ನೆಲಮಂಡಲ | ಕಂತು 8 | ಪ್ಲಾಸ್ಟಿಕ್ ವಿಲೇವಾರಿ ಅಂದಾಕ್ಷಣ ಸೋಂಬೇರಿ ಆಗುವುದೇಕೆ?

ವಿಶ್ವಸಂಸ್ಥೆಯು ಈ ವರ್ಷದ ‘ಪರಿಸರ ದಿನ’ಕ್ಕೆ (ಜೂ.5) ಪ್ಲಾಸ್ಟಿಕ್ ಹಿಮ್ಮೆಟ್ಟಿಸುವ ಘೋಷಣೆಯೊಂದಿಗೆ ಆತಿಥೇಯ ರಾಷ್ಟ್ರವನ್ನಾಗಿ ಭಾರತವನ್ನು ಆಯ್ಕೆ ಮಾಡಿದೆ. ಪ್ಲಾಸ್ಟಿಕ್‌ ನಡುವೆ ಹೇಗೆಂದರೆ ಹಾಗೆ ಬದುಕುತ್ತಿರುವ ನಾವು ಈ ನೆಪದಲ್ಲಾದರೂ ವಿಲೇವಾರಿ ಕುರಿತು ಗಂಭೀರವಾಗಿ ಯೋಚಿಸಬೇಕಿದೆ

ಈ ಕಂತಿನ ಮುಖ್ಯಾಂಶಗಳು

 • ಪ್ರತಿ ವರ್ಷದ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ
 • ‘ಪರಿಸರ ದಿನ’ದ ಪ್ರಯುಕ್ತ ವಿಶ್ವಸಂಸ್ಥೆ ಘೋಷಣೆಯೊಂದನ್ನು ಹೊರಡಿಸುವ ಪರಿಪಾಠ ಇದೆ
 • ಘೋಷಣೆ ಜೊತೆಗೇ ‘ಆತಿಥೇಯ ರಾಷ್ಟ್ರ’ ಎಂದು ದೇಶವೊಂದನ್ನು ಆಯ್ಕೆ ಮಾಡಲಾಗುತ್ತದೆ
 • 2017ರಲ್ಲಿ ಕೆನಡಾವನ್ನು ಆರಿಸಿ, ನಗರವಾಸಿಗಳನ್ನು ಪ್ರಕೃತಿಗೆ ಹತ್ತಿರವಾಗಿಸುವ ಘೋಷಣೆ ಹೊರಬಿದ್ದಿತ್ತು
 • ಈ ವರ್ಷ ಪ್ಲಾಸ್ಟಿಕ್ ಹಿಮ್ಮೆಟ್ಟಿಸುವ ಘೋಷಣೆಯೊಂದಿಗೆ ಭಾರತವನ್ನು ಆಯ್ಕೆ ಮಾಡಲಾಗಿದೆ
 • ಭಾರತವನ್ನು ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಉತ್ತರ ನಮ್ಮೆಲ್ಲರಿಗೂ ಗೊತ್ತೇ ಇದೆ
 • ಮನೆಯಿಂದ ಶುರುಮಾಡಿ ಎಲ್ಲಿಗೇ ಹೋದರೂ ಪ್ಲಾಸ್ಟಿಕ್ ಇಲ್ಲದ ಪ್ರದೇಶ ಎಂಬುದು ಸಿಗುವುದಿಲ್ಲ
 • ‘ಪರಿಸರ ದಿನ’ ಜೂನ್‌ನಲ್ಲಿ ನಡೆಯಲಿದ್ದರೂ ಈ ಬಗ್ಗೆ ನಾವು ಈಗಲೇ ಚರ್ಚೆ ಮಾಡುವುದು ಅತ್ಯವಶ್ಯ
 • ಜೂನ್ ಬರುವಷ್ಟರಲ್ಲಿ ಪ್ಲಾಸ್ಟಿಕ್ ವಿಲೇವಾರಿ ಸಂಬಂಧಿಸಿದಂತೆ ಒಂದಷ್ಟು ಅರಿವು ಮೂಡಿಸಲೇಬೇಕಿದೆ
 • ಇದಕ್ಕಾಗಿ ಆಸಕ್ತರು, ಪರಿಸರಪ್ರಿಯರು, ಶಾಲಾ-ಕಾಲೇಜುಗಳು ಕಾರ್ಯಕ್ರಮಗಳನ್ನು ನಡೆಸಬೇಕಿದೆ
 • ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಆದೇಶ ಹೊರಡಿಸಿ ಎರಡು ವರ್ಷವಾದರೂ ಯಾವುದೇ ಪ್ರಯೋಜನ ಆಗಿಲ್ಲ
 • ನಿಷೇಧ ಮಾಡುವುದರಲ್ಲಿ ನಾವು ಪ್ರಸಿದ್ಧರು; ಅನುಷ್ಠಾನಕ್ಕೆ ತರುವುದರಲ್ಲಿ ನಿಷ್ಠಾವಂತ ಸೋಮಾರಿಗಳು
 • ಇದುವರೆಗೂ ಭೂಮಿಯಲ್ಲಿ ತಯಾರಿಸಲಾದ ಎಲ್ಲ ಬಗೆಯ ಪ್ಲಾಸ್ಟಿಕ್ ನಾನಾ ರೂಪದಲ್ಲಿ ಇನ್ನೂ ಜೀವಂತ
 • ಪ್ಲಾಸ್ಟಿಕ್ ಅನಿವಾರ್ಯ ನಿಜ. ಹಾಗಂತ ವಿಲೇವಾರಿ ಸರಿಯಾಗಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
 • ವಿಲೇವಾರಿ ಮಾಡುವುದು ಕಷ್ಟವೇನಲ. ಆದರೂ ನಮಗೆ ಅದರ ಅನಿವಾರ್ಯತೆ ಅರ್ಥವೇ ಆದಂತಿಲ್ಲ
 • ಪ್ಲಾಸ್ಟಿಕ್ ವಿಲೇವಾರಿ ಕೇವಲ ಸರ್ಕಾರದ ಕೆಲಸವಲ್ಲ, ಇದರಲ್ಲಿ ನಾಗರಿಕರ ಪಾತ್ರ ತುಂಬಾನೇ ಮುಖ್ಯ
 • ವಿಲೇವಾರಿ ಸರಿಯಾಗಿ ಆಗದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ನಿಶ್ಚಿತ

ಹಿಂದಿನ ಕಂತುಗಳು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More