ವೈರಲ್ ವಿಡಿಯೋ | ದೇಶಕ್ಕೆ ಕಾಂಗ್ರೆಸ್ ಕೊಡುಗೆ ವಿವರಿಸಿದ ರಾಹುಲ್ ಗಾಂಧಿ

ಸಿಂಗಾಪುರದ ಕಾರ್ಯಕ್ರಮವೊಂದರಲ್ಲಿ, ದೇಶದ ಆರ್ಥಿಕತೆಗೆ ನಿಮ್ಮ ಕುಟುಂಬದ ಕೊಡುಗೆ ಏನು ಎಂಬ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಉತ್ತರದ ವಿಡಿಯೋ ವೈರಲ್ ಆಗಿದೆ. “ಭಾರತದ ಯಶಸ್ಸು ಕಾಂಗ್ರೆಸ್‌ನಿಂದ ಆಗಿದ್ದಲ್ಲ, ಭಾರತೀಯರಿಂದ ಆಗಿದ್ದು,” ಎಂದಿದ್ದಾರೆ ರಾಹುಲ್

ಸಿಂಗಾಪುರದಲ್ಲಿ ನಡೆದ ಸಿಇಒಗಳ ನಡುವಿನ ಚರ್ಚೆಯಲ್ಲಿ ರಾಹುಲ್ ಗಾಂಧಿಯವರನ್ನು ಮುಜುಗರಕ್ಕೆ ಈಡುಮಾಡಲು ಪ್ರೇಕ್ಷಕರು ಯತ್ನಿಸಿದ ಘಟನೆ ನಡೆಯಿತು. ದೇಶದ ಆರ್ಥಿಕತೆಗೆ ನಿಮ್ಮ ಕುಟುಂಬದ ಕೊಡುಗೆ ಏನು ಎಂಬ ಪ್ರಶ್ನೆ ಪ್ರೇಕ್ಷಕ ವರ್ಗದಿಂದ ಬಂತು. ಇದಕ್ಕೆ ರಾಹುಲ್ ಗಾಂಧಿ ನಿರಾಳವಾಗಿ ಉತ್ತರಿಸಿದರು. ಅಲ್ಲದೆ, “ಭಾರತದ ಯಶಸ್ಸು ಕಾಂಗ್ರೆಸ್‌ನಿಂದ ಆಗಿದ್ದಲ್ಲ, ಭಾರತೀಯರಿಂದ ಆಗಿದ್ದು,” ಎಂದರು. ಆದರೆ, ಕೆಲ ಮಾಧ್ಯಮಗಳು ಸಿಂಗಾಪುರದಲ್ಲಿ ಮುಜುಗರಕ್ಕೀಡಾದ ರಾಹುಲ್ ಗಾಂಧಿ ಎಂದು ಸುದ್ದಿ ಮಾಡಿದವು! ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕಾಲೆಳೆಯುವ ಮಂದಿಗೆ ರಾಹುಲ್ ಗಾಂಧಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಹೇಳಿಕೊಂಡಿದೆ.

ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ
ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು
ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ
Editor’s Pick More