ಅಪಹರಣ, ಹಲ್ಲೆ ಪ್ರಕರಣ; ಜೈಲುಪಾಲಾದ ನಟ ದುನಿಯಾ ವಿಜಯ್

ಜಿಮ್ ಟ್ರೇನರ್ ಮಾರುತಿ ಗೌಡ ಎಂಬುವರ ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಬಂಧನಕ್ಕೊಳಗಾಗಿದ್ದು, ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರುತಿ, ನಟ ವಿಜಯ್‌ಗೆ ಈ ಹಿಂದೆ ಜಿಮ್ ಟ್ರೇನರ್ ಆಗಿದ್ದ ಪಾನಿಪುರಿ ಕಿಟ್ಟಿಯ ಸಹೋದರನ ಮಗ

ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ದೇಹದಾರ್ಢ್ಯ ಸ್ಪರ್ಧೆಗೆ ನಟ ದುನಿಯಾ ವಿಜಯ್ ಅತಿಥಿಯಾಗಿ ತೆರಳಿದ್ದರು. ಕಾರ್ಯಕ್ರಮದ ಕೊನೆಯ ಹಂತದವರೆಗೆ ಎಲ್ಲವೂ ಸಹಜವಾಗಿಯೇ ನಡೆದಿದೆ. ಕೆಲ ಸಮಯದ ನಂತರ, ಜಿಮ್ ಟ್ರೇನರ್ ಮಾರುತಿ ಗೌಡ ಹಾಗೂ ನಟ ವಿಜಯ್ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ತಾರಕಕ್ಕೇರಿದೆ. ನಟ ವಿಜಯ್ ಹಾಗೂ ಜೊತೆಗಾರರು ಮಾರುತಿ ಮೇಲೆ ಹಲ್ಲೆ ನಡೆಸಿದ್ದು,  ನಂತರ ಆತನನ್ನು ಅಪಹರಿಸಿಕೊಂಡು ಹೋಗಿ ಮಾರ್ಗಮಧ್ಯೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಹಲ್ಲೆಗೊಳಗಾದ ಮಾರುತಿ ಗೌಡ, ನಟ ವಿಜಯ್ ಅವರಿಗೆ ಈ ಹಿಂದೆ ಜಿಮ್ ಟ್ರೇನರ್ ಆಗಿದ್ದ ಪಾನಿಪುರಿ ಕಿಟ್ಟಿ ಅವರ ಸಹೋದರನ ಮಗನಾಗಿದ್ದು, ನಟರಾದ ಯಶ್, ಪ್ರೇಮ್ ಸೇರಿದಂತೆ ಚಿತ್ರರಂಗದ ಹಲವರಿಗೆ ಫಿಟ್ನೆಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ, 2016ರ ದೇಹದಾರ್ಢ್ಯ ಸ್ಪರ್ಧೆ ಗೆಲ್ಲುವ ಮೂಲಕ ‘ಮಿಸ್ಟರ್ ಬೆಂಗಳೂರು’ ಪಟ್ಟ ಗಿಟ್ಟಿಸಿಕೊಂಡಿದ್ದರು.

ಇದನ್ನೂ ಓದಿ : ಟೀಸರ್‌ | ರಾಘು ಶಿವಮೊಗ್ಗ ನಿರ್ದೇಶನದಲ್ಲಿ ದುನಿಯಾ ವಿಜಯ್ ‘ಕುಸ್ತಿ’ ಸಿನಿಮಾ

ಮಾರುತಿ ಚಿಕ್ಕಪ್ಪ ಪಾನಿಪುರಿ ಕಿಟ್ಟಿ, ಹೈಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಿನ್ನೆ ರಾತ್ರಿಯೇ ಹೈಗ್ರೌಂಡ್ ಠಾಣೆಯ ಪೋಲಿಸರು ನಟ ವಿಜಯ್‌ರನ್ನು ಬಂಧಿಸಿ ಅಪಹರಣ ಹಾಗೂ ಮಾರಣಾಂತಿಕ ಹಲ್ಲೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 365, 342, 325 ಹಾಗೂ 506ರ ಅಡಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಹಲ್ಲೆಗೊಳಗಾದ ಮಾರುತಿ ಗೌಡ ಸದ್ಯ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More