ಜಮೀರ್‌ ಅಹ್ಮದ್‌ ಮನದ ಮಾತು | ಮತ್ತೊಬ್ಬ ಜಮೀರ್‌ನನ್ನು ಹುಟ್ಟುಹಾಕಲಿ ನೋಡೋಣ

ಎಚ್‌ಡಿಕೆ ಆಪ್ತರಾಗಿದ್ದ ಶಾಸಕ ಜಮೀರ್‌ ಈಗ ಕಾಂಗ್ರೆಸ್‌ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ‘ದಿ ಸ್ಟೇಟ್‌’ಗೆ ನೀಡಿದ ಸಂದರ್ಶನದಲ್ಲಿ‌ ಅವರು, ದೇವೇಗೌಡರನ್ನು ರಾಜಕೀಯ ಗುರು ಎಂದಿದ್ದಾರೆ. ಮತ್ತೊಬ್ಬ ಜಮೀರ್‌ನನ್ನು ಹುಟ್ಟುಹಾಕಲಿ ನೋಡೋಣ ಎಂದು ಜೆಡಿಎಸ್‌ಗೆ ಸವಾಲು ಎಸೆದಿದ್ದಾರೆ

 • ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗುತ್ತೇವೆ
 • ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೂ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದವರು. ತಿಕ್ಕಾಟ ಎಂಬುದು ಮಾಧ್ಯಮದ ಸೃಷ್ಟಿಯಷ್ಟೆ
 • ಸ್ವಾಭಿಮಾನ, ಗೌರವಕ್ಕಾಗಿ ಕಾಂಗ್ರೆಸ್‌ ಸೇರುತ್ತಿದ್ದೇವೆ. ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡರೆ ಸಾಕು.
 • ಜೆಡಿಎಸ್‌ ನಮ್ಮ ತಾಯಿ ಇದ್ದಹಾಗೆ. ಅದನ್ನು ತೊರೆಯುವ ಬಗ್ಗೆ ಯಾವುದೇ ಯೋಚನೆ ಮಾಡಿರಲಿಲ್ಲ. ಆದರೆ ಸನ್ನಿವೇಶ ಹೀಗೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ
 • ಲಾಭ-ನಷ್ಟವನ್ನು ಜನರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸೂಚನೆಯಂತೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿದ್ದೇವೆ
 • ನಮ್ಮನ್ನು ಪಕ್ಷದಿಂದ ತೆಗೆಯಲು ಅವರು ಕಾರಣ ಹುಡುಕುತ್ತಿದ್ದರು. ಅದನ್ನು ಬಳಸಿಕೊಂಡಿದ್ದಾರೆ
 • ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಫಾರೂಖ್‌ ಅವರನ್ನು ಪಕ್ಷದ ಅಭ್ಯರ್ಥಿಯಾಗಿಸಿದ್ದನ್ನು ನಾವು ವಿರೋಧಿಸಿದ್ದೆವು
 • ಕಾರ್ಯಕರ್ತರಿಗೆ ಬೆಲೆ ಕೊಡಿ, ಅವರಿಗೆ ಅಧಿಕಾರ ಕೊಡಿ ಎಂದರೂ ನಮ್ಮ ಮಾತನ್ನು ಕುಮಾರಸ್ವಾಮಿ ಕೇಳಲಿಲ್ಲ
 • ಕುಮಾರಸ್ವಾಮಿ ಅವರಿಂದ ನಾವು ಬದುಕುತಿದ್ದೇವೆ ಎಂಬುದು ನೋವು ಉಂಟು ಮಾಡಿದೆ
 • ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ದೇವೇಗೌಡ, ರೇವಣ್ಣ ಅಲ್ಲ; ಚೆಲುವರಾಯ ಸ್ವಾಮಿ. ಬಾಲಕೃಷ್ಣ, ಸಂತೋಷ ಲಾಡ್‌ ಅವರು ಎಚ್‌ಡಿಕೆಯನ್ನು ಮುಖ್ಯಮಂತ್ರಿ ಮಾಡಿದವರು
 • ನಮ್ಮ ಹಣೆಬರಹವನ್ನು ದೇವೇಗೌಡರು ಮತ್ತು ಕುಮಾರಸ್ವಾಮಿ ಬರೆಯೋಕೆ ಆಗಲ್ಲ. ಕುಮಾರಸ್ವಾಮಿ ಇಷ್ಟು ಬದಲಾಗುತ್ತಾರೆ ಎಂದು ಕನಸು-ಮನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ
 • ಕುಮಾರಸ್ವಾಮಿ ಮೇಲೆ ಸಿಟ್ಟು ಇದ್ದರೆ ಏನು ಮಾಡುವುದಕ್ಕೆ ಆಗುತ್ತದೆ. ಅವರು ಮಾಜಿ ಮುಖ್ಯಮಂತ್ರಿ. ದೊಡ್ಡ ನಾಯಕ. ಒಬ್ಬರೇ ಲೀಡರ್‌. ನಾವು ಅವರಿಗಿಂತ ಬಹಳ ಚಿಕ್ಕವರು
 • ಕುಮಾರಸ್ವಾಮಿ ಪಾತ್ರವಿಲ್ಲ. ನನ್ನ ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆಳವಣಿಗೆಯಲ್ಲಿ ದೇವೇಗೌಡರು, ಸಿದ್ದರಾಮಯ್ಯ ಅವರ ಪಾತ್ರವಿದೆ
 • ನನ್ನ ಗೆಲುವಿಗಾಗಿ ಮಾಜಿ ಪ್ರಧಾನಿ ಎಂಬುದನ್ನು ಮರೆತು ದೇವೇಗೌಡರು ಕೊಳಚೆ ಪ್ರದೇಶಗಳಲ್ಲಿ ಮತ ಯಾಚಿಸಿದ್ದಾರೆ
 • ದೇವೇಗೌಡರು ನನ್ನ ರಾಜಕೀಯ ಗುರುಗಳು. ೨೦೦೪ರಲ್ಲಿ ಕುಮಾರಸ್ವಾಮಿ ಯಾರೆಂದೇ ಜನರಿಗೆ ಗೊತ್ತಿರಲಿಲ್ಲ
 • ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ದೇವೇಗೌಡರು ನನ್ನನ್ನು ನಿರ್ಲಕ್ಷಿಸಿ ಅವರೇ ನೇತೃತ್ವವಹಿಸಿದ್ದರು
 • ಲೋಕಸಭೆ ಚುನಾವಣೆಯಲ್ಲಿಯೇ ನಮ್ಮ ನಡುವೆ ವೈಮನಸ್ಸು ಆರಂಭವಾಯಿತು. ನನ್ನನ್ನು ಬಿಟ್ಟು ಮತಯಾಚಿಸಿ ಅವರು ೩೦೦ ಬೂತ್‌ಗಳಿಂದ ಪಡೆದಿದ್ದು ಕೇವಲ ೫೪೦ ಮತ ಮಾತ್ರ
 • ಬಿಬಿಎಂಪಿ ಚುನಾವಣೆ ನನ್ನ ನೇತೃತ್ವದಲ್ಲಿ ನಡೆದು ೫೬ ಸಾವಿರ ಮತ ಪಡೆದುಕೊಂಡೆ. ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬರುತ್ತೇನೆ ಎಂದು ಕುಮಾರಸ್ವಾಮಿ ತಪ್ಪಿಸಿಕೊಂಡರು
 • ಕುಮಾರಸ್ವಾಮಿ ಬರೀ ಸುಳ್ಳು ಹೇಳುತ್ತಾರೆ. ಕತೆ ಹೇಳುತ್ತಾರೆ. ಸಾಬಿಗೆ ಹೆಂಗೆ ಟಾಂಗ್ ಕೊಟ್ಟೆ ನೋಡಿದ್ರಾ ಅಂಥಾ ಕೇಳಿದ್ರಂತೆ. ಇದು ಸರೀನಾ? ದುಡ್ಡು ಕೊಟ್ಟೋರಿಗೆ ಅಧಿಕಾರ ಕೊಡ್ತಾವ್ರಂತೆ. ಈಗ ಎಲ್ಲದಕ್ಕೂ ಹಣ ಕೀಳ್ತಾವ್ರಂತೆ
