ಸಿ ಎನ್‌‌ ಅಶ್ವಥ್‌ ನಾರಾಯಣ್‌ ಮನದ ಮಾತು| ಕಾಂಗ್ರೆಸ್ಸೇ ಕೋಮುವಾದಿ ಪಕ್ಷ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿ.ಎನ್‌ ಅಶ್ವಥ್‌ ನಾರಾಯಣ್‌ ಅವರು ವಿವಾದಗಳಿಂದ ಅಂತರ ಕಾಯ್ದುಕೊಂಡವರು. ‘ದಿ ಸ್ಟೇಟ್‌’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ, ಪಕ್ಷದ ಚಟುವಟಿಕೆ, ರಾಜ್ಯ ಸರ್ಕಾರದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ

 • ಜನರ ಅನುಕೂಲಕ್ಕಾಗಿ ಬಿಬಿಎಂಪಿ ಮಲ್ಲೇಶ್ವರ ಸಹಾಯವಾಣಿ ತೆರೆದಿದ್ದೇವೆ. ಆನ್‌ಲೈನ್‌ ಮೂಲಕ ಜನರು ದೂರು ದಾಖಲಿಸಬಹುದು. ದೂರಿನ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲಾಗುವುದು. ಕ್ಷೇತ್ರದಲ್ಲಿ 8-10 ಸಾವಿರ ಗಿಡಗಳನ್ನು ಬೆಳೆಸಲಾಗಿದೆ.
 • ಜನರಿಗೆ ವಿವಿಧ ರೀತಿಯ ಮಾಹಿತಿ ನೀಡಲು ಅಶ್ವಥ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲಾಗಿದೆ. ಅಶ್ವಥ್‌ ನಾರಾಯಣ್‌ ಫೌಂಡೇಶನ್‌‌ನಿಂದ ಪ್ರತಿವರ್ಷ 5 ಸಾವಿರ ಮಕ್ಕಳಿಗೆ ಕನಿಷ್ಠ 2 ಸಾವಿರ ಶಿಷ್ಯವೇತನ ನೀಡಲಾಗುತ್ತಿದೆ.
 • ಪಾರ್ಕಿಂಗ್‌ ಮತ್ತು ಟ್ರಾಫಿಕ್‌ ಸಮಸ್ಯೆ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಪಾರ್ಕಿಂಗ್‌ ಪಾಲಿಸಿ ಜಾರಿಗೆ ತರಬೇಕು. ಪಾರ್ಕಿಂಗ್‌ ಸ್ಲಾಟ್‌ ಮಾಡಬೇಕು.
 • 2004ರಿಂದ ಮಲ್ಲೇಶ್ವರಂನಲ್ಲಿ ಪಕ್ಷವನ್ನು ಕಟ್ಟಲು ಸಾಕಷ್ಟು ಶ್ರಮಿಸಿದ್ದೇನೆ. ಕೆಲವರು ಎಲ್ಲಿಂದಲೋ ಉದ್ಭವವಾಗಿ, ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಜಾತಿಯ ಪ್ರಯೋಗ ನಡೆಯುತ್ತಿದೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ.
 • 2004, 2008ರಲ್ಲೂ ಎಂ.ಆರ್‌. ಸೀತಾರಾಂ ಎದುರಾಳಿಯಾಗಿದ್ದರು. ನಮ್ಮ ಶಕ್ತಿಯ ಮೇಲೆ ನಂಬಿಕೆ ಇಡಬೇಕು. ಎದುರಾಳಿ ಮುಖ್ಯವಲ್ಲ.
 • ಶಾಸನ ಸಭೆ, ಮಾಧ್ಯಮ, ಸಾಮಾಜಿಕ ಮಾಧ್ಯಮಕ್ಕಿಂತ ವೇದಿಕೆ ಬೇಕಾಗಿಲ್ಲ. ಪಕ್ಷವು ನನ್ನನ್ನು ಗುರುತಿಸಿದರೆ ಒಳ್ಳೆಯದು. ಇಲ್ಲವಾದರೂ ಸಮಸ್ಯೆಯಿಲ್ಲ. ಕಚ್ಚಾಟ ನಡೆಸುವುದರಲ್ಲಿ ಅರ್ಥವಿಲ್ಲ. ಮಾಡುವುದಕ್ಕೆ ಸಾಕಷ್ಟು ಕೆಲಸವಿದೆ.
