ವೈರಲ್ ವಿಡಿಯೋ | ಸುಟ್ಟು ಕರಕಲಾದ 200 ವರ್ಷ ಹಳೆಯ ರಾಷ್ಟ್ರೀಯ ಮ್ಯೂಸಿಯಂ

ಬ್ರೆಜಿಲ್ ನ ರಿಯೋ ಡಿ ಜನೈರೋ ನಗರದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಸುಟ್ಟು ಭಸ್ಮವಾಗಿದೆ. ದುರಂತದಲ್ಲಿ ಬ್ರೆಜಿಲ್ ನ ವಿಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧ ಪಟ್ಟ ಬೆಲೆಕಟ್ಟಲಾಗದ ಸಂಪತ್ತು ನಾಶವಾಗಿದೆ ಎನ್ನಲಾಗಿದೆ

ಬ್ರೆಜಿಲ್ ನ ರಿಯೋ ಡಿ ಜನೈರೋ ನಗರದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಸುಟ್ಟು ಭಸ್ಮವಾಗಿದೆ. ಈ ದುರಂತದಿಂದಾಗಿ ಬ್ರೆಜಿಲ್ ನ ವಿಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧ ಪಟ್ಟ ಬೆಲೆಕಟ್ಟಲಾಗದ ಸಂಪತ್ತು ನಾಶವಾಗಿದೆ, ಎಂದು ವಸ್ತು ಸಂಗ್ರಹಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ದುರಂತಕ್ಕೆ ಬೇಸರ ವ್ಯಕ್ತಪಡಿಸಿರುವ ಬ್ರೆಜಿಲ್ ಅಧ್ಯಕ್ಷ ಮೈಕಲ್ ಟೆಮರ್ ದೇಶದ ಪಾಲಿಗೆ ಅತ್ಯಂತ ದುಃಖಕರವಾದ ಸಂಗತಿ ಎಂದಿದ್ದಾರೆ.

ಪುರಾತನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಡೈನೋಸಾರ್ ಪಳೆಯುಳಿಕೆ, ಪ್ರಾಚೀನ ಮಾನವನ ಅಸ್ತಿಪಂಜರ, ಅಮೆರಿಕಾದ ಮಾನವನ ಅತ್ಯಂತ ಹಳೆಯ ಅಂದರೆ 11500 ವರ್ಷ ಹಿಂದಿನ ಮಾನವ ಅವಶೇಷ, 1784ರಲ್ಲಿ ಬ್ರೆಜಿಲ್ ನಲ್ಲಿ ಪತ್ತೆಯಾದ 5,260 ಕಿಲೋಗ್ರಾಮ್ ತೂಕದ ಕಬ್ಬಿಣದ ಉಲ್ಕಾಶಿಲೆ, 1998ರಲ್ಲಿ ಪತ್ತೆಯಾದ ಮಿನಾಸ್ ಗೆರೈಸ್ನದಲ್ಲಿ ಪತ್ತೆಯಾದ, 80 ಮಿಲಿಯನ್ ವರ್ಷಗಳ ಹಿಂದೆ ಬ್ರೆಜಿಲ್ ನಲ್ಲಿ ಕೆಲವು ಪ್ರದೇಶದಲ್ಲಿ ವಾಸವಿದ್ದ ಸಸ್ಯತಿನ್ನುವ ದೈತ್ಯ ಡೈನೋಸಾರ್ ಅಸ್ಥಿಪಂಜರ, ಈಜಿಪ್ಟ್ ನ ಮಮ್ಮಿಗಳು, ಗ್ರೀಕೋ-ರೋಮನ್ ಪ್ರಾಚೀನ ವಸ್ತುಗಳು, ವಸ್ತುಸಂಗ್ರಹಾಲಯದ ಪುರಾತತ್ತ್ವ ಶಾಸ್ತ್ರ ವಿಭಾಗದ ಯೂರೋಪಿಯನ್ನರು ಪ್ರಾಚ್ಯ ಅಮೆರಿಕಾಕ್ಕೆ ಬಂದು ನೆಲೆಸಿದಕ್ಕೂ ಹಿಂದಿನ ಕಾಲಕ್ಕೆ ಸೇರಿದ 100,000 ಕ್ಕಿಂತಲೂ ಹೆಚ್ಚು ಕಲಾಕೃತಿಗಳ ಅಮೂಲ್ಯವಾದ ಸಂಗ್ರಹ ಸೇರಿದಂತೆ 20ಲಕ್ಷಕ್ಕೂ ಅಧಿಕ ಅಪರೂಪದ ಹಾಗೂ ಐತಿಹಾಸಿಕ ವಸ್ತುಗಳಿದ್ದವು.

ಪೋರ್ಚುಗೀಸರ ರಾಜ ಕುಟುಂಬಕ್ಕೆ ಆಶ್ರಯತಾಣವಾಗಿದ್ದ ಈ ವಸ್ತುಸಂಗ್ರಹಾಲಯವನ್ನು ವೈಜ್ಞಾನಿಕ ಸಂಶೋಧನೆಗಳ ವಿವರ ಕುರಿತ ವಸ್ತುಗಳನ್ನು ಸಂಗ್ರಹಿಸಲು 1818 ರಲ್ಲಿ ರಾಜಮನೆತನ ಸ್ಥಾಪಿಸಿತ್ತು.

ವಸ್ತು ಸಂಗ್ರಹಾಲಯ ನಿರ್ವಹಣೆ ಕೊರತೆ ಎದುರಿಸುತ್ತಿತ್ತು. ಬೆಂಕಿ ಆಕಸ್ಮಿಕ ಸಂಭವಿಸಿದರೆ ಅದನ್ನು ಶಮನ ಮಾಡುವ ಉಪಕರಣಗಳನ್ನು ಅಲ್ಲಿ ಅಳವಡಿಸಿರಲಿಲ್ಲ. ಸರ್ಕಾರವೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕಾರಣ ದುರಸ್ತಿ ಕಡೆಗೆ ಗಮನ ಕೊಟ್ಟಿರಲಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More