ವೈರಲ್ ವಿಡಿಯೋ | ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾದ ವಿಮಾನ ಅಪಘಾತದ ದೃಶ್ಯ

ಮೆಕ್ಸಿಕೋದ ದುರಂಗೊ ನಗರದಿಂದ ತೆರಳುತ್ತಿದ್ದ ವೇಳೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದ ಏರೋಮೆಕ್ಸಿಕೋ ಸಂಸ್ಥೆಯ ವಿಮಾನ ಅಪಘಾತಕ್ಕೀಡಾಗಿದೆ. ಈ ದುರಂತ ನಡೆಯುವ ಸಮಯದಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ

ಏರೊಮೆಕ್ಸಿಕೊ ಸಂಸ್ಥೆಯ ವಿಮಾನ ಮೆಕ್ಸಿಕೋದ ದುರಂಗೋ ನಗರದಿಂದ ಮಂಗಳವಾರ ಟೇಕ್ ಆಫ್ ಆಗುತ್ತಿತ್ತು, ಆದರೆ, ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಭಾರಿ ಮಳೆಯ ಕಾರಣದಿಂದ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದಾಗ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ವಿಮಾನ ಅಪಘಾತದ ದೃಶ್ಯ ಪ್ರಯಾಣಿಕರೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಯ ಹುಟ್ಟಿಸುವಂತಿದೆ. ಟೇಕ್ ಆಫ್ ಆಗುತ್ತಿದ್ದಂತೆ ಹೊರಭಾಗದಲ್ಲಿ ಸುರಿಯುತ್ತಿರುವ ಮಳೆಯನ್ನು ಸೆರೆಹಿಡಿಯಲಾರಂಭಿಸಿದ ಪ್ರಯಾಣಿಕರೊಬ್ಬರ ಕ್ಯಾಮೆರಾದಲ್ಲಿ ವಿಮಾನ ನೆಲಕಪ್ಪಳಿಸುತ್ತಿರುವ ದೃಶ್ಯವೂ ಸೆರೆಯಾಗಿದ್ದು, ಬಳಿಕ ಬ್ಲ್ಯಾಂಕ್ ಆಗಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More