 • ಕುಮಾರಸ್ವಾಮಿ, ದೇವೇಗೌಡರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೆ. ಜೆಡಿಎಸ್‌ನಲ್ಲಿ ಚಿತ್ರಹಿಂಸೆ ನೀಡಲಾಗುತ್ತದೆ. ಆರಂಭದಿಂದ ಇದ್ದ ನಾಯಕರಾರೂ ಅವರ ಜೊತೆ ಇಲ್ಲ
 • ಏನೇ ಆದರೂ ಮತ್ತೆ ಜೆಡಿಎಸ್‌ಗೆ ವಾಪಸಾಗುವ ಪ್ರಶ್ನೆಯೇ ಇಲ್ಲ. ನಮ್ಮ ಶಕ್ತಿ ಏನು ಎಂದು ಜೆಡಿಎಸ್‌ಗೆ ತೋರಿಸುತ್ತೇನೆ. ಇದು ನನ್ನ ಸವಾಲು. ಇನ್ನೊಬ್ಬ ಜಮೀರ್‌ನನ್ನು ರೂಪಿಸಲು ಜೆಡಿಎಸ್‌ಗೆ ಸಾಧ್ಯವೇ ಇಲ್ಲ
 • ಕುಮಾರಸ್ವಾಮಿಗೆ ಮಾತ್ರ ರಾಜಕೀಯದಲ್ಲಿ ಮುಂದುವರಿಯುವ ಅನಿವಾರ್ಯತೆ ಇರೋದು. ನನಗಲ್ಲ
 • ಕುಮಾರಸ್ವಾಮಿ ಆಸ್ತಿ ವಿವರದಲ್ಲಿ ೮೦೦ ಕೋಟಿ ರೂಪಾಯಿ ಆಸ್ತಿ ಇದೆ ಎಂದು ತೋರಿಸಿದ್ದಾರೆ. ಅವರು ರೈತನ ಮಗ ಅಷ್ಟು ಸಂಪತ್ತು ಎಲ್ಲಿಂದ ಬಂತು?
 • ಕುಮಾರಸ್ವಾಮಿ ಅವರು ನಮಗೂ ದುಡ್ಡು ಮಾಡುವ ದಾರಿ ಹೇಳಿಕೊಟ್ಟರೆ ಅನುಸರಿಸುತ್ತೇವೆ
 • ಸ್ವತಃ ದುಡ್ಡಿನಲ್ಲಿ ಕುಮಾರಸ್ವಾಮಿ ರಾಜಕೀಯ ಮಾಡುತ್ತಿಲ್ಲ. ಜೆಡಿಎಸ್‌ ತಿರುಪತಿ ಹುಂಡಿ ಇದ್ದ ಹಾಗೆ
 • ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರು ನನ್ನನ್ನು ಮುಸ್ಲಿಂ ನಾಯಕ ಎಂದು ಘೋಷಣೆ ಮಾಡಿದ್ದಾರೆ
 • ಕಾಂಗ್ರೆಸ್‌ನಲ್ಲಿ ಮುಸ್ಲಿಂ ಹಿರಿಯ ನಾಯಕರಿದ್ದಾರೆ. ಅವರ ನಾಯಕತ್ವದಲ್ಲಿ ಕೆಲಸ ಮಾಡಲು ನಾನು ಸಿದ್ಧ
 • ಓವೈಸಿ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಸಮೀಕ್ಷೆಗಳು ಬಿಜೆಪಿ ಪರವಾಗಿರಲಿಲ್ಲ. ಮತ ಹೊಡೆಯಲು ಓವೈಸಿ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದರು
 • ಕರ್ನಾಟಕದಲ್ಲಿ ಕಾಂಗ್ರೆಸ್ ಬರುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿರುವುದರಿಂದ ಓವೈಸಿ ಇಲ್ಲಿ ಅಭ್ಯರ್ಥಿ ಹಾಕುತ್ತಾರೆ
 • ಬಿಜೆಪಿಯನ್ನು ನಿಂದಿಸಲು ಓವೈಸಿಗೆ ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಆ ಮೂಲಕ ಮುಸ್ಲಿಂ ಮತಪಡೆಯುವುದು ಅವರ ಉದ್ದೇಶವಷ್ಟೆ
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More