ದೇವೇಗೌಡ ಸೀಕ್ರೆಟ್ ಡೈರಿ| ಯಾರ್ರೀ ಅಮಿತ್ ಶಾ? ಅವನಲ್ಲ, ನಿಜವಾದ `ಚಾಣಕ್ಯ’ ನಾನು

ನನ್ನ ಮಗ ಸಿಎಂ ಆಗ್ಲಿಕ್ಕೆ ಅವರಪ್ಪನಾಣೆಗೂ ಸಾಧ್ಯವಿಲ್ಲ ಅಂತ ಕೆಲವ್ರು ಪದೇಪದೆ ಹೇಳ್ತಿದ್ರು, ನನ್ನ ಮಗನಿಗೆ ಈಗ ಆ ಭಾಗ್ಯ ತಾನಾಗಿಯೇ ಬಂದಿದೆ. ಇದು ಚಾಣಾಕ್ಷತನ ಅಂದ್ರೆ. ಕೂತಲೇ ಮಗನನ್ನ ಸಿಎಂ ಮಾಡ್ತೀದಿನಿ ಅಂದ್ರೆ ನನಗಿಂತ `ಚಾಣಾಕ್ಷರು’ ಇನ್ಯಾರಿದಾರೆ ಹೇಳಿ. ಅಯ್ಯೋ ರಾಮ! ಒಳ್ಳೆ ಕಥೆ ಆಯ್ತಲ್ಲ ಸ್ವಾಮಿ ಇದು

ನನ್ನ ತಲೆ ಎಂಥಾ ಚಾಣಾಕ್ಷ ತಲೆ ಅನ್ನೋದು ಎಷ್ಟೋ ಜನಕ್ಕೆ ಈವಾಗ್ ಅರ್ಥವಾಗ್ತಿದೆ. ಅದ್ಯಾರೋ ನಿನ್ನೆ ಮೊನ್ನೆ ಬಂದವನನ್ನ `ಚುನಾವಣಾ ಚಾಣಕ್ಯ’ ಅಂತಿದ್ರು. ಆದ್ರೆ ಇಡೀ ದೇಶಕ್ಕೆ ಈಗ ಗೊತ್ತಾಗಿದೆ ನಿಜವಾದ `ಚಾಣಕ್ಯ’ ಯಾರು ಅಂತ. ಅಲ್ಲಾ ರೀ, ನಾನು ಯಾರು? ನನ್ನ ರಾಜಕೀಯ ಜೀವನದಲ್ಲಿ ಇಂತದ್ದನ್ನೆಲ್ಲ ಎಷ್ಟು ನೋಡಿಲ್ಲ ನಾನು. ಅಷ್ಟೆಲ್ಲ ಬುದ್ದಿವಂತಿಕೆ ಇಲ್ದೇ ಹೋದ್ರೆ ಪ್ರಧಾನಿ ಆಗ್ತಿದ್ನೇನ್ರಿ ನಾನು?

ನನ್ನ ಮಗ ಸಿಎಂ ಆಗ್ಲಿಕ್ಕೆ ಅವರಪ್ಪನಾಣೆಗೂ ಸಾಧ್ಯವಿಲ್ಲ ಅಂತ ಕೆಲವ್ರು ಪದೇ ಪದೇ ಹೇಳ್ತಿದ್ರು, ನನ್ನ ಮಗನಿಗೆ ಈಗ ಆ ಭಾಗ್ಯ ತಾನಾಗಿಯೇ ಬಂದಿದೆ. ಇದು ರೀ ರಾಜಕೀಯ ಚಾಣಾಕ್ಷತನ ಅಂದ್ರೆ. ಕೂತಲೇ ಮಗನನ್ನ ಸಿಎಂ ಮಾಡ್ತೀದಿನಿ ಅಂದ್ರೆ ನನಗಿಂತ `ಚಾಣಾಕ್ಷರು’ ಇನ್ಯಾರಿದಾರೆ ಹೇಳಿ. ಅಯ್ಯೋ ರಾಮ! ಒಳ್ಳೆ ಕಥೆ ಆಯ್ತಲ್ಲ ಸ್ವಾಮಿ ಇದು.

