ಐ ಡಿಬೇಟ್ 7 | ನೀರವ್ ಮೋದಿ ಬ್ಯಾಂಕ್ ಲೂಟಿಗೆ ರಾಜಕೀಯ ಪಕ್ಷಗಳೇ ಕಾರಣವಲ್ಲವೇ?

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿರುವ ₹೧೧,೩೦೦ ಕೋಟಿ ವಂಚನೆ ಪ್ರಕರಣದಿಂದ ಬ್ಯಾಂಕಿಂಗ್ ವಲಯ ತಲ್ಲಣಗೊಂಡಿದೆ. ಆರೋಪಿ ನೀರವ್ ಮೋದಿ ದೇಶ ಬಿಟ್ಟು ಹೋಗಿದ್ದಾರೆ. ಈ ಪ್ರಕರಣದ ಒಳಹೊರಗಿನ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಚರ್ಚಿಸಿದ್ದಾರೆ

ಚರ್ಚೆಯ ಮುಖ್ಯಾಂಶಗಳು

 • ಉದ್ಯಮಿ ನೀರವ್ ಮೋದಿ ಪ್ರಕರಣ ಭಾರತದ ರಾಜಕೀಯ, ಆರ್ಥಿಕ ತಾರತಮ್ಯದ ಕೈಗನ್ನಡಿ
 • ಬಡವರ ಉದ್ಧಾರಕ್ಕೆ ಹಣ ಬಳಸಲು ಹಿಂದೆಮುಂದೆ ನೋಡುವುದು ಎಲ್ಲ ಸರ್ಕಾರಗಳ ಕಾಯಿಲೆ
 • ಉದ್ಯಮಿಗಳ ಉಡಿಗೆ ಮಾತ್ರ ಸಾವಿರಾರು ಕೋಟಿ ಹಣ ಸುರಿಯುವುದು ಸರ್ಕಾರಗಳಿಗೆ ಸುಲಭ
 • ದೇಶದ ಅಭಿವೃದ್ಧಿ ಎಂದರೆ ಉದ್ಯಮಿಗಳ ಅಭಿವೃದ್ಧಿ ಎಂದುಕೊಂಡಿರುವುದು ಇದಕ್ಕೆ ಕಾರಣ
 • ಅಭಿವೃದ್ಧಿ ಹೆಸರಲ್ಲಿ ಇಂಥ ಬೆಳವಣಿಗೆಗೆ, ಬ್ಯಾಂಕ್‌ಗಳ ಹಣ ಲೂಟಿಗೆ ಹೆದ್ದಾರಿ ಮಾಡಿಕೊಡಲಾಗಿದೆ
 • ಆರ್ಥಿಕವಾಗಿ ಹಿಂದುಳಿದವರ ಏಳ್ಗೆಯೇ ಅಭಿವೃದ್ಧಿ ಎಂಬ ಕನಿಷ್ಠ ಪ್ರಜ್ಞೆಯೂ ಸರ್ಕಾರಗಳಿಗಿಲ್ಲ
 • ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಕೇವಲ ಮತಬ್ಯಾಂಕ್ ಎಂಬ ಉಡಾಫೆ ಇದೆ
 • ಸರ್ಕಾರಗಳು, ರಾಜಕೀಯ ಪಕ್ಷಗಳು ಬ್ಯಾಂಕ್ ಲೂಟಿಗೆ ಪರೋಕ್ಷ ಸಹಾಯ ಮಾಡುತ್ತಲೇ ಇವೆ
 • ಇಂಥ ಹಗರಣಗಳು ಬೆಳಕಿಗೆ ಬಂದಾಗ ನಡೆಯುವುದು ರಾಜಕೀಯ ಪಕ್ಷಗಳ ಕೆಸರೆರಚಾಟ ಮಾತ್ರ
 • ಹಗರಣದ ಸಂಪೂರ್ಣ ಮಾಹಿತಿ ಪಡೆಯುವುದೂ ಈ ಪ್ರಜಾಪ್ರಭುತ್ವ ದೇಶದಲ್ಲಿ ಅಸಾಧ್ಯ!
 • ಹಗರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಗಗನಕುಸಮವೇ ಸರಿ
 • ಭಾರತದಲ್ಲಿ ರಾಜಕೀಯ ಪಕ್ಷಗಳ ‘ಉದ್ಯಮ ಪ್ರೀತಿ’ಗೆ ನೀರವ್ ಮೋದಿ ಹೊಸ ಸೇರ್ಪಡೆಯಷ್ಟೆ
 • ಈ ಹಿಂದೆ ವಿಜಯ್ ಮಲ್ಯ ಪರಾರಿ ಆದಾಗಲೂ ಚಾಲ್ತಿಯಲ್ಲಿ ಇದ್ದದ್ದು ಇದೇ ರೀತಿಯ ಚರ್ಚೆ
 • ಉದ್ಯಮಿ ಕೊಳ್ಳೆ ಹೊಡೆದು ಪರಾರಿ ಆದಾಗ ಮಾತ್ರ ಇಂಥ ಕ್ರಮದ ಮಾತುಗಳು ಕೇಳಿಬರುತ್ತವೆ
 • ಸ್ವಲ್ಪ ದಿನಕ್ಕಾಗಲೇ ಜನ ಎಲ್ಲವನ್ನೂ ಮರೆತು ರಾಜಕೀಯ ಪಕ್ಷಗಳಿಗೆ ಜೈಕಾರ ಹಾಕತೊಡಗುತ್ತಾರೆ
 • ದೇಶದಲ್ಲಿ ಇಂಥ ಲೂಟಿಗಳು ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ರಾಜಕೀಯ ಪಕ್ಷಗಳು
 • ರಾಜಕೀಯ ಪಕ್ಷಗಳ ಹಣದಾಸೆಯಿಂದಲೇ ಇಂಥ ಹಗರಣಗಳಿಗೆ ಕುಮ್ಮಕ್ಕು ಸಿಗುತ್ತ ಬಂದಿದೆ
 • ಪಾರ್ಟಿ ಫಂಡ್‌ಗಾಗಿ ಏನು ಮಾಡಲೂ ಹಿಂದೆಮುಂದೆ ನೋಡದ ಪಕ್ಷಗಳು ಇಂಡಿಯಾದಲ್ಲಿವೆ
 • ಇಂಥ ರಾಜಕೀಯ ಗುಟ್ಟುಗಳನ್ನು ಯುವಜನ ಅರಿತು ತಕ್ಕ ಪಾಠ ಕಲಿಸುವುದು ಸದ್ಯದ ತುರ್ತು
 • ಯುವಜನ ಮನಸ್ಸು ಮಾಡಿದರೆ ದೀರ್ಘ ಕಾಲಾವಧಿಯಲ್ಲಿ ಒಳ್ಳೆಯ ಪರಿಣಾಮ ಸಾಧ್ಯ

ಹಿಂದಿನ ಡಿಬೇಟ್‌ಗಳು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More