ಬೈಠಕ್‌ | ಕೃಷ್ಣ ಬೈರೇಗೌಡ ಸಂದರ್ಶನ | ಸಿರಿಧಾನ್ಯದಿಂದಲೇ ಆರೋಗ್ಯಸಿರಿ| ಕಂತು೧ 

ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸುಗತ ಶ್ರೀನಿವಾಸರಾಜು ಅವರು ನಡೆಸಿರುವ ಈ ಸಂದರ್ಶನ ಎರಡು ಕಂತುಗಳಲ್ಲಿ ಮೂಡಿಬರಲಿದೆ. ಸಂದರ್ಶನದ ಮೊದಲ ಕಂತಿನಲ್ಲಿ ಸಚಿವರು ಕೃಷಿ ಬೆಳೆ ಪದ್ಧತಿ, ಸಿರಿಧಾನ್ಯದ ಕುರಿತು ಮಾತನಾಡಿದ್ದಾರೆ

ಸಚಿವ ಕೃಷ್ಣ ಬೈರೇಗೌಡ ಅವರ ಮಾತಿನ ಮುಖ್ಯಾಂಶಗಳು

 • ಪರಿಪಕ್ವತೆ ಇಲ್ಲದಿದ್ದರೆ ರಾಜಕಾರಣಿಗಳು ಉತ್ತಮ ನಾಯಕರಾಗಲು ಸಾಧ್ಯವಿಲ್ಲ
 • ಸಮಾಜದ ಎಲ್ಲ ಮಜಲುಗಳಲ್ಲಿ ಅನುಭವ ಪಡೆದಾಗ ಮಾತ್ರ ಈ ಪರಿಪಕ್ವತೆ ಗಳಿಸಲು ಸಾಧ್ಯ
 • ರಾಜ್ಯದ ಹಿತ ಇರುವುದೇ ಗ್ರಾಮೀಣ ಪ್ರದೇಶದಲ್ಲಿ. ನಾನು ನಗರ ಪ್ರದೇಶ ಪ್ರತಿನಿಧಿಸಿದರೂ ಕೃಷಿ ಖಾತೆ ನಿರ್ವಹಣೆ ಸಿಕ್ಕಿರುವುದು ನನಗೊದಗಿದ ಅವಕಾಶ. ಈ ಎರಡೂ ಅನುಭವ ನನ್ನ ಪರಿಪಕ್ವತೆಗೆ ಸಹಕಾರಿ
 • ಇವತ್ತಿನ ನಾನಾ ಪ್ರಶ್ನೆಗಳಿಗೆ ಸಿರಿಧಾನ್ಯ ಉತ್ತರವಾಗಲಿದೆ
 • ಇಂದು ಭಾರತವೂ ಸೇರಿದಂತೆ ಇಡೀ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಬರಗಾಲ ಹೆಚ್ಚಾಗುತ್ತಿದೆಯೇ ಹೊರತು ವಾಡಿಕೆ ಪ್ರಮಾಣದ ಮಳೆಯಾಗುತ್ತಿಲ್ಲ. ಇವತ್ತಿನ ವ್ಯವಸಾಯ ಪದ್ಧತಿಯನ್ನೇ ನಾವು ಮುಂದುವರಿಸಿದರೆ ಭವಿಷ್ಯದಲ್ಲಿ ಕೃಷಿ ಕಷ್ಟವಾಗಲಿದೆ. ಹೀಗಾಗಿ ಹವಾಮಾನಕ್ಕೆ ಅನುಗುಣವಾದ ಬೆಳೆ ಬೆಳೆಯಬೇಕಿದೆ. ಇದೇ ಕಾರಂಣಕ್ಕೆ ನಾವು ಸಿರಿಧಾನ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ
 • ಆರೋಗ್ಯ, ಪರಿಸರದ ದೃಷ್ಟಿಯಿಂದ ನಾವು ಹೆಚ್ಚು ಪ್ರಜ್ಞಾವಂತರಾಗಬೇಕಿದೆ
 • ಒಣಬೇಸಾಯ ಪ್ರದೇಶದಲ್ಲಿ ಕಡುಬಡವರೂ ಸಿರಿಧಾನ್ಯ ಬೆಳೆಯಬಹುದು
 • ಕರ್ನಾಟಕದಲ್ಲಿ ಶೇ.14ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತ ಹಾಗೂ ಶೇ.5ರಷ್ಟು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಶೇ.70ರಷ್ಟು ಭಾಗ ಒಣಬೇಸಾಯದ ಪ್ರದೇಶ. ದೇಶದಲ್ಲಿ ಎರಡನೇ ಅತಿದೊಡ್ಡ ಒಣಬೇಸಾಯ ಪ್ರದೇಶ ಹೊಂದಿರುವ ರಾಜ್ಯ ಕರ್ನಾಟಕ
