ಐ ಡಿಬೇಟ್ 10 | ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆ; ಕಾರಣ?

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಮಾತ್ರವಲ್ಲ, ಬೆರಳೆಣಿಕೆಯಷ್ಟು. ಇದಕ್ಕೆ ಹಲವು ಕಾರಣ ಇದ್ದರೂ ಪುರುಷ ಪ್ರಧಾನ ಸಮಾಜದ ಕಟ್ಟಳೆಗಳದ್ದೇ ಮೇಲುಗೈ. ಈ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿಗಳು

ಚರ್ಚೆಯ ಮುಖ್ಯಾಂಶಗಳು

 • ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಮಾತ್ರವಲ್ಲ, ಬೆರಳೆಣಿಕೆಷ್ಟು
 • ಇದಕ್ಕೆ ಹಲವು ಕಾರಣ ಇದ್ದರೂ ಪುರುಷ ಪ್ರಧಾನ ಸಮಾಜದ ಕಟ್ಟಳೆಗಳೇ ಮುಖ್ಯವಾದವು
 • ಮಹಿಳೆ ಮನೆಯಿಂದ ಆಚೆ ಹೋದರೆ ಕೆಡುಕು ಎಂದು ಭಾವಿಸುವ ಮನಸ್ಥಿತಿ ಇಂದಿಗೂ ಜೀವಂತ
 • ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯನ್ನು ಕಟ್ಟಿಹಾಕುವ ಹುನ್ನಾರಗಳು ನಡೆಯುತ್ತಲೇ ಇವೆ
 • ಇನ್ನೊಂದೆಡೆ, ರಾಜಕೀಯ ಕ್ಷೇತ್ರವೂ ನಾನಾ ಬಗೆಯ ಹುಳುಕುಗಳನ್ನು ಹೊತ್ತುಕೊಂಡಿದೆ
 • ರಾಜಕೀಯ ಕ್ಷೇತ್ರ ಪ್ರವೇಶಿಸಿದ ಮಹಿಳೆಯನ್ನು ಬೇರೊಂದು ಬಗೆಯಲ್ಲಿ ನೋಡಲಾಗುತ್ತದೆ
 • ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಇರುವುದು ಅವಳಿಗೆ ಶೋಭೆಯಲ್ಲ ಎಂದೇ ನಂಬಿಸಲಾಗಿದೆ
 • ಸುರಕ್ಷತೆ, ಗೌರವದ ದೃಷ್ಟಿಯಿಂದಲೂ ಮಹಿಳೆಗೆ ಈ ಕ್ಷೇತ್ರ ಸರಿಯಲ್ಲ ಎಂಬ ಮೌಢ್ಯ ಇದೆ
 • ಪುರುಷರ ಕಟ್ಟಳೆಗಳ ಜೊತೆಗೆ ಮಹಿಳೆಯರ ಉದಾಸೀನ ಕೂಡ ಸಂಖ್ಯೆ ಕಡಿಮೆಯಾಗಲು ಕಾರಣ
 • ಶಿಕ್ಷಣ, ತಿಳಿವಳಿಕೆ ಕೊರತೆಯೂ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾಗಿ ಪರಿಣಮಿಸಿದೆ
 • ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರ ಕುರಿತು ಕೀಳು ಅಭಿರುಚಿಯ ಮಾತುಗಳು ಸಾಮಾನ್ಯ
 • ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ ಎಂದರಂತೂ ಅನುಮಾನದಿಂದ ನೋಡಲಾಗುತ್ತದೆ
 • ಕ್ಷೇತ್ರದಲ್ಲಿ ಈಗಾಗಲೇ ನೆಲೆ ಕಂಡಿರುವ ಹೆಣ್ಣುಮಕ್ಕಳ ಚಾರಿತ್ರ್ಯ ವಧೆ ಪುರುಷರ ಅಸ್ತ್ರವಾಗಿದೆ
 • ಚಾರಿತ್ರ್ಯವಧೆ ಮಹಿಳೆಯರನ್ನು ಹೈರಾಣಾಗಿಸುವ ಜೊತೆಗೆ ರಾಜಕೀಯ ಪ್ರವೇಶಕ್ಕೂ ಅಡ್ಡಿಯಾಗಿದೆ
 • ನಗರದ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಿದರೂ ಹಳ್ಳಿಗಳಲ್ಲಿ ಮಹಿಳೆಯರ ಸ್ಥಿತಿ ಸುಧಾರಣೆ ಕಂಡಿಲ್ಲ
 • ರಾಜಕೀಯ ಪ್ರವೇಶಕ್ಕೆ ಸಿದ್ಧರಾದ ಮಹಿಳೆಯರ ಧೈರ್ಯ ಕುಂದಿಸುವ ಕೆಲಸಗಳು ಎಗ್ಗಿಲ್ಲದೆ ನಡೆದಿವೆ
 • ಪುರುಷರಿಗೆ ಸಡ್ಡು ಹೊಡೆಯುವುದಕ್ಕಿಂತ ಅವರ ಸಹಕಾರದೊಂದಿಗೆ ರಾಜಕೀಯ ಪ್ರವೇಶ ಸಾಧ್ಯ
 • ಹೆಣ್ಣುಮಕ್ಕಳ ಕುರಿತ ಪುರುಷಪ್ರಧಾನ ಮನಸ್ಥಿತಿ ಬದಲಾದರೆ ಮಾತ್ರವೇ ಸುಧಾರಣೆ ಸಾಧ್ಯ
 • ಮಹಿಳಾ ಸಬಲೀಕರಣ ಕುರಿತು ಮಾತನಾಡುವ ಪಕ್ಷಗಳು ಸ್ಪರ್ಧಿಸಲು ಟಿಕೆಟ್ ಕೊಡಬೇಕಿದೆ
 • ಭಾಷಣಕ್ಕೆ ಮಾತ್ರವೇ ಸೀಮಿತವಾದ ಮಹಿಳಾ ಮೀಸಲಾತಿ ನಿಜವಾಗಿಯೂ ಜಾರಿ ಆಗಲಿ
 • ಮಹಿಳೆಯರ ಸಂಖ್ಯೆ ಹೆಚ್ಚುವುದಷ್ಟೇ ಈ ಕ್ಷೇತ್ರಕ್ಕೆ ಹೊಸ ಆಲೋಚನೆಗಳು ಬರುವ ದಾರಿ

ಹಿಂದಿನ ಡಿಬೇಟ್‌ಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: ‘ದಿ ಸ್ಟೇಟ್’ ಐ ಡಿಬೇಟ್

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More