ನಮ್ಮೊಂದಿಗಿರುವ ನಾವಿರಬೇಕಾದ ಕ್ಷಣಗಳನ್ನು ನೆನಪಿಸುವ ‘ಮನನ’

ನಗರ ಜೀವನ ವೇಗದಲ್ಲಿ ಕಳೆದು ಹೋದವರು ತಮಗೆ ತಾವೇ ಸಮಯ ಉಳಿಸಿಕೊಳ್ಳುವುದರಲ್ಲಿ ಸೋತುಹೋಗುತ್ತಾರೆ. ಮನೆ, ಕೆಲಸ, ಹೀಗೆ ಎಲ್ಲರಿಗೂ, ಎಲ್ಲಕ್ಕೂ ಸಮಯ ಕೊಡುವವರು ತಮಗೆ ಸಮಯವಿಲ್ಲದೆ ಒತ್ತಡವನ್ನು ಎದುರಿಸುತ್ತಾರೆ. ಇಷ್ಟವಿರಲಿ, ಇಲ್ಲದಿರಲಿ ರಾಜಿಯಾಗುತ್ತಾ ದೇಹ ಮತ್ತು ಮನಸ್ಸುಗಳನ್ನು ದಣಿಸುತ್ತಾರೆ. ಇಂಥದ್ದೇ ಒಂದು ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಈ ಕಿರುಚಿತ್ರವನ್ನು ಸಿದ್ಧಮಾಡಿದ್ದಾರೆ ಪವನ್‌ ಶಂಕರ್‌. ಕೇವಲ ಹತ್ತೂವರೆ ನಿಮಿಷಗಳ ಈ ಚಿತ್ರದಲ್ಲಿ ರಾಜೇಶ್‌ ನಟರಂಗ ಮತ್ತು ಚಂದನ್‌ ಆಚಾರ್‌ ಕಾಣಸಿಕೊಂಡಿದ್ದಾರೆ. ಆಪ್ತವೂ ಸರಳವಾಗಿಯೂ ಇರುವ ಚಿತ್ರ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More