ನಿವೃತ್ತ ನ್ಯಾ.ಕೆ ಎಸ್‌ ಪುಟ್ಟಸ್ವಾಮಿ ಸಂದರ್ಶನ | ಐಪಿಸಿ ಮರುಪರಿಶೀಲನೆಗೆ ಇದು ಸಕಾಲ

ಆಧಾರ್‌ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ನಿವೃತ್ತ ನ್ಯಾ.ಕೆ ಎಸ್‌ ಪುಟ್ಟಸ್ವಾಮಿ ೨೦೧೨ರಲ್ಲಿ ಪಿಐಎಲ್‌ ಸಲ್ಲಿಸಿದ್ದರು. ಆಧಾರ್‌ ಕಡ್ಡಾಯಗೊಳಿಸುವ ಕ್ರಮ ಖಾಸಗಿ ಹಕ್ಕಿಗೆ ವಿರುದ್ಧವಾದ ನಿಲುವು ಎಂದು ೨೦೧೭ರ ಆಗಸ್ಟ್‌ ೨೪ರಂದು ಸುಪ್ರೀಂ ಕೋರ್ಟ್‌ ಚಾರಿತ್ರಿಕ ತೀರ್ಪು ಪ್ರಕಟಿಸಿತ್ತು. ಇದೇ ತೀರ್ಪನ್ನು ಆಧರಿಸಿ ಸಲಿಂಗಕಾಮದ ಪರವಾಗಿ ಗುರುವಾರ ಸರ್ವೋಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಇದರ ಕುರಿತು ೯೩ ವರ್ಷದ ಪುಟ್ಟಸ್ವಾಮಿ ಅವರು ‘ದಿ ಸ್ಟೇಟ್‌’ ಜೊತೆ ಮಾತನಾಡಿದ್ದಾರೆ.

ಮುಖ್ಯಾಂಶಗಳು

  • ಸೆಕ್ಷನ್‌ 377ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬಹುಶಃ ಸರಿಯಾದ ನಿರ್ಧಾರ ಕೈಗೊಂಡಿರಬಹುದು.
  • ತೀರ್ಪಿನ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಸಲಿಂಗಪ್ರೇಮದ ಸಾಧಕ-ಬಾಧಕ, ಸೆಕ್ಷನ್‌ 377 ಮಾನ್ಯತೆ ಬಗ್ಗೆ ಚರ್ಚಿಸುವ ಅವಶ್ಯಕತೆ ಇಲ್ಲ.
  • ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ. ಕೋರ್ಟ್‌ ತೀರ್ಪನ್ನು ಪಾಲಿಸಿವುದು ಅನಿವಾರ್ಯ.
  • ಎಲ್‌ಜಿಬಿಟಿ ಸಮುದಾಯದ ಹಕ್ಕಿಗೆ ಚ್ಯುತಿಯಾಗುವುದರಿಂದ ಕೋರ್ಟ್ ತೀರ್ಮಾನ ಕೈಗೊಂಡಿರುವ ಸಾಧ್ಯತೆ ಇದೆ.
  • ಸಲಿಂಗಪ್ರಮೇದ ತೀರ್ಪಿಗೆ ಖಾಸಗಿ ಹಕ್ಕಿನ ತೀರ್ಪು ಅಡಿಪಾಯ ಎಂಬುದನ್ನು ಒಪ್ಪಲು ನನಗೆ ಕಷ್ಟವಾಗುತ್ತದೆ.
  • ಸೆಕ್ಷನ್‌ 377ಗೆ ಭಾರತೀಯ ದಂಡಸಂಹಿತೆಯಲ್ಲಿ ವಿಶೇಷ ಮಾನ್ಯತೆ ಇದೆ. ಸುಮಾರು 200 ವರ್ಷಗಳ ಹಿಂದೆ ಥಾಮಸ್‌ ಮೆಕಾಲೆ ರಚಿಸಿದ ಐಪಿಸಿ ಅಂದಿನ ಕಾಲಕ್ಕೆ ಸರಿ ಇರಬಹುದು. ಹಲವು ದಶಕಗಳಿಂದ ಐಪಿಸಿಯಲ್ಲಿ ತಿದ್ದುಪಡಿಯಾಗಿಲ್ಲ.
  • ಪ್ರಪಂಚದಲ್ಲೇ ಐಪಿಸಿ ಅತ್ಯುತ್ತಮ ಕಾನೂನು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅದನ್ನು ಕಾಲಕ್ಕೆ ತಕ್ಕಂತೆ ಮರುಪರಿಶೀಲನೆ ನಡೆಸಿ, ರೂಪಿಸಬೇಕಿದೆ.
ಕಾಮನಬಿಲ್ಲು | ಕಂತು 2 | ಕೆಲ ಪೊಲೀಸರ ದೃಷ್ಟಿಯಲ್ಲಿ ಸಲಿಂಗಿಗಳು ಮನುಷ್ಯರೇ ಅಲ್ಲ
ಕಲಾವಿದ ಎಸ್ ಜಿ ವಾಸುದೇವ್‌ ಸಂದರ್ಶನ | ಆರು ದಶಕಗಳ ಕಲಾ ಬದುಕಿನ ಮೆಲುಕು
ಮುದ್ದಿ ಕಿ ಬಾತ್ | ಬೆಳಗಾವಿ ರಾಜಕಾರವೇ ರಾಜ್ಯ ರಾಜಕಾರಣ ಆದಂತಾಗಿದೆ!
Editor’s Pick More