡಿದ್ದಾರೆ.

ಬಿಂದು ಮಾಲಿನಿ ಅವರಿಂದ ‘ನೀ ಬೈರಾಗಿ’ ಗಾಯನ

ಬಿಂದುಮಾಲಿನಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕಿ, ಗಾಯಕಿ. ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಕನ್ನಡದ ‘ಹರಿಕಥಾ ಪ್ರಸಂಗ’, ತಮಿಳಿನ ‘ಅರುವಿ’ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ವಿವಿಧ ರೀತಿಯ ಸಂಗೀತದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕವಿ ದಿನದ ಹಿನ್ನೆಲೆಯಲ್ಲಿ ಈ ವಿಶೇಷ ಸರಣಿ, ಕಾವ್ಯ ಸಂಭ್ರಮಕ್ಕಾಗಿ ಬೇಂದ್ರೆಯವರ 'ನೀ ಬೈರಾಗಿ’ ಪದ್ಯವನ್ನು ಹಾಡಿದ್ದಾರೆ.

ರಂಗ ನಟಿ ದಿಶಾ ರಮೇಶ್‌ ಅವರಿಂದ ‘ನಾಕು ತಂತಿ’ ಗಾಯನ

ದಿಶಾ ರಮೇಶ್‌ ಯುವ ರಂಗಪ್ರತಿಭೆ. ತಂದೆ ಮಂಡ್ಯ ರಮೇಶ್‌, ತಾಯಿ ಸರೋಜ ಅವರ ರಂಗ ಗರಡಿಯಲ್ಲಿ ಪಳಗಿದ ದಿಶಾ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಪೂರ್ವ ಕಂಠಸಿರಿಯಿಂದ ರಂಗಭೂಮಿಯಲ್ಲಿ ಗಮನ ಸೆಳೆದಿದ್ದಾರೆ. . ಕವಿ ದಿನದ ಹಿನ್ನೆಲೆಯಲ್ಲಿ ಈ ವಿಶೇಷ ಸರಣಿ, ಕಾವ್ಯ ಸಂಭ್ರಮಕ್ಕಾಗಿ ಬೇಂದ್ರೆಯವರ ‘ನಾಕು ತಂತಿ’ ಪದ್ಯವನ್ನು ಹಾಡಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More