ವಿಡಿಯೋ ಸ್ಟೋರಿ | ಜನಮನ ಸೆಳೆದ ಮೈಸೂರು ದಸರೆಯ ಫಲ-ಪುಷ್ಪ ಪ್ರದರ್ಶನ

ದಸರೆಯ ಸಂಭ್ರಮದಲ್ಲಿರುವ ಮೈಸೂರಿನಲ್ಲಿ ಜನಮನ ಸೆಳೆಯುತ್ತಿರುವ ಹಲವು ತಾಣಗಳಲ್ಲಿ ಕುಪ್ಪಣ್ಣ ಉದ್ಯಾನ- ನಿಶಾದ್ ಬಾಗ್ ಕೂಡ ಒಂದು. ಇಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಹೂವುಗಳ ಅದ್ಭುತ ಲೋಕ ಅನಾವರಣಗೊಂಡಿದೆ

ದಸರೆಯ ಸಂಭ್ರಮದಲ್ಲಿರುವ ಮೈಸೂರಿನಲ್ಲಿ ಜನಮನ ಸೆಳೆಯುತ್ತಿರುವ ಹಲವು ತಾಣಗಳಲ್ಲಿ ಕುಪ್ಪಣ್ಣ ಉದ್ಯಾನ- ನಿಶಾದ್ ಬಾಗ್ ಕೂಡ ಒಂದು. ಇಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲ-ಪುಷ್ಪ ಪ್ರದರ್ಶನದಲ್ಲಿ ಹೂವುಗಳ ಅದ್ಭುತ ಲೋಕ ಅನಾವರಣಗೊಂಡಿದೆ. ಸಾವಿರಾರು ಬಗೆಯ ಹೂವುಗಳು ಮತ್ತು ಹೂಗಳಿಂದಲೇ ರೂಪುಗೊಂಡಿರುವ ಆಕೃತಿಗಳು ಗಮನ ಸೆಳೆಯುತ್ತಿವೆ.

ಉದ್ಯಾನದಲ್ಲಿ ಹೊಸದಾಗಿ ನಿರ್ಮಿಸಿರುವ ಗಾಜಿನ ಮನೆಯಲ್ಲಿ ಸುಮಾರು ೨ ಲಕ್ಷ ಗುಲಾಬಿ, ಸೇವಂತಿಗೆ ಮತ್ತಿತರ ಹೂವುಗಳನ್ನು ಬಳಸಿ ನಿರ್ಮಿಸಿರುವ 'ಲೋಟಸ್ ಮಹಲ್' (ಕಮಲ ಮಹಲ್) ಪ್ರದರ್ಶನದ ಪ್ರಧಾನ ಆಕರ್ಷಣೆ. ಹುಬ್ಬಳಿಯ ಕಲಾವಿದ ಶಿವಲಿಂಗಪ್ಪ ಬಡಿಗೇರ್ ನವಣೆ, ಸಜ್ಜೆ, ರಾಗಿ, ಜೋಳ, ಅಕ್ಕಿ ಮತ್ತಿತರ ಸಿರಿ ಧಾನ್ಯಗಳನ್ನು ಬಳಸಿ ರೂಪಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಕಾವೇರಿ ಮಾತೆ ಮತ್ತು ವಿಶ್ವೇಶ್ವರಯ್ಯ ಪ್ರತಿಮೆಗಳು ಮನ ಸೆಳೆಯುತ್ತಿವೆ. ಅರಮನೆ ಬಲರಾಮ ದ್ವಾರ, ಆನೆ, ಫಿರಂಗಿ ಗಾಡಿ, ಅಮರ್ ಜವಾನ್ ಸ್ತಂಭ, ಆಶೋಕ ಸ್ತಂಭ, ಪೆಂಗ್ವಿನ್, ಡಾಲ್ಫಿನ್, ಟಿ ಕೆಟಲ್, ಹೆಲ್ಪಿಂಗ್ ಹ್ಯಾಂಡ್ ಮುಂತಾದ ಆಕೃತಿಗಳನ್ನು ಬಗೆ ಬಗೆಯ ಹೂವು, ಎಲೆಗಳನ್ನು ಬಳಸಿ ರೂಪಿಸಲಾಗಿದೆ.

ಬಣ್ಣಬಣ್ಣದ ಹೂವು ಮತ್ತು ಹೂವಿನ ಆಕೃತಿ ಗಳ ಮುಂದೆ ಹೆಂಗಳೆಯರ ಸೆಲ್ಫಿ ಸಂಭ್ರಮ, ಮಕ್ಕಳ ಕಲರವ ನಿಶಾದ್ ಬಾಗ್‌ನಲ್ಲಿ ಅನುರಣಿಸುತ್ತಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More