35 MM | ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ ಕುರಿತು ಪಿ ಶೇಷಾದ್ರಿ ಮಾತು

ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್‌ ರೇ ಅಗಲಿ ಇಂದಿಗೆ (ಏ 23) ಇಪ್ಪತ್ತಾರು ವರ್ಷ. ಅವರ ‘ಪಥೇರ್‌ ಪಾಂಚಾಲಿ’ ಹೊಸ ಅಲೆಯ ಚಿತ್ರಗಳಿಗೆ ನಾಂದಿಯಾಯ್ತು. ಕನ್ನಡ ಚಿತ್ರನಿರ್ದೇಶಕ ಪಿ ಶೇಷಾದ್ರಿ ಅವರು ‘ಪಥೇರ್‌ ಪಾಂಚಾಲಿ’ ಕುರಿತು ಮಾತನಾಡುತ್ತ ರೇ ಅವರನ್ನು ಸ್ಮರಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

 • ಪ್ರಪಂಚದ ನೂರು ಶ್ರೇಷ್ಠ ಸಿನಿಮಾಗಳ ಪಟ್ಟಿಯಲ್ಲಿ ಸತ್ಯಜಿತ್‌ ರೇ ನಿರ್ದೇಶನದ ‘ಪಥೇರ್‌ ಪಾಂಚಾಲಿ’ ಕೂಡ ಸ್ಥಾನ ಪಡೆದಿದೆ
 • ನಿಯೋ ರಿಯಲಿಸಂ ಮಾದರಿಯಲ್ಲಿ ಅತಿ ಹೆಚ್ಚು ರಂಜನೆಗೆ ಮಹತ್ವ ಕೊಡದೆ ವಾಸ್ತವಕ್ಕೆ ಹತ್ತಿರವಾದ ಅಂಶಗಳನ್ನು ಚಿತ್ರಿಸಲಾಗುತ್ತದೆ
 • ಬಂಗಾಳದ ವಿಭೂತಿಭೂಷಣ್ ಬಂಡೋಪಾಧ್ಯಾಯ ಅವರ ‘ಪಥೇರ್ ಪಾಂಚಾಲಿ’ ಕೃತಿಯನ್ನು ರೇ ತೆರೆಗೆ ಅಳವಡಿಸಲು ನಿರ್ಧರಿಸುತ್ತಾರೆ
 • ಹಿನ್ನೆಲೆಯಲ್ಲಿ ಉಗಿಬಂಡಿ, ಮುನ್ನಲೆಯಲ್ಲಿ ಜೊಂಡಿನ ಹೂಗಳು ತೂಗಾಡುತ್ತಿರುವ ದೃಶ್ಯ ಅತ್ಯುತ್ತಮ ದೃಶ್ಯವೆಂದು ದಾಖಲಾಗಿದೆ
 • ‘ಪಥೇರ್‌ ಪಾಂಚಾಲಿ’ ಚಿತ್ರದಲ್ಲಿ ಒಬ್ಬ ಪುಟ್ಟ ಬಾಲಕನ ದೃಷ್ಟಿಯಿಂದ ನಮಗೆ ವಿಶ್ವದರ್ಶನ ಮಾಡಿಸುತ್ತ ಹೋಗುತ್ತಾರೆ ನಿರ್ದೇಶಕ ರೇ
 • ಚಿತ್ರದಲ್ಲೊಂದು ಮೂಕಿ ಪಾತ್ರವಿದೆ, ಈ ‘ಇಂದಿರಾ’ ಪಾತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಎಂಬತ್ತು ವರ್ಷದ ಚುನಿಬಾಲಾ ದೇವಿ ನಟಿಸಿದ್ದಾರೆ
 • ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಪಂಡಿತ್‌ ರವಿಶಂಕರ್‌ ಅವರು ಶಹನಾಯಿ ವಾದ್ಯವನ್ನು ಸಮರ್ಥವಾಗಿ ಬಳಕೆ ಮಾಡಿದ್ದರು
 • ‘ನೀಚ್‌ನಗರ್‌’, ‘ದೋ ಬಿಘಾ ಜಮೀನ್‌‌’ ಚಿತ್ರಗಳ ನಂತರ ‘ಪಥೇರ್‌ ಪಾಂಚಾಲಿ’ ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರವಾಗಿ ದಾಖಲಾಗುತ್ತದೆ
 • ಕನ್ನಡದ ಶ್ರೇಷ್ಠ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು, ತಾವು ಕೂಡ ಈ ಚಿತ್ರದಿಂದ ಚಿತ್ರದಿಂದ ಪ್ರಭಾವಿತರಾಗಿರುವುದಾಗಿ ಹೇಳುತ್ತಾರೆ
 • ಒಂದು ಚಿತ್ರ ಕ್ಲಾಸಿಕ್ ಎನಿಸಿಕೊಳ್ಳುವುದು ಅದರ ಶಕ್ತಿ, ಸತ್ವದಿಂದ. 62 ವರ್ಷಗಳ ನಂತರವೂ ಈ ಸಿನಿಮಾ ನಮಗೆ ಹೊಸದಾಗಿ ಕಾಣಿಸುತ್ತದೆ
 • ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊಟ್ಟಮೊದಲ ಭಾರತೀಯ ಸಿನಿಮಾ ‘ಪಥೇರ್ ಪಾಂಚಾಲಿ’
 • ಭಾರತದ ಬಡತನವನ್ನು ವಿಶ್ವಕ್ಕೆ ತೋರಿಸಿದ ಚಿತ್ರ ಎನ್ನುವ ಟೀಕೆಗೂ ಈ ಸಿನಿಮಾ ಒಳಗಾಗುತ್ತದೆ
 • ಟೀಕೆಗಳ ಹೊರತಾಗಿಯೂ ಈ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯುನ್ನತ ಶ್ರೇಷ್ಠ ಚಿತ್ರವಾಗಿ ನಿಲ್ಲುತ್ತದೆ
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More