ವೈರಲ್ ವಿಡಿಯೋ | ಚುನಾವಣೆ ವೇಳೆ ನಾವು ನೀಡಿದ್ದು ಸುಳ್ಳು ಭರವಸೆ ಎಂದ ಗಡ್ಕರಿ

ಸುಳ್ಳು ಆಶ್ವಾಸನೆಗಳಿಂದಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ವೇಳೆ ನಿತಿನ್ ಗಡ್ಕರಿ ನೀಡಿದ ಹೇಳಿಕೆಯ ವಿಡಿಯೋ ತುಣುಕು ಇದೀಗ ವೈರಲ್ ಆಗಿದ್ದು, ವಿರೋಧ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ

ನಾವು ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ನಾವಿದ್ದೆವು. ಹೀಗಾಗಿ ನಮಗೆ ಸುಳ್ಳು ಭರವಸೆಗಳು ನೀಡುವಂತೆ ಸಲಹೆ ಕೊಟ್ಟರು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂದರ್ಶನದಲ್ಲಿ ಹೇಳಿರುವ ವಿಡಿಯೋ ವೈರಲ್ ಆಗುವ ಮೂಲಕ ಇದೀಗ ಕೇಂದ್ರದ ಬಿಜೆಪಿ ನಾಯಕನ್ನು ಮುಜುಗರಕ್ಕೀಡು ಮಾಡಿದೆ.

ಖಾಸಗಿ ಚಾನೆಲ್ ನ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ನಾನಾ ಪಾಟೇಕರ್ ಜೊತೆ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ನಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ವಿಶ್ವಾಸದಲ್ಲಿದ್ದೆವು. ಹೀಗಾಗಿ ಸುಳ್ಳು ಭರವಸೆಗಳನ್ನು ನೀಡಿದ್ದೇವು. ಯಾಕೆಂದರೆ ನಾವು ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಭರವಸೆಗಳ ಬಗ್ಗೆ ಯೋಚಿಸಬೇಕಿಲ್ಲ ಎಂಬುದು ನಮ್ಮ ಪಕ್ಷದ ಜನರ ಚಿಂತನೆಯಾಗಿತ್ತು. ಆದರೆ ಸಮಸ್ಯೆ ಎಂದರೆ ಜನರು ನಮಗೆ ಮತ ಹಾಕಿದರು ಎಂದು ಜೋರಾಗಿ ನಗುತ್ತಾರೆ. ಈಗ ನಾವು ಅಧಿಕಾರದಲ್ಲಿದ್ದೇವೆ. ನಾವು ಆಗ ನೀಡಿದ್ದ ಭರವಸೆಗಳನ್ನು ಜನರು ನಮಗೆ ನೆನಪಿಸುತ್ತಿದ್ದಾರೆ. ಆದರೆ, ಈಗ ನಾವು ಸುಮ್ಮನೆ ನಕ್ಕು ಮುಂದುವರಿಯುತ್ತೇವೆ ಎಂದು ಗಡ್ಕರಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಗಡ್ಕರಿ ಅವರ ಈ ವಿಡಿಯೋವನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ನೀವು ಹೇಳಿದ್ದು ನಿಜ, ಪಕ್ಷವು ಅಧಿಕಾರಕ್ಕೆ ಬರಲು ಬಿಜೆಪಿ ತಮ್ಮ ಕನಸುಗಳನ್ನು ಮತ್ತು ನಂಬಿಕೆಗಳನ್ನು ಬಳಸಿಕೊಂಡಿತ್ತು ಎಂಬುದನ್ನು ಜನರು ಕೂಡ ಯೋಚಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More