ವೈರಲ್ ವಿಡಿಯೋ | ಹಾಸನದಲ್ಲಿ ಕೃಷಿ ಹೊಂಡಕ್ಕೆ ಬಿದ್ದಿದ್ದ ಕಾಡಾನೆ ಮರಿ ರಕ್ಷಣೆ

ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಮಗ್ಗೆ ಬಳಿಯ ಕೃಷಿ ಹೊಂಡದಲ್ಲಿ ಮರಿ ಸಲಗವೊಂದು ಮುಳುಗಿತ್ತು. ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಮುಳುಗಿದ್ದ ಮರಿಯಾನೆಯನ್ನು ಹಾಸನ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಸೋಮವಾರ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಮುಳುಗಿದ್ದ ಮರಿಯಾನೆಯನ್ನು ಹಾಸನ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಸೋಮವಾರ ರಕ್ಷಿಸಿದ್ದಾರೆ. ಆಲೂರು ತಾಲೂಕಿನ ಮಗ್ಗೆ ಬಳಿ ಆನೆ ಹಿಂಡು ಕಳೆದ‌ ರಾತ್ರಿ ನೀರು ಕುಡಿಯಲು ಬಂದಿತ್ತು. ಕೆರೆಯ ಒಂದು ಭಾಗದಲ್ಲಿ ಮೊದಲೇ ಜೆಸಿಬಿಯಿಂದ ಗುಂಡಿ ತೋಡಿದ್ದರಿಂದ ಅಲ್ಲಿ ಕೆಸರು ತುಂಬಿತ್ತು. ಆ ಹಿಂಡಲ್ಲಿದ್ದ ಆರೇಳು ವರ್ಷದ ಒಂಟಿ ಸಲಗ ನೀರು ಕುಡಿಯುವ ಧಾವಂತದಲ್ಲಿ ಕೆಸರಲ್ಲಿ ಹೂತುಕೊಂಡಿತ್ತು.

ಇದನ್ನೂ ಓದಿ : ವೈರಲ್ ವಿಡಿಯೋ | ಸಮುದ್ರದ ಒಡಲು ಸೇರಿದ ಪ್ಲಾಸ್ಟಿಕ್ ತ್ಯಾಜ್ಯದ ದೃಶ್ಯ 

ಬೆಳಿಗ್ಗೆ ಇದನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ, ಜೆಸಿಬಿ ಸಹಾಯದಿಂದ ಮರಿಯಾನೆಯನ್ನು ಮೇಲೆತ್ತಿದ್ದಾರೆ. ನಾಲ್ಕೈದು ಗಂಟೆಗಳ ಕಾಲ ಕೆಸರಿನಲ್ಲೇ ಒದ್ದಾಡಿ ಜೀವ ಉಳಿಸಿಕೊಳ್ಳುವ ಭಯದಲ್ಲಿ ವಿಚಲಿತವಾದ ಮರಿಯಾನೆ, ತನ್ನನ್ನು ಮೇಲೆತ್ತಿದ ಜೆಸಿಬಿ ಮೇಲೆ‌ ಎರಗಿದ ಘಟನೆ ಕೂಡ ನಡೆಯಿತು.

ಎಂ ಬಿ ಪಾಟೀಲ್ ಮನದ ಮಾತು| ಎಲ್ಲರನ್ನೂ ಒಳಗೊಳ್ಳುವುದೇ ಲಿಂಗಾಯತ ಧರ್ಮ
ವಿಡಿಯೋ ಸ್ಟೋರಿ | ಪ್ಲಾಸ್ಟಿಕ್ ಬಳಕೆಯಿಂದ ಗುಡಿ ಕೈಗಾರಿಕೆ ಉತ್ಪನ್ನ ಮೂಲೆಗುಂಪು
ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ
Editor’s Pick More