ಈ ಎರಡೂ ರಾಷ್ಟ್ರೀಯ ಪಕ್ಷದವರು ಎಲೆಕ್ಷನ್‌ಗೂ ಮುಂಚೆ ಒಬ್ರು ಪರಿವರ್ತನಾ ಯಾತ್ರೆ, ಇನ್ನೊಬ್ರು ಜನಾಶೀರ್ವಾದ ಯಾತ್ರೆಗಳನ್ನ ಮಾಡ್ತಿದ್ರೆ ನಾನು ಮಾತ್ರ ನೆಮ್ಮದಿಯಿಂದ ಪೂಜೆ, ಯಾಗದಲ್ಲಿ ಮುಳುಗಿದ್ದೆ. ಯಾಕಂದ್ರೆ ನನಗೆ ಗೊತ್ತಿತ್ತು, ಅವರೆಲ್ಲ ಕಷ್ಟ ಪಡ್ತಿರೋದು ನನ್ನ ಮಗನನ್ನ ಸಿಎಂ ಮಾಡೋದಕ್ಕಾಗಿ ಅಂತ. ಈವಾಗ್‌ ಹೇಳಿ ನಿಜವಾದ `ಚುನಾವಣಾ ಚಾಣಕ್ಯ’ ಯಾರು ಅಂತ?

ಈ ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ. ಇವತ್ತಿಗೂ ನನ್ನ ಮೊಬೈಲ್‌ನಲ್ಲಿ ನನ್ನ ಕುಟುಂಬದವರ ನಂಬರ್‌ ಬಿಟ್ರೆ ಬೇರೆ ಇನ್ಯಾರ ನಂಬರೂ ಇಲ್ಲ. ನಾನು ಇಡೋದೂ ಇಲ್ಲ. ಅದ್ಯಾರೇ ಇದ್ರು ನನ್‌ ಕಚೇರಿ ಲ್ಯಾಂಡ್‌ಲೈನ್‌ಗೆ ಕಾಲ್‌ ಮಾಡ್ಬೇಕು.ಈ ಮಣ್ಣಿನ ಮಗ ಅಂದ್ರೆ ಸುಮ್ನೆನಾ?

ಯಾರ್ ರೀ ಅದು ಅಮಿತ್ ಶಾ? ಎಲ್ಲಿಂದ ಬಂದಿದಾನೆ ಅವನು? ಕರ್ನಾಟಕಕ್ಕೆ ಬಂದು ಒಂದು ತಿಂಗಳು ಕೂತ್ ಬಿಟ್ರೆ ನಮ್ಮ ರಾಜ್ಯದ ಲೆಕ್ಕಾಚಾರ ಎಲ್ಲಾ ತಿಳ್ಕಳ್ಳಕ್ಕೆ ಆಗುತ್ತಾ? ನಾನು ಇಲ್ಲೇ ಹುಟ್ಟಿ ಬೆಳೆದವನು, ನನಗೆ ನನ್ ಜನ್ರ ಲೆಕ್ಕಾಚಾರ ತಿಳ್ಕೊಳ್ಳಕ್ಕಾಗಿಲ್ಲ ಇಲ್ಲಿವರೆಗೂ. ಅದೇನೋ ಮಿಷನ್ ೧೫೦ ಅಂತೆ ಪುಣ್ಯಾತ್ಮರು, ಮಿಷನ್ ಹೋಗಿ ಈಗ ಆಪರೇಷನ್‌ಗೆ ಬಂದಿದೆ. ಅವರ ಆಪರೇಷನ್‌ ಗೀಪರೇಷನ್‌ ಏನೂ ನಡೆಯೋದಿಲ್ಲ ಬಿಡಿ. ಯಾಕಂದ್ರೆ ನಾವೆಲ್ಲ ಸೇರಿ ನಾರ್ಮಲ್ ಡೆಲಿವರಿ ಮಾಡಿದೀವಿ.

