ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!

ಭಾರಿ ಮಳೆಯಿಂದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿ ಶರಾವತಿ ನದಿಗೆ ನೀರು ಬಿಡಲಾಗಿತ್ತು. ಹೀಗಾಗಿ ಜೋಗ ಜಲಪಾತಕ್ಕೆ ಅಪಾರ ನೀರು ಹರಿದು ಎಲ್ಲರ ಗಮನ ಸೆಳೆದಿತ್ತು. ಆದರೆ ಈಗ, ಮಳೆಗಾಲ ಮುಗಿಯುವ ಮುನ್ನವೇ ಜೋಗ ಜಲಪಾತ ಸೊರಗಿದ್ದು, ಜನಾಕರ್ಷಣೆ ಕಳೆದುಕೊಳ್ಳತೊಡಗಿದೆ

  • ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರಿಂದ ಜಲಾಶಯದ ೧೧ ಗೇಟುಗಳನ್ನೂ ತೆರೆದು ಶರಾವತಿ ನದಿಗೆ ನೀರು ಬಿಡಲಾಗಿತ್ತು. ಹೀಗಾಗಿ ಜೋಗ ಜಲಪಾತ ಮೈದುಂಬಿ ಹರಿದು ಪ್ರವಾಸಿಗರಿಗೆ ಮುದ ನೀಡಿತ್ತು.
  • ವಿಶೇಷವೆಂದರೆ, ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಲಿಂಗನಮಕ್ಕಿ ಜಲಾಶಯದಿಂದ ಗೇಟ್ ತೆರೆದು ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು .
  • ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿಯಿಂದ ಅತಿ ಹೆಚ್ಚು ದಿನಗಳ ಕಾಲ ನೀರು ಬಿಟ್ಟ ಅಪರೂಪದ ವರ್ಷಗಳ ಸಾಲಿಗೂ ಈ ಬಾರಿಯ ಮುಂಗಾರು ಅವಧಿ ಸೇರಿದೆ.
  • 1964ರಿಂದ ಈವರೆಗೂ ಡ್ಯಾಂನ ಗೇಟ್‌ಗಳನ್ನು ಒಟ್ಟು 14 ಬಾರಿ ತೆರೆದು ನೀರು ಬಿಡಲಾಗಿದೆ.
  • ಆದರೆ, ಇದೀಗ ಜೋಗದ ಆ ಜಲವೈಭವದ ಬಳಿಕ ಕೇವಲ ಮೂವತ್ತು ದಿನದಲ್ಲೇ ಜಲಪಾತ ನೀರಿಲ್ಲದೆ ಸೊರಗಿದೆ.
  • ಮಲೆನಾಡಿನಲ್ಲಿ ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿರುವ ಮಳೆಯ ಕೊರತೆಗೆ ಜೋಗ ಜಲಪಾತ ಸಾಕ್ಷಿಯಾಗಿದೆ.
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More