ಐ ಡಿಬೇಟ್ 8 | ಉ.ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ಅಡ್ಡಿ, ಆತಂಕ

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹೆಚ್ಚು ಹಿಂದುಳಿದಿದೆ. ಈ ಸ್ಥಿತಿಗೆ ರಾಜಕೀಯ ಕಾರಣಕ್ಕಿಂತಲೂ ಸಾಮಾಜಿಕ ಕಾರಣಗಳೇ ಮುಖ್ಯ. ಆ ಕಾರಣಗಳೇನು, ಪರಿಹಾರವೇನೆಂದು ಚರ್ಚಿಸಿದ್ದಾರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾರ್ಥಿಗಳು

ಚರ್ಚೆಯ ಮುಖ್ಯಾಂಶಗಳು

 • ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹೆಚ್ಚು ಕುಂಠಿತ
 • ಹೆಣ್ಣುಮಕ್ಕಳ ಶಿಕ್ಷಣದ ಈ ಸ್ಥಿತಿಗೆ ರಾಜಕೀಯ ಕಾರಣಕ್ಕಿಂತಲೂ ಸಾಮಾಜಿಕ ಕಾರಣಗಳೇ ಮುಖ್ಯ
 • ಹೆಣ್ಣು ಋತುಮತಿಯಾದೊಡನೆ ಆಕೆಯನ್ನು ಶಾಲೆಗೆ ಕಳಿಸಲೂ ಯೋಚಿಸುವ ಪರಿಸ್ಥಿತಿ ಇಲ್ಲಿದೆ
 • ಒಂದು ವೇಳೆ ಶಾಲೆಗೆ ಕಳಿಸಿದರೂ ಋತುಸ್ರಾವದ ನೆಪದಲ್ಲಿ ಆಮೇಲೆ ಶಾಲೆ ಬಿಡಿಸುವುದುಂಟು
 • ಪ್ರಾಥಮಿಕ ಶಾಲೆಯಲ್ಲಿ ಇದ್ದ ಹೆಣ್ಣುಮಕ್ಕಳ ಸಂಖ್ಯೆ ಹೈಸ್ಕೂಲಿನಲ್ಲಿ ಕಡಿಮೆಯಾಗಲು ಇದೇ ಕಾರಣ
 • ಋತುಸ್ರಾವದ ಬಗ್ಗೆ ಅರಿವಿರುವ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳಿಸಲು ಮುಂದಾಗುತ್ತಾರೆ
 • ಈ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಧೈರ್ಯ ತುಂಬುವ, ಪ್ರೋತ್ಸಾಹಿಸುವ ಕೆಲಸ ನಡೆಯುವುದೇ ಇಲ್ಲ
 • ಹೈಸ್ಕೂಲಿನಿಂದ ಕಾಲೇಜು ತಲುಪುವ ಸಮಯಕ್ಕೆ ಬೇರೆಯದೇ ಅಡ್ಡಿ-ಆತಂಕ ಆರಂಭವಾಗಿರುತ್ತದೆ
 • ಪೋಲಿಗಳ ಕಾಟದ ಕಾರಣಕ್ಕೆ ಕಾಲೇಜಿಗೆ ಹೋಗುವುದೇ ಬೇಡವೆಂಬ ಫರ್ಮಾನು ಹೊರಬೀಳುತ್ತದೆ
 • ಮನೆಗೆಲಸ ಮಾಡಿಕೊಂಡು ಆರಾಮಾಗಿ ಇರುವಂತೆ ಹೆಣ್ಣುಮಕ್ಕಳ ಮನವೊಲಿಕೆ ಮಾಡಲಾಗುತ್ತದೆ
 • ಕೆಲವು ಮನೆಗಳಲ್ಲಿ ಗಂಡುಮಕ್ಕಳ ಆರೈಕೆ ಮಾಡಿಕೊಂಡು ಮನೆಯಲ್ಲಿರಲು ತಾಕೀತು ಕೂಡ ಆಗುತ್ತದೆ
 • ಶಾಲೆ-ಕಾಲೇಜು ಬಿಡಿಸಿ ಕೂಲಿಗೆ ಕಳಿಸುವ ಪರಿಪಾಠವೂ ಬಹಳಷ್ಟು ಊರುಗಳಲ್ಲಿ ಚಾಲ್ತಿಯಲ್ಲಿದೆ
 • ಹೆಣ್ಣುಮಕ್ಕಳು ಋತುಸ್ರಾವದ ಹಂತ ತಲುಪಿದ ನಂತರ ಕಾಡುವ ಅಪೌಷ್ಟಿಕತೆಯೂ ಗಮನಾರ್ಹ
 • ಉತ್ತರ ಕರ್ನಾಟಕದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಹಳ ದೊಡ್ಡ ಆತಂಕವೆಂದರೆ ಬಾಲ್ಯ ವಿವಾಹ
 • ಬಾಲ್ಯ ವಿವಾಹ ನಿಷೇಧ ಕಾಯ್ದೆ ಇದ್ದರೂ, ಶಿಕ್ಷೆಯ ಭಯ ಹಬ್ಬಿಸಿದರೂ ಕಡಿವಾಣ ಬಿದ್ದಿಲ್ಲ
 • ಬಾಲ್ಯ ವಿವಾಹದಿಂದಾಗಿ ಓದುವ ವಯಸ್ಸಲ್ಲೇ ಸಂಸಾರ ಭಾರ ಹೊರುವ ಪರಿಸ್ಥಿತಿ ಸೃಷ್ಟಿಯಾಗಿದೆ
 • ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸರ್ಕಾರ ಎಷ್ಟೇ ಪ್ರೋತ್ಸಾಹ ನೀಡಿದರೂ ಪೋಷಕರ ಮನಸ್ಥಿತಿ ಇಲ್ಲಿ ಮುಖ್ಯ
 • ಹೆಣ್ಣುಮಕ್ಕಳಿಗೆ ಶಿಕ್ಷಣ ಎಷ್ಟೊಂದು ಮುಖ್ಯ ಎಂಬ ಕುರಿತು ಪೋಷಕರಲ್ಲಿ ಅರಿವು ಮೂಡಿಸಬೇಕಿದೆ
 • ಶಿಕ್ಷಣದಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಾರೆಂಬ ಮೌಢ್ಯವನ್ನು ತುರ್ತಾಗಿ ಹೋಗಲಾಡಿಸಬೇಕಿದೆ
 • ಹೆಣ್ಣುಮಕ್ಕಳ ಶಿಕ್ಷಣಕ್ಕಿರುವ ಅಡಿ-ಆತಂಕ ನಿವಾರಣೆಗೆ ಜಾಗೃತಿ ಮತ್ತು ಶಿಕ್ಷಣವಷ್ಟೇ ನಮ್ಮೆದುರಿನ ದಾರಿ

ಹಿಂದಿನ ಚರ್ಚೆಗಳು

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More