ವೈರಲ್ ವಿಡಿಯೋ | 26 ವರ್ಷದ ನಂತರ ಇಡುಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

ಕೇರಳಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ಅತಿ ಹೆಚ್ಚು ಪ್ರಮಾಣದಲ್ಲಿ ನೀರನ್ನು ಸಂಗ್ರಸಬಲ್ಲ ಇಡುಕ್ಕಿ ಜಲಾಶಯದ ಗೇಟ್‌ಗಳನ್ನು 26 ವರ್ಷಗಳ ಬಳಿಕ ತೆರೆಯಲಾಗಿದ್ದು, ಅಣೆಕಟ್ಟಿನ ಬಾಗಿಲು ತೆಗೆಯುತ್ತಿದ್ದಂತೆ ಹರಿಯುತ್ತಿರುವ ನೀರಿನ ದೃಶ್ಯ ನೋಡುಗರಲ್ಲಿ ರೋಮಾಂಚನ ಉಂಟುಮಾಡಿದೆ

ಕೇರಳದ ಕುರತ್ತಿ ಗುಡ್ಡಗಾಡು ಪ್ರದೇಶದಲ್ಲಿ ಪೆರಿಯಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಇಡುಕ್ಕಿ ಜಲಾಶಯ ತುಂಬಿ ಹರಿಯುತ್ತಿದ್ದು, ಪರಿಸ್ಥಿತಿಯನ್ನು ನಿರ್ವಹಿಸುವ ಸಲುವಾಗಿ ಇಂದು ಪ್ರಯೋಗಾರ್ಥವಾಗಿ ನೀರನ್ನು ಹೊರಬಿಡಲಾಗಿದೆ. 26 ವರ್ಷಗಳ ಬಳಿಕ ಮೊದಲ ಬಾರಿಗೆ ಜಲಾಶಯದ ಗೇಟ್ ತೆರೆಯುತ್ತಿದ್ದಂತೆ ನೂರಾರು ಮಂದಿ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಂಡರು. 2,403 ಅಡಿ ನೀರು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟೆಯಲ್ಲಿ ಇದೀಗ 2,398.80 ಅಡಿ ನೀರು ಸಂಗ್ರಹವಾಗಿದೆ. ಹೀಗಾಗಿ ನೀರನ್ನು ಹೊರಬಿಡಲಾಗಿದೆ. ಹಿಂದೆ 1981ರಲ್ಲಿ ಮತ್ತು 1992ರಲ್ಲಿ ಗೇಟ್ ತೆರೆದು ನೀರು ಹೊರಬಿಡಲಾಗಿತ್ತು.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More