ವೈರಲ್ ವಿಡಿಯೋ | ಸಮುದ್ರದಿಂದ ಮೇಲೆದ್ದ ಮರಳುಗುಡ್ಡೆ, ಪೊನ್ನನಿಯಲ್ಲಿ ಅಚ್ಚರಿ

ಕೇರಳದಲ್ಲಿ ಪ್ರವಾಹದಿಂದ ತತ್ತರಿಸಿದ್ದ ಮಲಪ್ಪುರಂ ನಿವಾಸಿಗಳಲ್ಲಿ ಇದೀಗ ಪೊನ್ನನಿ ಕಡಲ ತೀರದಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಅರ್ಧ ಕಿಲೋಮೀಟರ್ ಉದ್ದದ ಮರಳುಗುಡ್ಡೆ ದಿಡೀರ್ ಮೇಲೆದ್ದಿದ್ದು, ಈ ಅಚ್ಚರಿ ನೋಡಲು ಇದೀಗ ಪ್ರವಾಸಿಗರು ಪೊನ್ನನಿ ತೀರದೆಡೆಗೆ ಧಾವಿಸುತ್ತಿದ್ದಾರೆ

ಕೇರಳದ ಮಲಪ್ಪುರಂನ ಪೊನ್ನನಿ ಕಡಲ ತೀರದಲ್ಲಿ ಸಮುದ್ರ ಭಾಗವಾಗಿ ಅಚ್ಚರಿ ಮೂಡಿಸಿದೆ. ಸಮುದ್ರ ತೀರದಿಂದ ಅರ್ಧ ಕಿಲೋಮೀಟರ್‌ವರೆಗೂ ಮರಳು ಗುಡ್ಡ ನಿರ್ಮಾಣವಾಗಿದ್ದರಿಂದ, ಸಮುದ್ರ ಇಬ್ಭಾಗವಾದಂತೆ ಭಾಸವಾಗಿದೆ. ಭಾರಿ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಮಲಪ್ಪುರಂ ನಿವಾಸಿಗಳಲ್ಲಿ ಇದೀಗ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ಪ್ರವಾಹದಿಂದಾಗಿ ಭರತಪುರದಲ್ಲಿನ ಮರಳು ಕೊಚ್ಚಿ ಹೋಗಿ ಪೊನ್ನನಿ ಕಡಲ ತೀರದಲ್ಲಿ ಸಾಂಧ್ರಗೊಂಡಿರುವುದರಿಂದ ಪುಟ್ಟ ಮರಳು ದ್ವೀಪ ಹುಟ್ಟಿಕೊಂಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ದಿಡೀರನೆ ಉಂಟಾಗಿರುವ ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಜನ ಪೊನ್ನನಿ ಕಡಲ ತೀರದತ್ತ ಧಾವಿಸುತ್ತಿದ್ದು, ಕಡಲತೀರದ ರಕ್ಷಣಾ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More