 • ಎಲ್ಲರಿಗೂ ಜವಾಬ್ದಾರಿ ಇದೆ. ಕಚ್ಚಾಟಕ್ಕೆ ಆಸ್ಪದ ನೀಡಬಾರದು. ಯಾರಾದರೂ ಕಚ್ಚಾಟ ಮಾಡುತ್ತಿದ್ದರೆ ಅದು ಮೂರ್ಖತನ.
 • ಪ್ರಧಾನಿ ನರೇಂದ್ರ ಮೋದಿ ಪ್ರಶ್ನಾತೀತವಾಗಿ ನಮ್ಮ ನಾಯಕ. ಬಿಜೆಪಿಗೆ ನಾಯಕತ್ವದ ಕೊರತೆ ಇಲ್ಲ. ಸಾಕಷ್ಟು ಪ್ರಬಲ ನಾಯಕರಿದ್ದಾರೆ. ಪ್ರಧಾನಿಗೆ ಉಳಿದವರನ್ನು ಹೋಲಿಕೆ ಮಾಡಬಾರದು. ಪರಿಸ್ಥಿತಿಗೆ ಅನುಗುಣವಾಗಿ ಸ್ಪಂದಿಸುವ ನಾಯಕರು ಬಿಜೆಪಿಯಲ್ಲಿದ್ದಾರೆ.
 • ಗುಜರಾತ್‌ನಲ್ಲಿ ಅಲ್ಫೇಶ್‌ ಠಾಕೂರ್, ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌‌ ಮೇವಾನಿಯಂಥ ಅವಕಾಶವಾದಿಗಳು ಒಂದಾದರು. ಗುಜರಾತ್‌ನಲ್ಲಿ ವಿರೋಧಿಗಳಿಂದ ಸಿದ್ಧಾಂತವಿಲ್ಲದ ಹೋರಾಟವಾಗಿತ್ತು. ಕರ್ನಾಟಕದಲ್ಲಿ ಆ ಸ್ಥಿತಿ ಇಲ್ಲ.
 • ಬಿಜೆಪಿಯಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯಿದೆ. ಅರ್ಹತೆಯೇ ಮಾನದಂಡ.
 • ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ.
 • ಕರ್ನಾಟಕವನ್ನು ಸಿಎಂ ಸಿದ್ದರಾಮಯ್ಯ 25 ವರ್ಷ ಹಿಂದಕ್ಕೆ ಕೊಂಡೊಯ್ದಿದ್ದಾರೆ. ಆದ್ದರಿಂದ ಸಿಎಂ ಎದುರಾಳಿಯೇ ಅಲ್ಲ.
 • ಪಕ್ಷವು ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಕಾಂಗ್ರೆಸ್‌ನವರೇ ಕೋಮುವಾದಿಗಳು, ಬಿಜೆಪಿ ಜಾತ್ಯತೀತ ಪಕ್ಷ.
 • ಏಕರೂಪ ನಾಗರಿಕ ಸಂಹಿತೆಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿಲ್ಲ. ಯಾವುದರಲ್ಲೂ ಕಾಂಗ್ರೆಸ್‌ ನಿಲುವು ಕೈಗೊಳ್ಳಲಾಗುತ್ತಿಲ್ಲ.
 • ಕಾಂಗ್ರೆಸ್‌ ಜನರ ಭಾವನೆಗಳನ್ನು ಗೌರವಿಸುವುದಿಲ್ಲ. ಓಲೈಕೆ ರಾಜಕಾರಣ ಮಾಡುತ್ತದೆ.
ಇದನ್ನೂ ಓದಿ : ಕಲ್ಲಡ್ಕ ಪ್ರಭಾಕರ ಭಟ್‌ ಸಂದರ್ಶನ | ‘ಹಿಂದೂಗಳು ಓಡಿಸೋರೂ ಅಲ್ಲ, ಓಡೋರೂ ಅಲ್ಲ’
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More