ಸೌಹಾರ್ದ ಮಾತು | 32 ವರ್ಷದ ದಾಂಪತ್ಯ ಮೆಲುಕು ಹಾಕಿದ ಉಷಾ, ಖಾದರ್

ಕೆಲವು ಸಂದರ್ಭಗಳಲ್ಲಿ ಜಾತಿ, ಧರ್ಮ, ಕೋಮು ಹಾಗೂ ಭಾಷೆಗಳ ಗಡಿಗಳನ್ನೂ ದಾಟಿ ಮನುಷ್ಯ ಸಂಬಂಧಗಳು ಬೆಳೆದು ನಿಲ್ಲುತ್ತವೆ. ಇಂಥ ಬಂಧಕ್ಕೆ ಸಾಕ್ಷಿಯಾಗಿರುವುದು ಉಷಾ-ಖಾದರ್ ದಂಪತಿ. ತಮ್ಮ ಸುಂದರ ಬದುಕಿನ ಬಗ್ಗೆ ‘ದಿ ಸ್ಟೇಟ್’ ಜೊತೆ ಅವರ ಮಾತನಾಡಿರುವ ವಿಡಿಯೊ ಇಲ್ಲಿದೆ

ಹೋಮಿಯೋಪತಿ ವೈದ್ಯ ಡಾ.ಖಾದರ್ ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಉಷಾ ಅವರದ್ದು ಬೆಂಗಳೂರಿನ ಸಂಪ್ರದಾಯಸ್ಥ ಕುಟುಂಬ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾರ್ಥಿಗಳಾಗಿದ್ದಾಗ (೧೯೮೧-೮೨) ಇಬ್ಬರ ಪರಿಚಯ. ಪರಿಚಯ ಪ್ರೇಮಕ್ಕೆ ತಿರುಗಿತು. ಈ ಮಧ್ಯೆ, ಉಷಾ ಬ್ಯಾಂಕ್ ನೌಕರಿಗೆ ಸೇರಿದರು. ಖಾದರ್ ಪಿಎಚ್‌ಡಿ ಮುಂದುವರಿಸಿದರು. ಆದಾದ ಮೂರು ವರ್ಷಕ್ಕೆ (೧೯೮೫ ಡಿಸೆಂಬರ್) ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. “ನನಗೆ ಜಾತಿ, ಧರ್ಮ ಯಾವುದರ ಅಡ್ಡಿಯೂ ಇರಲಿಲ್ಲ. ಆದರೆ, ಆಹಾರ ಕ್ರಮ ಸಮಸ್ಯೆ ಆಗಬಹುದೆಂದುಕೊಂಡಿದ್ದೆ; ಮಾಂಸಾಹಾರ ಮಾಡಲು ಬರುವುದಿಲ್ಲ ಎನ್ನುವ ಕಾರಣಕ್ಕೆ. ಆದರೆ, ಖಾದರ್ ತಮ್ಮ ೧೫ನೇ ವಯಸ್ಸಿನಲ್ಲೇ ಮಾಂಸಾಹಾರ ತ್ಯಜಿಸಿದ್ದರಂತೆ. ಆದ್ದರಿಂದ ಸಮಸ್ಯೆಯೇ ಇರಲಿಲ್ಲ,” ಎನ್ನುತ್ತಾರೆ ಉಷಾ. ಆದರೆ, ಉಷಾ ಮನೆಯಲ್ಲಿ ವಿರೋಧ ವ್ಯಕ್ತವಾಯಿತು. ಇವರು ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಗೆಳೆಯರ ಬೆಂಬಲದೊಂದಿಗೆ, ವಿವಾಹ ನೋಂದಣಿ ಮಾಡಿಸಿದರು. “ನೋಂದಣಿ ವೆಚ್ಚ, ಬಂದ ಸ್ನೇಹಿತರಿಗೆ ಎಳೆನೀರು ಕುಡಿಸಿದ್ದೂ ಸೇರಿ ಆದ ಮದುವೆ ಖರ್ಚು ೩೩ ರು.ಗಳಷ್ಟೆ,” ಎಂದರು ಖಾದರ್.

ಇದನ್ನೂ ಓದಿ : ಸೌಹಾರ್ದ ಮಾತು | ೨೫ ವರ್ಷದ ದಾಂಪತ್ಯ ಮೆಲುಕು ಹಾಕಿದ ಉಷಾ, ಇಸ್ಮಾಯಿಲ್‌

ಆರಂಭದಲ್ಲಿ ವಿರೋಧಿಸಿದ್ದ ಉಷಾ ಮನೆಯವರು ಒಂದೆರಡು ವರ್ಷದಲ್ಲಿ ಒಪ್ಪಿಕೊಂಡರು. “ಖಾದರ್ ಅವರಿಗೆ ದೇವರು, ಧರ್ಮಗಳ ಬಗ್ಗೆ ಅಷ್ಟೊಂದು ನಂಬಿಕೆ ಇಲ್ಲ. ನಾನು ದೇವರನ್ನು ಪೂಜಿಸುವೆ. ಅದಕ್ಕೆ ಅವರ ಆಕ್ಷೇಪವೇನಿಲ್ಲ,”ಎನ್ನುತ್ತಾರೆ ಉಷಾ. ಸಿಹಿ ಮಾಡಿದ ದಿನವೇ ಇವರ ಮನೆಯಲ್ಲಿ ಹಬ್ಬ. “ನಾವು ಯಾವ ಧರ್ಮಕ್ಕೂ ಸೇರಿದವರಲ್ಲ. ಮನುಷ್ಯರು ಎಂದುಕೊಳ್ಳುವುದೂ ಇಲ್ಲ. ಉಳಿದ ಜೀವಿಗಳಂತೆ ಸಹಜವಾಗಿ ಬದುಕುತ್ತಿದ್ದೇವೆ. ಮಗಳನ್ನೂ ಭಾರತೀಯಳನ್ನಾಗಿ ಬೆಳೆಸಿದ್ದೇವೆ ಎನ್ನುವುದು ಈ ದಂಪತಿಯ ಅಭಿಪ್ರಾಯ. ತಮ್ಮ ೩೩ ವರ್ಷದ ಅರ್ಥಪೂರ್ಣ ಸಹಜ ಬದುಕಿನ-ಸಹಬಾಳ್ವೆಯ ಪಯಣವನ್ನು ಅವರು ನಮ್ಮ ಜೊತೆ ಹಂಚಿಕೊಂಡಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More