ಈ ಅಮಿತ್‌ ಶಾಗೆ ರಾಜಕಾರಣ, ರಾಜತಂತ್ರ ಅಂದ್ರೆ ಏನು ಗೊತ್ರೀ? ಪಕ್ಷದಲ್ಲಿದ್ದವರನ್ನ ಹೆದರಿಸ್ಕೊಳೋದನ್ನೇ ರಾಜಕಾರಣ ಅನ್ಕೊಂಡಿದಾನೆ ಆ ಶಾ. ಈ ಯಡಿಯೂರಪ್ಪಾಗೂ ಬುದ್ದಿ ಇಲ್ಲ. ರೀ ಸ್ವಾಮಿ, ಕೈನಲ್ಲಿ ಕಲ್ಲಿದೆ ಅಂತ‌ ಮನಸ್ಸಿಗೆ ಬಂದಾಗ ಮಾವಿನ ಗಿಡಕ್ಕೆ ಬೀಸೋದಲ್ರಿ. ಗಿಡದಲ್ಲಿ ಹಣ್ಣಿದ್ದಾಗ ಮಾತ್ರ ಕಲ್ಲು ಬೀಸಬೇಕು. ಅದು ಬುದ್ದಿವಂತಿಕೆ. ಈಗ ಹೇಳಿ ಯಾರು `ಚಾಣಕ್ಯ’ ಅಂತ?

ನನ್ನ ತಾಕತ್ತೇನು, ನನ್ನ ಚಾಣಾಕ್ಷತನ ಎಂಥದ್ದು ಅನ್ನೋದು ಸ್ವಲ್ಪರ ಮಟ್ಟಿಗೆ ಪ್ರಧಾನಮಂತ್ರಿ ಅವರಿಗೆ ಗೊತ್ತಿದೆ. ಈ ಸಂದರ್ಭ ಬರುತ್ತೆ ಅಂತಲೇ ಮೋದಿ ನನಗೆ ಅಷ್ಟೊಂದು ಗೌರವ ಕೊಡ್ತಾ ಬಂದ್ರು. ಎಲೆಕ್ಷನ್‌ ಪ್ರಚಾರಕ್ಕೆ ಬಂದಾಗ ಪ್ರಚಾರ ಮಾಡೋದ್‌ ಬಿಟ್ಟು ನನಗೆ ಬುಟ್ಟಿಗೆ ಹಾಕಾಳೊಕ್ಕೆ ನೋಡ್ರಿ ಮಾತಲ್ಲೇ ಹೊಗಳಿ. ಆದ್ರೆ ನಾನು ಅಷ್ಟು ಸುಲಭಕ್ಕೆ ಯಾರಿಗೂ ದಕ್ಕುವವನಲ್ಲ. ಈಗ್ಲಾದ್ರೂ ಗೊತ್ತಾಯ್ತಾ, `ಚಾಣಕ್ಯ’ ಯಾರು ಅನ್ನೋದು?

ನನ್ನ ಹುಟ್ಟುಹಬ್ಬ ಬರುವಷ್ಟೊತ್ತಿಗೆ ಮುಖ್ಯಮಂತ್ರಿ ಆಗಿರುತ್ತೀಯಾ ಅಂತ ನನ್ನ ಮಗನಿಗೆ ಹೇಳಿದ್ದೆ. ಅದೇ ಪ್ರಕಾರ ನನ್ನ ಮಗ ಈಗ ಸಿಎಂ ಆಗೋ ಸಿದ್ಧತೆ ನಡೆಸಿದಾನೆ. ನಾನು ಹುಟ್ಟುಹಬ್ಬವನ್ನ ಭರ್ಜರಿಯಾಗಿ ಸೆಲೆಬ್ರೆಟ್ ಮಾಡ್ಕೊಳ್ಳೋ ತಯಾರಿ ನಡೆಸಿದೀನಿ ನಾಡಿನ ಜನತೆ ನಮ್ಮಿಬ್ಬರಿಗೂ ಆಶೀರ್ವಾದ ಮಾಡಿ ಅಂತ ಕೇಳ್ಕೊಳ್ತೀನಿ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More