ನೆಲಮಂಡಲ | ಕಂತು 10 | ನಿಮ್ಮ ‘ಹೆಜ್ಜೆ ಗುರುತು’ ಎಷ್ಟು ದೊಡ್ಡದು ಗೊತ್ತುಂಟಾ?

ಯಾವ ಪ್ರಾಣಿಯ ತೂಕ ಹೆಚ್ಚಾಗಿರುತ್ತದೋ ಆ ಪ್ರಾಣಿಯ ಹೆಜ್ಜೆ ಗುರುತು ಆಳವಾಗಿ ಅಚ್ಚಾಗುತ್ತದೆ. ಇದನ್ನೇ ಸ್ವಾಭಾವಿಕ ಸಂಪನ್ಮೂಲಗಳ ಬಳಕೆಗೂ ಅನ್ವಯಿಸುವ ಒಂದು ಮಾಪನ ಚಾಲ್ತಿಯಲ್ಲಿದೆ. ಇದರ ಪ್ರಕಾರ, ಭೂಮಿ ಮೇಲೆ ನಿಮ್ಮ ‘ಹೆಜ್ಜೆ ಗುರುತು’ ಎಷ್ಟು ಎಂದು ಅಂದಾಜು ಮಾಡಬಹುದು

ಈ ಕಂತಿನ ಮುಖ್ಯಾಂಶಗಳು

 • ಯಾವ ಪ್ರಾಣಿಯ ತೂಕ ಹೆಚ್ಚಾಗಿರುತ್ತದೋ ಆ ಪ್ರಾಣಿಯ ಹೆಜ್ಜೆ ಗುರುತು ಆಳವಾಗಿ ಅಚ್ಚಾಗುತ್ತದೆ
 • ಇದನ್ನೇ ಸ್ವಾಭಾವಿಕ ಸಂಪನ್ಮೂಲಗಳ ಬಳಕೆಗೂ ಅನ್ವಯಿಸುವ ಒಂದು ಮಾಪನ ಚಾಲ್ತಿಯಲ್ಲಿದೆ
 • ಈ ಸರಳ ಮಾಪನವನ್ನು ‘ಎಕಾಲಜಿಕಲ್ ಫುಟ್‌ಪ್ರಿಂಟ್’ ಅಂತ ಕರೆಯಲಾಗುತ್ತದೆ
 • ಈ ಮಾಪನದ ಮೂಲಕ ಯಾರ ಹೆಜ್ಜೆ ಗುರುತು ಎಷ್ಟು ದೊಡ್ಡದು, ಚಿಕ್ಕದು ಎಂದು ತಿಳಿಯಬಹುದು
 • ಸ್ವಾಭಾವಿಕ ಸಂಪನ್ಮೂಲಗಳ ಬಳಕೆ ಹೆಚ್ಚು ಮಾಡಿದ ಎಲ್ಲರದ್ದೂ ಹೆಜ್ಜೆ ಗುರುತು ದೊಡ್ಡದೇ ಇರುತ್ತದೆ
 • ಅತ್ಯಂತ ಕಡಿಮೆ ಸ್ವಾಭಾವಿಕ ಸಂಪನ್ಮೂಲ ಬಳಸಿದವರ ಹೆಜ್ಜೆ ಗುರುತು ತುಂಬಾನೇ ಚಿಕ್ಕದಿರುತ್ತದೆ
 • ಈ ಮಾಪನವನ್ನು ನೀರಿನ ಬಳಕೆಯಂಥ ಸೂಕ್ಷ್ಮ ವಿಷಯದಲ್ಲೂ ವಿಶೇಷವಾಗಿ ಅನ್ವಯಿಸುವುದುಂಟು
 • ಪಟ್ಟಣ ಮತ್ತು ನಗರಗಳ ಜನಕ್ಕೆ ಹೋಲಿಸಿದರೆ ಗ್ರಾಮೀಣ ಜನರ ಹೆಜ್ಜೆ ಗುರುತು ತುಂಬಾನೇ ಚಿಕ್ಕದು
 • ವಾಹನಗಳನ್ನು ಬಳಸುವವರು, ನೀರನ್ನು ಹೆಚ್ಚಾಗಿ ಬಳಸುವವರ ಹೆಜ್ಜೆ ಗುರುತು ಸಹಜವಾಗಿ ದೊಡ್ಡದು
 • ವ್ಯಕ್ತಿಯ ಹೆಜ್ಜೆ ಗುರುತಿನಂತೆಯೇ ಕುಟುಂಬ, ರಾಜ್ಯ, ದೇಶದ ಹೆಜ್ಜೆ ಗುರುತನ್ನೂ ಲೆಕ್ಕ ಹಾಕಲಾಗುತ್ತದೆ
 • ಜಗತ್ತಿನಲ್ಲೇ ಅತಿ ದೊಡ್ಡ ಹೆಜ್ಜೆ ಗುರುತು ಮೂಡಿಸಿರುವುದು ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ
 • ಸಂಪನ್ಮೂಲ ಬಳಕೆ ವಿಷಯದಲ್ಲಿ ಹಿಂದೆ ಬಿದ್ದಿಲ್ಲದ ಕಾರಣ ನಮ್ಮ ಭಾರತದ ಹೆಜ್ಜೆ ಕೂಡ ದೊಡ್ಡದೇ ಇದೆ
 • ಗ್ರಾಮೀಣರನ್ನು ನಗರಕ್ಕೆ ಕರೆತರುವ, ಹೆಚ್ಚು ವಸ್ತುಗಳ ಬಳಕೆದಾರರನ್ನಾಗಿ ಮಾಡುವ ಪ್ರಯತ್ನ ನಡೆದಿದೆ
 • ಹೆಚ್ಚು ಸಂಪನ್ಮೂಲ ಬಳಸುವಂತೆ ಮಾಡಿ, ದೇಶದ ಆದಾಯ ಹೆಚ್ಚಿಸುವ ಯೋಜನೆ ಸರ್ಕಾರಗಳದ್ದು
 • ಪ್ಲಾಸ್ಟಿಕ್, ನೀರು, ಇಂಧನ ಮುಂತಾದವುಗಳನ್ನು ಆದಷ್ಟು ಕಡಿಮೆ ಬಳಸುವ ತುರ್ತು ನಮ್ಮ ಮುಂದಿದೆ
 • ನಮ್ಮ ಹೆಜ್ಜೆಯನ್ನು ಕಿರಿದು ಮಾಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸಂಪನ್ಮೂಲ ಉಳಿಸಬೇಕಿದೆ

ಹಿಂದಿನ ಕಂತುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ನೆಲಮಂಡಲ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More