ವೈರಲ್ ವಿಡಿಯೋ | ಭಾಷಾಂತರದಲ್ಲಿ ಮತ್ತೆ ಎಡವಟ್ಟು, ಗರಂ ಆದ ಅಮಿತ್ ಶಾ

ಕರ್ನಾಟಕ ಚುನಾವಣಾ ಪ್ರಚಾರದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬೆಂಗಳೂರಿನ ನೆಲಮಂಗಲದ ಸಾರ್ವಜನಿಕ ಸಭೆಯಲ್ಲಿ ಮತ್ತೆ ಕಿರಿಕಿರಿಗೊಳಗಾದ ಘಟನೆ ನಡೆದಿದೆ. ಭಾಷಾಂತರಕ್ಕೆ ನಿಯೋಜನೆಗೊಂಡಿದ್ದ ಮಹಿಳೆ ತಪ್ಪುತಪ್ಪಾಗಿ ಭಾಷಾಂತರ ಮಾಡಿದ್ದರಿಂದ ಅಮಿತ್ ಶಾ ಇರುಸುಮುರುಸಿಗೊಳಗಾದರು

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತೆ ಮತ್ತೆ ಭಾಷಾಂತರ ವಿಚಾರದಲ್ಲಿ ಇರುಸುಮುರುಸಿಗೆ ಸಿಕ್ಕುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನ ನೆಲಮಂಗಲದ ಸಾರ್ವಜನಿಕ ಸಭೆಯಲ್ಲಿ ಮತ್ತೆ ಭಾಷಾಂತರ ವಿಚಾರದಲ್ಲಿ ಅಮಿತ್ ಶಾ ಗರಂ ಆದರು. ಅಮಿತ್ ಶಾ ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಲು ಮಹಿಳೆಯೊಬ್ಬರನ್ನು ನಿಯೋಜಿಸಲಾಗಿತ್ತು. ಆದರೆ, ಭಾಷಾಂತರ ಮಾಡುವ ಮಹಿಳೆ, ಅಮಿತ್ ಶಾ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಂಡು ತಪ್ಪುತಪ್ಪಾಗಿ ಹೇಳುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಶಾ, “ನಾನು ಹೇಳಿದ್ದನ್ನಷ್ಟೇ ಕನ್ನಡದಲ್ಲಿ ಹೇಳಿ ಸಾಕು,” ಎಂದರು. ಇಷ್ಟಾದರೂ ತಪ್ಪು ಮುಂದುವರಿದಿದ್ದರಿಂದ, ಪರಿಸ್ಥಿತಿಯ ಗಂಭೀರತೆ ಅರಿತ ಆರ್ ಅಶೋಕ್, ಮಹಿಳೆಯ ಕೈಯಿಂದ ಮೈಕ್ ಕಿತ್ತು ತಾವೇ ಭಾಷಾಂತರಿಸಲು ಆರಂಭಿಸಿದರು.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More