ಎ ಕೆ ಸುಬ್ಬಯ್ಯ ಮನದ ಮಾತು | ಪ್ರಧಾನಿ ಮೋದಿ ಪರ್ವವೂ ಮುಗಿಯಲಿದೆ

ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ ಎ ಕೆ ಸುಬ್ಬಯ್ಯ ಅವರ ಅಭಿನಂದನಾ ಗ್ರಂಥ ‘ದಾರಿ ದೀಪ’ ಮಂಗಳವಾರ ಬಿಡುಗಡೆಯಾಗಿದೆ. ಈ ನಿಮಿತ್ತ ‘ದಿ ಸ್ಟೇಟ್‌’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ರಾಜಕೀಯ ಏಳುಬೀಳು, ಸಮಕಾಲೀನ ರಾಜಕಾರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

 • ಸಂದರ್ಭಕ್ಕೆ ಅನುಗುಣವಾಗಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದೇನೆ. ನಡೆದು ಬಂದ ಹಾದಿಯ ಬಗ್ಗೆ ಪಶ್ಚಾತ್ತಾಪ ಇಲ್ಲ
 • ಕೋಮುವಾದಿಗಳ ಜತೆ ಕೆಲಸ ಮಾಡಿದ್ದರಿಂದ ಒಳ್ಳೆಯದೇ ಆಯಿತು, ಕೆಟ್ಟದರ ವ್ಯತ್ಯಾಸ ತಿಳಿಯಿತು
 • ರಾಜಕೀಯದಲ್ಲಿನ ಏಳು-ಬೀಳುಗಳನ್ನು ಸವಾಲು ಎಂದು ಪರಿಗಣಿಸಿ ಮುನ್ನಡೆದಿದ್ದೇನೆ
 • ಸವಾಲುಗಳೇ ದಾರಿದೀಪವಾಗಿ ನನ್ನನ್ನು ಮುನ್ನಡೆಸಿವೆ. ಎದುರಾಳಿಗಳು ನನ್ನ ಬದುಕು ರೂಪಿಸಿದ್ದಾರೆ. ಅವರಿಗೆ ಧನ್ಯವಾದ
 • ಬದಲಾವಣೆ ಪ್ರಕೃತಿಯ ನಿಯಮ ಎಂಬುದರ ಮೇಲೆ ನಂಬಿಕೆ ಇಟ್ಟುಕೊಂಡು ಬದುಕುತಿದ್ದೇನೆ
 • ಸ್ವಾರ್ಥಕ್ಕಾಗಿ ಬದಲಾವಣೆಯಾಗಿಲ್ಲ. ವೈಯಕ್ತಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇನೆ
 • ಹೋರಾಟದ ದೃಷ್ಟಿಯಿಂದ ಸಮರ್ಪಕ ವೇದಿಕೆಗಾಗಿ ಬದಲಾವಣೆ ಮಾಡಿಕೊಂಡಿದ್ದೇನೆ
 • ನನ್ನ ರಾಜಕೀಯ ವೇದಿಕೆ ಬದಲಾವಣೆಯನ್ನು ಪಕ್ಷಾಂತರಕ್ಕೆ ಹೋಲಿಕೆ ಮಾಡಲಾಗದು
 • ಅಗತ್ಯಕ್ಕಿಂತ ಹೆಚ್ಚು ಹಣ ಇಟ್ಟುಕೊಳ್ಳುವುದು ಒಂದು ಕಾಯಿಲೆ. ಅವೈದಿಕದಲ್ಲಿ ಬಹುತ್ವದ ಕಲ್ಪನೆ ಇದ್ದು. ಅದೇ ನಮ್ಮ ಸನಾತನ ಧರ್ಮ
 • ಈಗ ಧಾರ್ಮಿಕ ಫ್ಯಾಸಿಸಂ ಇದೆ. ಎಲ್ಲ ಪರ್ವಕಾಲಗಳೂ ಅಂತ್ಯ ಕಂಡಿವೆ. ಅಂತೆಯೇ ಮೋದಿಯವರು ಹೋಗುತ್ತಾರೆ. ಧಾರ್ಮಿಕ ಫ್ಯಾಸಿಸಂಗೆ ಇಂದಿನ ನಾಗರಿಕ ಸಮಾಜ ಸಮರ್ಥವಾಗಿ ಪ್ರತಿಕ್ರಿಯಿಸುತ್ತಿದೆ
 • ಆರ್‌ಎಸ್‌ಎಸ್‌, ಬಿಜೆಪಿ ಬಂಡವಾಳ ಬಟಾಬಯಲಾಗಿದೆ. ಆರ್‌ಎಸ್‌ಎಸ್‌, ಬಿಜೆಪಿಯನ್ನು ಬೆಳೆಸಿದ್ದಷ್ಟೇ ನಾಶ ಮಾಡಿದ್ದೇನೆ
 • ಎಲ್‌.ಜಿ. ಹಾವನೂರ ಮತ್ತು ಬಸವಲಿಂಗಪ್ಪ ಅವರು ನನ್ನನ್ನು ಆರ್‌ಎಸ್‌ಎಸ್‌ ತೊರೆಯುವಂತೆ ಮಾಡಿ ಅವರೇ ಅಲ್ಲಿಗೆ ಹೋಗಿ ಸೇರ್ಪಡೆಯಾದರು
 • ಮಾಜಿ ಸಿಎಂಗಳಾದ ಬಂಗಾರಪ್ಪ ಮತ್ತು ಕುಮಾರಸ್ವಾಮಿ ಬಿಜೆಪಿ ಬೆಳವಣಿಗೆಗೆ ಕಾರಣರು
 • ಅಧಿಕಾರ ವ್ಯಾಮೋಹಿಗಳು ಬಿಜೆಪಿ ಬಲಗೊಳ್ಳುವಂತೆ ಮಾಡಿದರು
ಇದನ್ನೂ ಓದಿ : ಜೈನ ವಿದ್ವಾಂಸ ಪದ್ಮಪ್ರಸಾದ್‌ ಮನದ ಮಾತು | ವಿಚಾರ ಸ್ವಾತಂತ್ರವಿರುವ ಧರ್ಮ ಬೇಕು
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More