ಐ ಡಿಬೇಟ್ 5 | ಸಾವಿರಾರು ಕೆರೆಗಳಿದ್ದರೂ ತುಮಕೂರು ಬರಕ್ಕೆ ಸಿಕ್ಕಿದ್ದೇಕೆ?

ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೆರೆಗಳಿರುವ ಕೆಲವೇ ಜಿಲ್ಲೆಗಳಲ್ಲಿ ತುಮಕೂರು ಕೂಡ ಒಂದು. ಆದರೆ ವರ್ಷದಿಂದ ವರ್ಷಕ್ಕೆ ಬರ ಹೆಚ್ಚುತ್ತಿದೆ ಎನ್ನಲಾಗುತ್ತಿದೆ. ಮಳೆಯಂತೂ ವಾಡಿಕೆಯಷ್ಟು ಬರುತ್ತಲೇ ಇದೆ. ಹಾಗಾದರೆ ಬರ ಬಂದಿದ್ದು ಹೇಗೆ, ಇದರ ಹಿಂದಿನ ರಾಜಕೀಯವೇನು ಎಂಬುದರ ಕುರಿತ ಚರ್ಚೆ ಇಲ್ಲಿದೆ

 • ಇನ್ನೇನು ಬೇಸಿಗೆ ಆರಂಭವಾಗುತ್ತದೆ. ‘ನೀರಿಗಾಗಿ ಹಾಹಾಕಾರ’ ಎಂಬ ಸುದ್ದಿಗಳು ಹರಿದಾಡುತ್ತವೆ
 • ಇದ್ದಕ್ಕಿದ್ದಂತೆ ಜಲಮೂಲಗಳು ಮತ್ತು ನೀರಿನ ಸಂರಕ್ಷಣೆ ಬಗೆ ಗಂಭೀರ ಚರ್ಚೆ ಶುರುವಾಗುತ್ತದೆ
 • ಸದಾ ಬರಕ್ಕೆ ತುತ್ತಾಗುತ್ತಲೇ ಬರುತ್ತಿರುವ ತುಮಕೂರಿಗೂ ಇಂಥ ಸುದ್ದಿ, ಚರ್ಚೆ ಹೊಸತೇನಲ್ಲ
 • ಆದರೆ ಬಹುತೇಕರು ಅಂದುಕೊಳ್ಳುವಂತೆ ತುಮಕೂರು ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿಲ್ಲ
 • ತುಮಕೂರಿನಲ್ಲಿ ವಾಡಿಕೆ ಮಳೆ ಬರುತ್ತಲೇ ಇದ್ದರೂ ಬರ ಹೆಚ್ಚುತ್ತಲೇ ಇರುವುದಕ್ಕೆ ಕಾರಣಗಳಿವೆ
 • ಅಸಲಿಗೆ, ತುಮಕೂರು ಜಿಲ್ಲೆಯನ್ನು ಪೊರೆಯುತ್ತಿರುವ ಜಲಮೂಲವೆಂದರೆ ಕೆರೆಗಳು ಮಾತ್ರ
 • ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಈ ಜಿಲ್ಲೆಯನ್ನು ಬರ ಬೇಟೆಯಾಡುತ್ತಿದೆ
 • ಜಿಲ್ಲೆಯ ಜನ ಇನ್ನೆಲ್ಲಿಂದಲೋ ನೀರು ಬರುತ್ತದೆ, ನದಿ ತಿರುವು ಆಗುತ್ತದೆಂದು ಕಾಯುತ್ತಿದ್ದಾರೆ
 • ಇಂಥ ದುಸ್ಥಿತಿಗೆ ಮುಖ್ಯ ಕಾರಣ ಮಳೆಯ ಕೊರತೆಯಲ, ಬದಲಾಗಿ ಇಚ್ಛಾಶಕ್ತಿಯ ಕೊರತೆ
 • ಮರಳು ಮಾಫಿಯಾ ಮತ್ತು ಕೆರೆ ಒತ್ತುವರಿ ತುಮಕೂರು ಜಿಲ್ಲೆಯನ್ನು ಬರದ ದವಡೆಗೆ ನೂಕಿವೆ
 • ಮರಳು ಮಾಫಿಯಾದ ಹಿಂದೆ ಪ್ರಭಾವಿ ರಾಜಕಾರಣಿಗಳು ಇರುವುದರಿಂದ ಜನ ಪ್ರಶ್ನಿಸುತ್ತಿಲ್ಲ
 • ಕೆರೆ ಪ್ರದೇಶ ಒತ್ತುವರಿಯಲ್ಲಿ ಕೂಡ ಜನಪ್ರತಿನಿಧಿಗಳ ಕೈವಾಡ ಮೇಲ್ನೋಟಕ್ಕೇ ಕಾಣಿಸುತ್ತದೆ
 • ಪ್ರಭಾವಿಗಳ ಅಟಾಟೋಪಕ್ಕೆ ಸಿಲುಕಿದ ಜಿಲ್ಲೆಯ ಕೆರೆಗಳು ನೀರಿಲ್ಲದೆ ಬಣಗುಟ್ಟುತ್ತಿವೆ
 • ಬರ ಎಂದಾಕ್ಷಣ ಜಿಲ್ಲಾಡಳಿತದತ ಅಥವಾ ಸರ್ಕಾರದತ ನೋಡುವುದೇ ಚಾಲ್ತಿಯಲ್ಲಿದೆ
 • ಸಮಸ್ಯೆ ನಮ್ಮಲ್ಲಿಯೇ ಇರುವಾಗ ಅದನ್ನು ಪರಿಹರಿಸಿಕೊಳ್ಳಬೇಕಿರುವವರೂ ನಾವೇ ಅಲ್ಲವೇ?
 • ಜಿಲ್ಲೆಯ ಜಲಮೂಲಗಳ ಪುನಶ್ಚೇತನದಿಂದ ಮಾತ್ರವೇ ಬರವನ್ನು ಶಾಶ್ವತವಾಗಿ ದೂರ ಇಡಬಹುದು
 • ನಿರ್ದಾಕ್ಷಿಣ್ಯವಾಗಿ ಕೆರೆ ಪ್ರದೇಶ ಒತ್ತುವರಿ ತೆರವುಗೊಳಿಸುವುದು ಮೊದಲ ಆದ್ಯತೆ ಆಗಬೇಕಿದೆ
 • ಮರಳು ಮಾಫಿಯಾ ಹತ್ತಿಕ್ಕಬೇಕಿರುವುದು ಕೂಡ ಕೆರೆಗಳನ್ನು ಸಂರಕ್ಷಿಸುವ ಬಹುಮುಖ್ಯ ದಾರಿ
 • ತೆಂಗು, ಅಡಿಕೆಯಂಥ ಆದಾಯ ಮೂಲದ ಗಿಡಮರಗಳ ಜೊತೆಗೆ ಅರಣ್ಯೀಕರಣ ಕೂಡ ತುರ್ತು
 • ನಮ್ಮೂರಿನ ಕೆರೆಗಳನ್ನು ನಾವು ರಕ್ಷಿಸುವ ಕಡೆ ಗಮನ ಹರಿಸಿದರೆ ದೂರುವ ಪರಿಸ್ಥಿತಿಯೇ ಬರುವುದಿಲ್ಲ
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More