ವಿಡಿಯೋ ಸ್ಟೋರಿ | ದಾಖಲೆಯ ಭಾರಿ ಮಳೆಯ ಅಬ್ಬರಕ್ಕೆ ನಲುಗಿದ ಕೇರಳ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ, ಎಲ್ಲ ಗೇಟ್ ಗಳನ್ನು ತೆರೆಯಲಾಗಿದ್ದು, ಈ ಭಾಗದ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ, ಎಲ್ಲ ಗೇಟ್‌ ತೆರೆಯಲಾಗಿದ್ದು, ಈ ಭಾಗದ ಹಲವು ಗ್ರಾಮಗಳು ಮುಳುಗಡೆಯಾಗಿವೆ. ಹೀಗಾಗಿ, ಈ ಭಾಗದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಇಡುಕ್ಕಿ ಜಲಾಶಯ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರವಾಸಿಗರಿಗೆ ಕೇರಳಕ್ಕೆ ಭೇಟಿ ನೀಡದಂತೆ ಸೂಚಿಸಲಾಗಿದೆ.

ಇದನ್ನೂ ಓದಿ : ವೈರಲ್ ವಿಡಿಯೋ | 26 ವರ್ಷದ ನಂತರ ಇಡುಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸುತ್ತಿದ್ದು, ಸಾವಿಗೀಡಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಸುರಿದಿರುವ ಮಳೆ 50 ವರ್ಷಗಳಲ್ಲೇ ಅತ್ಯಂತ ದೊಡ್ಡ ಮಳೆ ಎಂಬುದು ಹವಾಮಾನ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಸ್ಥಳದಲ್ಲಿ ಎನ್‌ಡಿಆರ್‌ಎಫ್, ಭಾರತೀಯ ಸೇನೆ, ನೌಕಾಪಡೆ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯ ಬಿರುಸಿನಿಂದ ಸಾಗಿದೆ.

ಸ್ಟೇಟ್‌ಮೆಂಟ್‌ | ಸಚಿವ ಎಚ್‌ ಡಿ ರೇವಣ್ಣ ಜನರಲ್ಲಿ ಕ್ಷಮೆ ಕೇಳಬೇಕು
ಗಲ್ಲಿ ಬೆಲ್ಲಿ | ಇಲ್ಲಿದೆ ಬನ್ನಿ, ದಾವಣಗೆರೆಯ ಬೊಂಬಾಟ್ ಮಿರ್ಚಿ-ಮಂಡಕ್ಕಿ
ಮುದ್ದಿ ಕಿ ಬಾತ್ | ಯಾವುದೇ ಪ್ರಶ್ನೆಗೂ ಸಿಎಂ ಎಚ್‌ಡಿಕೆ ಬಳಿ ಇರುತ್ತದೆ ಮರುಪ್ರಶ್ನೆ!
Editor’s Pick More