ಹಿಂದೂಸ್ಥಾನಿ ಸಂಗೀತಲೋಕದ ದಿಗ್ಗಜೆ ಅನ್ನಪೂರ್ಣ ದೇವಿ ವಿಧಿವಶ

ವಯೋಸಹಜ ಸಮಸ್ಯೆಯಿಂದ ಬಳಸುತ್ತಿದ್ದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ವಾಂಸೆ ಅನ್ನಪೂರ್ಣ ದೇವಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ (ಅ.13) ಬೆಳಗ್ಗೆ ವಿಧಿವಶರಾಗಿದ್ದಾರೆ. ಅನ್ನಪೂರ್ಣ ದೇವಿ ಅವರ ಸಂಗೀತದ ಅಪರೂಪದ ವಿಡಿಯೋ ತುಣುಕುಗಳು ಇಲ್ಲಿವೆ

ವಯೋಸಹಜ ಸಮಸ್ಯೆಯಿಂದ ಬಳಸುತ್ತಿದ್ದ ಹಿಂದೂಸ್ಥಾನಿ ಸಂಗೀತ ವಿದ್ವಾಂಸೆ ಅನ್ನಪೂರ್ಣ ದೇವಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಅನ್ನಪೂರ್ಣದೇವಿ, ಮಧ್ಯಪ್ರದೇಶದ ಮೈಹರ್ ನಗರದ ಪ್ರಖ್ಯಾತ ಸಂಗೀತ ದಿಗ್ಗಜ ಉಸ್ತಾದ್ ಬಾಬಾ ಅಲ್ಲಾವುದ್ದಿನ್ ಖಾನ್ ಮತ್ತು ಮದೀನಾ ಬೇಗಂರ ನಾಲ್ಕನೇ ಪುತ್ರಿ. ಅನ್ನಪೂರ್ಣ ದೇವಿ ಅವರನ್ನು ಎಲ್ಲರೂ ಪ್ರೀತಿಯಿಂದ ಎಲ್ಲರೂ 'ಮಾ' ಎಂದೇ ಕರೆಯುತ್ತಿದ್ದರು.

ಭಾರತೀಯ ಸಂಗೀತ ಜಗತ್ತು ಕಂಡ, ಅದರಲ್ಲೂ ಸಿತಾರ್ ಹಾಗೂ ಸುರ್ಬಹಾರ್ ವಾದ್ಯಗಳ ಅತ್ತುತ್ತಮ ವಾದಕಿ ಎಂಬ ಹೆಗ್ಗಳಿಕೆಯೂ ಅನ್ನಪೂರ್ಣ ದೇವಿ ಅವರಿಗಿದೆ.

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More