ನೆಲಮಂಡಲ | ಕಂತು 6 | ಪ್ರೇಮಿಗಳ ದಿನದ ನೆಪದಲ್ಲಾದರೂ ಹೂವಿನ ಬಗ್ಗೆ ಯೋಚಿಸೋಣ

ಪ್ರೇಮಿಗಳ ದಿನ ಬಂತೆಂದರೆ ಕಣ್ಮುಂದೆ ಬರುವುದು ಗುಲಾಬಿ ಹೂಗಳ ಗುಚ್ಛ. ಒಂದು ವಾರ ಮುಂಚಿನಿಂದಲೇ ಬೆಂಗಳೂರಿನಲ್ಲಿ ಗುಲಾಬಿ ರಫ್ತು ಕೂಡ ರಂಗೇರುತ್ತದೆ. ಗುಲಾಬಿ ಬಗ್ಗೆ ಇಷ್ಟೆಲ್ಲ ಒಲವಿರುವ ನಮಗೆ ಅದರ ಕೃಷಿಯನ್ನು ಸುಧಾರಿಸುವ ಕಡೆ ಗಮನ ಇದ್ದಂತಿಲ್ಲ ಎನ್ನುತ್ತಾರೆ ನಾಗೇಶ ಹೆಗಡೆ

ಈ ಕಂತಿನ ಮುಖ್ಯಾಂಶಗಳು

 • ಪ್ರೇಮಿಗಳ ದಿನ ಬಂತೆಂದರೆ ಎಲ್ಲರ ಕಣ್ಮುಂದೆ ಬರುವುದು ಚಂದದ ಗುಲಾಬಿ ಹೂಗಳ ಗುಚ್ಛ
 • ಮೈಸೂರು ಪ್ರಾಂತ್ಯದ ಗುಲಾಬಿ ಮೊದಲಿನಿಂದಲೂ ಪ್ರಸಿದ್ಧ, ಈಗಲೂ ವಿಶ್ವಾದ್ಯಂತ ಮನ್ನಣೆ ಇದೆ
 • ಪ್ರೇಮಿಗಳ ದಿನದ ಒಂದು ವಾರ ಮುಂಚಿನಿಂದಲೇ ಬೆಂಗಳೂರಿನಲ್ಲಿ ಗುಲಾಬಿ ರಫ್ತು ರಂಗೇರುತ್ತದೆ
 • ಬೆಂಗಳೂರು ನಗರವನ್ನು ಭಾರತದ ‘ಪುಷ್ಪ ರಫ್ತು ರಾಜಧಾನಿ’ ಅಂತಲೇ ಪರಿಗಣಿಸಲಾಗುತ್ತಿದೆ
 • ನಮಗೆ ಮೈಸೂರು ಅಂದಾಕ್ಷಣ ಮಲ್ಲಿಗೆ ನೆನಪಾಗುವಂತೆ, ಗುಲಾಬಿಗೆ ಬೆಂಗಳೂರು ಕೂಡ ಪ್ರಸಿದ್ಧ
 • ಆದರೆ ಬೆಂಗಳೂರು ಅಂದಾಕ್ಷಣ ಗುಲಾಬಿಯನ್ನು ನೆನಪಿಸಿಕೊಳ್ಳುವವರು ನಾವಲ್ಲ, ವಿದೇಶಿಯರು!
 • ಗುಲಾಬಿ ಬಗ್ಗೆ ಇಷ್ಟೆಲ್ಲ ಒಲವಿರುವ ನಮಗೆ ಅದರ ಕೃಷಿಯನ್ನು ಸುಧಾರಿಸುವ ಬಗ್ಗೆ ಗಮನ ಇದ್ದಂತಿಲ್ಲ
 • ಸಾವಯವ ಅಕ್ಕಿ-ತರಕಾರಿ ಅಂತೆಲ್ಲ ಮಾತನಾಡುವ ನಾವು ಸಾವಯವ ಹೂವಿನ ಬಗ್ಗೆ ಚಿಂತಿಸಿಲ್ಲ
 • ಅಸಲಿಗೆ, ಗುಲಾಬಿ ಹೂಗಳ ಕೃಷಿ ತಂತ್ರಜ್ಞಾನವೆಲ್ಲ ಯುರೋಪಿನ ರಾಷ್ಟ್ರಗಳಿಂದ ನಮಗೆ ಸಿಕ್ಕ ಬಳುವಳಿ
 • ಅದಕ್ಕೂ ಮೊದಲೇ ನಮ್ಮಲ್ಲಿ ಗುಲಾಬಿ ಬೆಳೆಯುತ್ತಿದ್ದರಾದರೂ ತಾಂತ್ರಿಕತೆ ಬಳಕೆ ಆಗುತ್ತಿರಲಿಲ್ಲ
 • ಯುರೋಪಿನಲ್ಲಿ ಬೇಡವೆಂದು ಬಿಟ್ಟ, ವರ್ಗಾವಣೆ ಮಾಡಿದ ಕೃಷಿ ಪದ್ಧತಿಯೇ ನಮ್ಮಲ್ಲಿ ಮುಂದುವರಿದಿದೆ
 • ವಿದೇಶದಿಂದ ವರ್ಗಾವಣೆ ಆದ ಪುಷ್ಪಕೃಷಿಯಲ್ಲಿ ಕೀಟನಾಶಕ, ರಸಗೊಬ್ಬರವೂ ಇರುವುದು ಅಪಾಯಕಾರಿ
 • ಹೂವುಗಳನ್ನು ನಾವು ಸಂತಸಕ್ಕಾಗಿ ಅವಲಂಬಿಸಿದ್ದೇವಷ್ಟೆ. ಆದರೆ ಅದಷ್ಟೇ ಹೂವಿನ ಉಪಯೋಗವಲ್ಲ
 • ಪುಷ್ಪಸಂಕುಲವನ್ನು ಆಶ್ರಯಿಸಿ ಜೇನ್ನೊಣ, ಕೀಟಗಳು, ಚಿಟ್ಟೆ ಮುಂತಾದವು ಬದುಕು ಕಟ್ಟಿಕೊಂಡಿವೆ
 • ಪರಿಸರದ ಇಂಥ ಸೂಕ್ಷ್ಮ ರಚನೆಯನ್ನು ಗಮನಿಸದ ನಾವು ನಮ್ಮ ಖುಷಿಯನ್ನಷ್ಟೇ ನೋಡುತ್ತಿದ್ದೇವೆ
 • ಕೀಟನಾಶಕ, ರಸಗೊಬ್ಬರ ಮುಂತಾದ ಅಪಾಯಕಾರಿ ರಾಸಾಯನಿಕಗಳನ್ನು ಎಗ್ಗಿಲ್ಲದೆ ಬಳಸುತ್ತಿದ್ದೇವೆ
 • ಪ್ರೇಮಿಗಳ ದಿನದ ನೆಪದಲ್ಲಾದರೂ ಪುಷ್ಪಕೃಷಿಯನ್ನು ರಾಸಾಯನಿಕಮುಕ್ತ ಮಾಡುವತ್ತ ಚಿಂತಿಸಬೇಕಿದೆ
 • ಸಾವಯವ ತರಕಾರಿ, ಆಹಾರಧಾನ್ಯಗಳನ್ನು ಬೆಳೆದಂತೆ ಹೂಗಳನ್ನೂ ಬೆಳೆಯಲು ನಮ್ಮಿಂದ ಸಾಧ್ಯ

ಹಿಂದಿನ ಕಂತುಗಳು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More