 • ನಾನು ಬಯಲುಸೀಮೆಯಿಂದ ಬಂದವನು ಎಂಬ ಕಾರಣಕ್ಕೆ ಸಿರಿಧಾನ್ಯ ಬೆಳೆಯಬೇಕು ಎಂದು ಹೇಳುತ್ತಿಲ್ಲ
 • ಇಲ್ಲಿಯವರೆಗೂ ಒಣಬೇಸಾಯ ಪ್ರದೇಶದ ರೈತರನ್ನು ಮರೆಯುವಂಥ ಕೆಲಸ ಆಗಿತ್ತು, ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ
 • ನಿರ್ಲಕ್ಷ್ಯಕ್ಕೆ ಒಳಗಾದ ಜನರ ಬೆಳೆಗಳಿಗೆ ಆದ್ಯತೆ ನೀಡುವ ಮೂಲಕ ಅಲ್ಲಿಯೂ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದೇವೆ. ಕೃಷಿಭಾಗ್ಯ ಯೋಜನೆ ಜಾರಿಗೆ ತಂದ ಉದ್ದೇಶ ಕೂಡ ಅದೇ
 • ಅನ್ನಭಾಗ್ಯ ಯೋಜನೆ ಮೂಲಕ ನಾವು ಶೇ.95ರಷ್ಟು ಆಹಾರ ಭದ್ರತೆ ಒದಗಿಸಿದ್ದೇವೆ
 • ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯವನ್ನು ಪರಿಚಯಿಸಿದ್ದೇವೆ. ಇದು ಯಶಸ್ವಿಯಾದರೆ ಮುಂದುವರಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ
 • 60, 70ರ ದಶಕದಲ್ಲಿ ಆರ್ಥಿಕವಾಗಿ ಪ್ರಬಲವಾಗಿದ್ದವರು ಮಾತ್ರ ಅನ್ನ ಸೇವಿಸುತ್ತಿದ್ದರು. ನಂತರದ ದಿನಗಳಲ್ಲಿ ಪ್ರತಿಮನೆಯಲ್ಲೂ ಅನ್ನ ದಿನನಿತ್ಯದ ಆಹಾರವಾಯಿತು. ಅನ್ನ ಬಳಸದಂತೆ ಜನರ ಮನಸ್ಸನ್ನು ಬದಲಿಸುವಲ್ಲಿ ಎಷ್ಟು ಸಫಲರಾಗುತ್ತೇವೋ ಗೊತ್ತಿಲ್ಲ. ಪ್ರಯತ್ನ ಮಾಡುತ್ತೇವೆ; ಒಪ್ಪುವುದು, ಬಿಡುವುದು ಜನರಿಗೆ ಬಿಟ್ಟಿದ್ದು. ನಗರ ಪ್ರದೇಶದ ಜನರಲ್ಲಿ ಈ ಬಗ್ಗೆ ಅರಿವು ಬಂದರೆ, ನಂತರ ಗ್ರಾಮೀಣ ಪ್ರದೇಶದ ಜನರ ಮನಸ್ಸು ಬದಲಾಗಬಹುದು
 • ಜಾಗೃತಿ ಮೂಡಿಸದೆ ಸಿರಿಧಾನ್ಯ ಬೆಳೆಯಿರಿ ಎಂದರೆ ನಾವು ಖಂಡಿತ ಯಶಸ್ವಿಯಾಗುವುದಿಲ್ಲ. ದುರದೃಷ್ಟಕ್ಕೆ ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ಇತರ ವಿವಿಗಳು ಸಾಮಾಜಿಕ ಮತ್ತು ವರ್ತನಾ ಆಯಾಮಕ್ಕೆ ಗಮನ ಕೊಟ್ಟಿಲ್ಲ

ಕರ್ನಾಟಕದ ಕೃಷಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ ಸುಗತ ಶ್ರೀನಿವಾಸರಾಜು ಅವರು ನಡೆಸಿದ ಸಂದರ್ಶನದ ಎರಡನೆಯ ಕಂತು ಇಲ್ಲಿದೆ. ಈ ಕಂತಿನಲ್ಲಿ ಸಚಿವರು ನೀರಿನ ಉಳಿತಾಯ, ಜಿಎಸ್‌ಟಿ, ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More