ಮಡದಿ ಕಣ್ತಪ್ಪಿಸಿ ತಿನಿಸು ಕೊಂಡೊಯ್ಯುವಾಗ ಸೆರೆಸಿಕ್ಕ ರಾಜಕುಮಾರ ಹ್ಯಾರಿ!

ಸಿಕ್ಕಾಪಟ್ಟೆ ಹಸಿವಾಗಿತ್ತೋ ಅಥವಾ ಆ ತಿನಿಸು ಆತನ ಬಾಯಲ್ಲಿ ನೀರೂರುವಂತೆ ಮಾಡಿತ್ತೋ ಗೊತ್ತಿಲ್ಲ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಜಕುಮಾರ ಹ್ಯಾರಿ, ಮೆತ್ತಗೆ ತಿನಿಸ್ಸೊಂದನ್ನು ಗುಟ್ಟಾಗಿ ಹಿಡಿದುಕೊಂಡು ಸಾಗುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ

ಯಾವುದಾದರೂ ಪಾರ್ಟಿಗೆ ಹೋದಾಗ ನಮಗಿಷ್ಟವಾದ ಆಹಾರವಿದ್ದರೆ ಅದನ್ನು ಕಟ್ಟಿಕೊಂಡು ಬರುವುದು ಅಥವ ಸ್ಪಲ್ಪ ಹೆಚ್ಚಾಗಿ ಹಾಕಿಸಿಕೊಂಡು ತಿನ್ನುವುದು ಸಾಮಾನ್ಯ. ಆದರೆ ರಾಜಕುಮಾರನೊಬ್ಬ ಗುಟ್ಟಾಗಿ ತನಗಿಷ್ಟದ ತಿನಸೊಂದನ್ನು ಗುಟ್ಟಾಗಿ ಹಿಡಿದುಕೊಂಡು ಬಂದರೆ ಹೇಗಿರಬೇಡ? ಇತ್ತೀಚೆಗೆ ಲಂಡನ್ ನ ಕೆನ್ಸಿಂಗ್ಟನ್ ಪ್ಯಾಲೇಸ್ ನಲ್ಲಿ ಮೆಘನ್ ಮಾರ್ಕೆಲ್ ಅವರು ತಮ್ಮ ಮೊದಲ ಚಾರಿಟಿ ಯೋಜನೆಯ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆ ಆಯೋಜಿಸಿದ್ದರು. ಈ ಸಮಯ ಅಲ್ಲಿಗೆ ತೆರಳಿರುವ ಪತಿ ರಾಜಕುಮಾರ ಹ್ಯಾರಿ, ಮೆತ್ತಗೆ ತಮಗಿಷ್ಟವಾದ ತಿನಿಸನ್ನು ನ್ಯಾಪ್ಕಿನ್ ನಲ್ಲಿ ಸುತ್ತಿಕೊಂಡು ಗುಟ್ಟಾಗಿ ಬಂದಿದ್ದಾರೆ. ಎಲ್ಲರ ಕಣ್ಣುತಪ್ಪಿಸಿ ಕೈ ಮರೆಯಲ್ಲಿ ತಂದರೂ, ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರೂ, ಪ್ರಿನ್ಸ್ ಸರಳತೆಯನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More